Mysuru : ಬಿಜೆಪಿ ಟಿಕೆಟ್‌ಗೆ ಗೋ. ಮಧುಸೂದನ್ ಆಕಾಂಕ್ಷಿ

By Kannadaprabha NewsFirst Published Oct 11, 2021, 1:11 PM IST
Highlights
  • ವಿಧಾನಪರಿಷತ್ತಿಗೆ ದಕ್ಷಿಣ ಪದವೀಧರರ ಕ್ಷೇತ್ರದಿಂದ ನಡೆಯುವ ಚುನಾವಣೆ
  •  ಬಿಜೆಪಿ ಟಿಕೆಟ್‌ಗೆ ಪದವೀಧರರ  ಕ್ಷೇತ್ರದಿಂದ ಗೋ. ಮಧುಸೂದನ ಅವರು ಆಕಾಂಕ್ಷಿ

 ಮೈಸೂರು (ಅ.11):  ವಿಧಾನಪರಿಷತ್ತಿಗೆ (Legislative council)  ದಕ್ಷಿಣ ಪದವೀಧರರ ಕ್ಷೇತ್ರದಿಂದ (South Graduates Constituency ) ನಡೆಯುವ ಚುನಾವಣೆಗೆ (Election) ಬಿಜೆಪಿ (BJP) ಟಿಕೆಟ್‌ಗೆ ಪದವೀಧರರ ನೊಂದಣಿ ಕಾರ್ಯದ ಮೂಲಕ ಗೋ. ಮಧುಸೂದನ (Go Madhusoodhan) ಅವರು ಆಕಾಂಕ್ಷಿ ಎಂಬುದನ್ನು ತೋರಿಸಿದ್ದಾರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ತೋಂಟದಾರ್ಯ ತಿಳಿಸಿದರು.

ಜಿಆರ್‌ಎಸ್‌  ಫ್ಯಾಂಟಸಿ ಫಾರ್ಕ್ನಲ್ಲಿ (GRS Park) ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ. ಮಧುಸೂದನ ನೇತೃತ್ವದಲ್ಲಿ ಭಾನುವಾರ ನಡೆದ ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಕಾಂಗ್ರೆಸ್‌ ಪಕ್ಷದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿ ಎಂದ ಮುಖಂಡ

ಗೋ. ಮಧುಸೂದನ ಅವರಲ್ಲಿ ಬಿಜೆಪಿ ಅಭ್ಯರ್ಥಿ ಆಗಬೇಕೆನ್ನುವ ಆಕಾಂಕ್ಷೆ ಇದೆ. ಹಾಗೆಯೇ, ಅನೇಕರಲ್ಲಿ ಆ ಭಾವನೆ ಸ್ವಾಭಾವಿಕವಾಗಿಯೇ ಇದೆ. ಹೀಗಾಗಿ ಅನೇಕರು ಬಿಜೆಪಿ ಟಿಕೆಟ್‌ (BJP Ticket) ಆಕಾಂಕ್ಷಿಗಳಿರುವುದು ಸ್ಪಷ್ಟವಾಗಿದೆ. ಕೆಲವರು ಈಗಾಗಲೇ ಪದವೀಧರರ ಭೇಟಿ ಮಾಡಿ, ನೊಂದಣಿ ಮಾಡಿಸುವ ಪ್ರಯತ್ನ ನಡೆಸುತ್ತಾ ಪ್ರಬಲ ಆಕಾಂಕ್ಷಿಗಳು ಎನ್ನುತ್ತಿದ್ದಾರೆ. ಆದರೆ, ಗೋ. ಮಧುಸೂದನ ಅವರು ಚುನಾವಣಾ ಆಯೋಗದ ನೋಟಿಫಿಕೇಷನ್‌ (Notification) ಆದ ಬಳಿಕ ನೋಂದಣಿಗೆ ಮುಂದಾಗುವ ಮೂಲಕ ತಾವು ಆಕಾಂಕ್ಷಿ ಎಂದು ಮುನ್ನೆಲೆಗೆ ಬಂದಿದ್ದಾರೆ. ಆದರೆ, ಪಕ್ಷ ಇನ್ನೂ ಅಭ್ಯರ್ಥಿಗಳನ್ನು (Candidates) ಘೋಷಿಸಿಲ್ಲ. ಮುಂದಿನ ದಿನಗಳಲ್ಲಿ ಘೋಷಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

2022ರ ಜೂನ್‌ನಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಮೈಸೂರು (Mysuru), ಹಾಸನ (Hassan), ಮಂಡ್ಯ (Mandya), ಚಾಮರಾಜನಗರ (chamarajanagar) ವಿಶಾಲ ನಾಲ್ಕೂ ಜಿಲ್ಲೆಗಳಲ್ಲಿರುವ ಪದವೀಧರರು ಮತದಾರರು ಮತದಾನ ಮಾಡಲು ಅವಕಾಶವಿದೆ. ನೊಂದಣಿಯಾದ ಎಲ್ಲಾ ಪದವೀಧರರೂ ಮತದಾನ ಮಾಡಲು ಅವಕಾಶವಿದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ. ಮಾದೇಗೌಡರು (D Madegowda) ಮಾತನಾಡಿ, ಮಧುಸೂದನರವರ ಸಾರ್ವಜನಿಕ ಜೀವನದ ಬಗ್ಗೆ ಕೇಳಿದ್ದೀರಿ. ತಾವು ನಂಬಿದ ತತ್ವ ಸಿದ್ಧಾಂತಗಳ ಮೇಲೆ ಅವರೆಷ್ಟುಕಟುವಾಗಿ ವಾದ ಮಾಡುತ್ತಾರೆಂದು ನೋಡಿದ್ದೇನೆ. ಯಾವತ್ತೂ ಕೂಡ ದೇಶಭಕ್ತಿ, ದೇಶನಿಷ್ಠೆ, ಪ್ರಾಮಾಣಿಕತೆಗೆ ಕುಂದು ಬರದಂತೆ ಸಾರ್ವಜನಿಕ ಜೀವನವನ್ನು ನಡೆಸಿದಂತಹವರಾಗಿದ್ದಾರೆ ಎಂದು ಹೇಳಿದರು.

ಪದವೀದರರು ನೋಂದಣಿ ಮಾಡಿಸಬೇಕು. ಯಾರಾದರೂ ಅಭ್ಯರ್ಥಿಯಾಗಿ ತಮ್ಮ ಅಭ್ಯರ್ಥಿಗಳ ಗೆಲ್ಲಬೇಕು ಅನ್ನೋ ಛಲದಿಂದ ನಾವು ನೋಂದಣಿ ಮಾಡಿಸಿಕೊಳ್ಳಬೇಕು. ಈ ನಾಲ್ಕು ಜಿಲ್ಲೆಯ ಒರ್ವ ಪದವೀಧರನೂ ನೊಂದಣಿಯಿಂದ ದೂರ ಉಳಿಯದಂತೆ ನೋಡಿಕೊಂಡರೆ ಗೆಲುವು ನಮ್ಮದಾಗಲಿದೆ ಎಂದರು.

ಇದೇ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ (Education Department) ನಿವೃತ್ತ ನಿರ್ದೇಶಕ ಎಚ್‌.ಎಸ್‌. ರಾಮರಾವ್‌, ನಿವೃತ್ತ ನಿರ್ದೇಶಕ ಬಿ.ಕೆ. ಬಸವರಾಜು, ನಿವೃತ್ತ ಡಿಡಿಪಿಯು ಕೆ.ಎಂ. ಪುಟ್ಟು ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ. ಮಧುಸೂದನ ಮೊದಲಾದವರು ಇದ್ದರು.

click me!