Mysuru : ನಿಮ್ಮ ಬೆಂಬಲ ನೀಡಿ ಶಾಸಕನನ್ನಾಗಿ ಮಾಡಿ : ರವಿಶಂಕರ್‌

By Kannadaprabha News  |  First Published Jan 2, 2023, 6:08 AM IST

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದ್ದು, ನಿಮ್ಮಗಳ ಆರ್ಶೀವಾದ, ಸಂಪೂರ್ಣ ಬೆಂಬಲವನ್ನು ನನಗೆ ನೀಡಿ ಶಾಸಕನಾಗಿ ಆಯ್ಕೆ ಮಾಡಿ ಎಂದು ಕಾಂಗ್ರೆಸ್‌ ಮುಖಂಡ ಡಿ. ರವಿಶಂಕರ್‌ ಮನವಿ ಮಾಡಿದರು.


 ಭೇರ್ಯ (ಡಿ.02):  ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದ್ದು, ನಿಮ್ಮಗಳ ಆರ್ಶೀವಾದ, ಸಂಪೂರ್ಣ ಬೆಂಬಲವನ್ನು ನನಗೆ ನೀಡಿ ಶಾಸಕನಾಗಿ ಆಯ್ಕೆ ಮಾಡಿ ಎಂದು ಕಾಂಗ್ರೆಸ್‌ ಮುಖಂಡ ಡಿ. ರವಿಶಂಕರ್‌ ಮನವಿ ಮಾಡಿದರು.

ಭೇರ್ಯ ಗ್ರಾಮದ ಆದಿಜಾಂಬವ ಬಡಾವಣೆಯಲ್ಲಿ ಸ್ವಾಗತ ಆಚ್‌ರ್‍ಗೆ ಗುದ್ದಲಿ ಪೂಜೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Latest Videos

undefined

ರಾಜ್ಯದಲ್ಲಿ ಐದು ವರ್ಷ ಸುದೀರ್ಘವಾದ ಆಡಳಿತ ಕೊಟ್ಟಿದ್ದು ದಿವಂಗತ ಡಿ. ಅವರನ್ನು ಬಿಟ್ಟರೆ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು. ಅವರು ಮುಖ್ಯಮಂತ್ರಿಆಗಿದ್ದಾಗ ಸಮುದಾಯ ಭವನಗಳಿಗೆ ಹಾಗೂ ರಸ್ತೆಗಳಿಗೆ ಅನುದಾನ ತರಲಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ ಎಂದು ಹೇಳಿದರು.

ಭೇರ್ಯ, ಮಿರ್ಲೆ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಮುಖಂಡ ಸಿ.ಪಿ. ರಮೇಶ್‌ ಕುಮಾರ್‌ ನನ್ನ ಪರವಾಗಿ ವಿವಿಧ ಜನಪರ ಅಭಿವೃದ್ಧಿ ಕಾರ್ಯಕ್ರಮದ ಜೊತೆಗೆ ನೊಂದವರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್‌ ಬಲವರ್ಧನೆಗೆ ಸಾಕಷ್ಟುದುಡಿದಿದ್ದಾರೆ. ಮುಂದೆ ಯಾವುದೇ ಸಂಕಷ್ಟ, ಮಕ್ಕಳ ಶಿಕ್ಷಣ ಸೇರಿದಂತೆ ಹಲವು ಸಮಸ್ಯೆಗಳಿಗೆ ಸಿ.ಪಿ. ರಮೇಶ್‌ ಅಥವಾ ನನ್ನನ್ನು ಭೇಟಿಯಾಗಿ ತಿಳಿಸಿ ಎಂದು ಹೇಳಿದರು.

ನಿಮ್ಮ ಆದಿಜಾಂಬವ ಬಡಾವಣೆಯ ಮುಖ್ಯದ್ವಾರಕ್ಕೆ ಸ್ವಾಗತ ಆಚ್‌ರ್‍ ನಿರ್ಮಾಣವನ್ನು ಸ್ನೇಹಿತರು ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡ ಸಿ.ಪಿ.ರಮೇಶ್‌ ಕುಮಾರ್‌ ನೆರವೇರಿಸಲಿದ್ದಾರೆ. ವಾರದೊಳಗೆ ರಮೇಶ್‌ಕುಮಾರ್‌ ಅವರನ್ನು ಕೆಪಿಸಿಸಿ ಸದಸ್ಯರಾಗಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಗ್ರಾಪಂ ಸದಸ್ಯ ಬಿ.ಬಿ. ಶಿವಣ್ಣ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದರು. ಆದಿಜಾಂಬವ ಜನಾಂಗದ ಯುವಕರಾದ ಚಿಂತಾಮಣಿ ಚರಣ್‌ರಾಜ್‌, ಪ್ರಸನ್ನ, ಅಶೋಕ, ಮಂಜು, ಚಿನ್ನಪ್ಪ, ದುರ್ಗಾಪ್ರಸಾದ್‌, ಸಂಜು, ಮನೋಜ್‌, ಯತೀಶ್‌, ಅವಿನಾಶ್‌, ಮಹೇಶ್‌ಕುಮಾರ್‌, ದರ್ಶನ್‌, ಬಿ.ಆರ್‌. ಮಂಜು, ಬಿ.ಸಿ. ಸುದೀಪ್‌, ಶಂಕರ್‌, ವಿಜಯೇಂದ್ರರಾಜು, ಮಾದೇಶ, ವರ್ಷಿತ್‌, ಚೇತನ್‌, ಸಂಜು, ಗಿರೀಶ, ನಟರಾಜು, ಮಂಜುನಾಥ್‌, ಮನು ಸೇರಿದಂತೆ 35 ಮಂದಿ ಯುವಕರು ಕಾಂಗ್ರೆಸ್‌ ಮುಖಂಡ ಸಿ.ಪಿ. ರಮೇಶ್‌ಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಉದಯ್‌ಶಂಕರ್‌, ಮಾಜಿ ಅಧ್ಯಕ್ಷ ಡಿ. ತಮ್ಮಯ್ಯ, ಕಾಂಗ್ರೆಸ್‌ ಜಿಲ್ಲಾ ಅಲ್ಪಸಂಖ್ಯಾತ ಉಪಾಧ್ಯಕ್ಷ ಖಾಲಿದ್‌್ದ, ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ದೆಗ್ನಾಳ್‌ ಆನಂದ್‌, ಕಾಂಗ್ರೆಸ್‌ ಮುಖಂಡರಾದ ಹಂಪಾಪುರ ಪ್ರಶಾಂತ್‌ ಜೈನ್‌, ಬಿ.ಎಂ. ಸುದರ್ಶನ, ಬಿ.ಎಂ. ಕೃಷ್ಣೇಗೌಡ, ಅಂಕನಹಳ್ಳಿ ಅಶ್ವಥ್‌ ನಾರಾಯಣ…, ಗ್ರಾಪಂ ಮಾಜಿ ಸದಸ್ಯ ಸ್ವಾಮಿ, ಕಾಂಗ್ರೆಸ್‌ ಯುವ ಮುಖಂಡ ಬಿ.ಟಿ. ಮೋಹನ್‌, ಕೆ. ದಿನೇಶ್‌, ಬ್ಯಾಟಪ್ಪ, ರಾಘವೇಂದ್ರ (ಬಬ್ರು), ಮಂಜುನಾಥ್‌, ಸಾಮಾಜಿಕ ಜಾಲತಾಣದ ಸಚ್ಚಿನ್‌, ಪ್ರಕಾಶನಾಯಕ ಮೊದಲಾದವರು ಇದ್ದರು.

click me!