* ಬೆಳಗಾವಿ ಭೇಟಿ ಕೊಟ್ಟ ಗೋವಾ ಸಿಎಂ
* ಬಿಗಿ ಭದ್ರತೆಯಲ್ಲಿ ದೇವಿ ದರ್ಶನ
* ಮಾಧ್ಯಮದವರಿಗೂ ಪ್ರವೇಶ ಇಲ್ಲ
* ಮಹಾದಾಯಿ ಹೋರಾಟದ ಬಿಸಿಯಿಂದ ಲಘುಬಗೆಯಿಂದ ತೆರಳಿದರು
ಬೆಳಗಾವಿ(ಸೆ. 02) ಗೋವಾ ಸಿಎಂ ಸಹ ಕರ್ನಾಟಕ ಪ್ರವಾಸದಲ್ಲಿದ್ದರು. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬೆಳಗಾವಿಯೆ ತಿನಸು ಕಟ್ಟೆಗೆ ಭೇಟಿ ಕೊಟ್ಟಿದ್ದರು.
ಶಾಸಕ ಅಭಯ ಪಾಟೀಲ ಇವರಿಂದ ತಿನಸು ಕಟ್ಟೆ ಹಾಗೂ ರಾಜ್ಯಗಳ ಮತ್ತು ದೇಶಿ ತಿನಸುಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಇದೇ ರೀತಿ ಗೋವಾ ರಾಜ್ಯದಲ್ಲಿಯೂ ಒಂದು ತಿನಿಸು ಕಟ್ಟೆ ನಿರ್ಮಿಸಲಾಗುತ್ತದೆ ಎಂದರು.
ಗೋವಾದಲ್ಲಿ ಶವವಾಗಿ ಪತ್ತೆಯಾದ ರಷ್ಯಾದ ಸುಂದರಿ
ಯಲ್ಲಮ್ಮ ದೇವಿ ದರ್ಶನ: ಸವದತ್ತಿ ಯಲ್ಲಮ್ಮ ದೇವಿ ದರ್ಶನವನ್ನು ಪ್ರಮೋದ್ ಸಾವಂತ್ ಪಡೆದುಕೊಂಡರು ಕಳೆದ ಎರಡು ವರ್ಷದಿಂದ ಬಂದ್ ಆಗಿರುವ ರೇಣುಕಾ ಯಲ್ಲಮ್ಮ ದೇವಸ್ಥಾನ ಗೋವಾ ಸಿಎಂ ಪ್ರಮೋದ್ ಸಾವಂತ್ ಆಗಮಿಸುತ್ತಿದ್ದಂತೆ ಓಪನ್ ಆಯಿತು!
ಮಾಧ್ಯಮದವರನ್ನೂ ದೇವಸ್ಥಾನದ ಆವರಣದೊಳಗೆ ಬಿಟ್ಟುಕೊಳ್ಳಲಿಲ್ಲ. ಗೋವಾ ಸಿಎಂಗೆ ಸ್ಥಳೀಯ ಶಾಸಕ ಆನಂದ ಮಾಮನಿ ಸಾಥ್ ನೀಡಿದ್ದರು. ಮಹದಾಯಿ ವಿವಾದ ಹಿನ್ನಲೆ ರೈತರು ಮುತ್ತಿಗೆ ಹಾಕುವ ಸಾಧ್ಯತೆ ಇದ್ದುದರಿಂದ ಬಿಗಿ ಭದ್ರತೆಯಲ್ಲಿ ದೇವಿ ದರ್ಶನ ಪಡೆದು ತೆರಳಿದರು.