ಮಳೆಯಿಂದ ಮಲೆನಾಡು ಕಂಗಾಲಾಗಿದ್ದು ಇದೀಗ ಇಲ್ಲಿನ ಜನರಲ್ಲಿ ಮತ್ತೊಂದು ಆತಂಕ ಎದುರಾಗಿದೆ.
ಚಿಕ್ಕಮಗಳೂರು [ಸೆ.11]: ಮನೆನಾಡಲ್ಲಿ ಭಾರೀ ಮಳೆ ಸುರಿದು ಜನರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಇಲ್ಲಿ ಕಳ್ಳ ಕಾಕರ ಹಾವಳಿಯೂ ಕೂಡ ಹೆಚ್ಚಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆಯ ಮಣ್ಣಿಕರೆಯಲ್ಲಿ ವೃದ್ಧೆಯೋರ್ವರ ಸರಗಳ್ಳತನ ನಡೆದಿದೆ.
undefined
ಮಣ್ಣಿಕೆರೆಯ ಗ್ರಾಮದ ಮೀನಾಕ್ಷಿ (65) ಎಂಬುವವರ ಸರ ಕಸಿದುಕೊಂಡು ಖದೀಮರು ಪರಾರಿಯಾಗಿದ್ದಾರೆ. ಮನೆ ಮುಂದೆಯೇ ಸರಗಳ್ಳತನ ನಡೆದಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಹಿನ್ನೆಲೆ ಸ್ಥಳಕ್ಕೆ ಪೊಲೀಸರು, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.