ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿಗೆ ಮೆಚ್ಚುಗೆ

Published : Sep 02, 2019, 11:51 AM IST
ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿಗೆ ಮೆಚ್ಚುಗೆ

ಸಾರಾಂಶ

ಪ್ರವಾಹದಿಂದ ತತ್ತರಿಸಿದ ಜನರತ್ತ ತಿರುಗಿ ನೋಡದ ಸಾಹುಕಾರ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೇ ವೇಳೆ ಸತೀಶ್ ಜಾರಕಿಹೊಳಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ (ಸೆ.02) : ಕಳೆದ ತಿಂಗಳು ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಹಲವು ಜಿಲ್ಲೆಗಳು ತತ್ತರಿಸಿದ್ದು, ಆದರೂ ಕೂಡ ತಮ್ಮ ಕ್ಷೇತ್ರದ ಜನರತ್ತ ರಮೇಶ್ ಜಾರಕಿಹೊಳಿ ತಿರುಗಿ ನೋಡುತ್ತಿಲ್ಲ. 

ಗೋಕಾಕ್ ಕ್ಷೇತ್ರದಲ್ಲಿ 5000ಕ್ಕೂ ಹೆಚ್ಚು ಮನೆಗಳು ಉರುಳಿದ್ದು, ಪ್ರವಾಹದಿಂದ ತತ್ತರಿಸಿದ ಸಂತ್ರಸ್ತರಿಗೆ ಸಾಂತ್ವನ ಹೇಳದ ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. 

ಕಳೆದ 5 ಬಾರಿ ಜನರಿಂದ ಆಯ್ಕೆಯಾದ ಜಾರಕಿಹೊಳಿ ಇದೀಗ ತಮ್ಮ ರಾಜಕೀಯ ಅತೃಪ್ತತೆ ನಡೆಯಿಂದ ಅನರ್ಹರಾಗಿದ್ದ, ಸದ್ಯ ಕೇದಾರನಾಥನ ಮೊರೆ ಹೋಗುತ್ತಿದ್ದಾರೆ. ಮನೆ ಮಠ ಕಳೆದುಕೊಂಡ ಜನರ ಸಂಕಷ್ಟಕ್ಕೆ ಸ್ಪಂದಿಸದೇ ತಮ್ಮ ರಾಜಕೀಯದತ್ತ ಗಮನ ಹರಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಾಂತ್ವನ ಹೇಳಿದ ಸತೀಶ್ ಜಾರಕಿಹೊಳಿಗೆ, ರಮೇಶ್ ಜಾರಕಿಹೊಳಿ ಕ್ಷೇತ್ರವಾದ ಗೋಕಾಕ್ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌