
ಯಾದಗಿರಿ(ಸೆ.13): ಮನಯ ಛಾವಣಿ ಕುಸಿದು 12 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಅರಕೇರಾ (ಕೆ) ಗ್ರಾಮದಲ್ಲಿ ಗುರುವಾರ ನಡೆದಿದೆ. ಅರಕೇರಾ (ಕೆ) ಗ್ರಾಮದ ಭಾಗ್ಯಶ್ರೀ (12) ಮೃತಪಟ್ಟವಳು.
ನಿರಂತರ ಮಳೆಯಿಂದಾಗಿ ಮನೆ ನೆನೆದು ಶಿಥಿಲಗೊಂಡಡಿತ್ತು. ಗುರುವಾರ ಸಹೋದರನಿಗೆ ಊಟ ತರಲೆಂದು ಕೋಣೆಗೆ ತೆರಳಿದ್ದ ವೇಳೆ ಬಾಲಕಿ ಮೇಲೆ ಏಕಾಏಕಿ ಛಾವಣಿ ಕುಸಿದು, ತಲೆ ಮೇಲೆ ಬಿದ್ದು ಗಾಯಗೊಂಡಿದ್ದಾಳೆ.
ಪ್ರಧಾನಿ ಮೋದಿಗೆ ಡಿಕೆ ಶಿವಕುಮಾರ ಕಂಡ್ರೆ ಅಂಜಿಕೆ ಇದೆ: ಸಚಿವ ಶರಣಬಸಪ್ಪ ದರ್ಶನಾಪುರ
ಈ ವೇಳೆ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.