ಸರ್ಕಾರದಿಂದ ನೀಡಲಾಗುವ ರೇಷನ್ ಕಾರ್ಡ್ ಕೇವಲ ಪಡಿತರ ಪಡೆಯಲು ಮಾತ್ರವಲ್ಲ ಆರೋಗ್ಯ ಸಂಬಂಧಿಸಿದ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ನೆರವಾಗಲಿದೆ ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಪಿರಿಯಾಪಟ್ಟಣ (ಡಿ.22): ಸರ್ಕಾರದಿಂದ ನೀಡಲಾಗುವ ರೇಷನ್ ಕಾರ್ಡ್ ಕೇವಲ ಪಡಿತರ ಪಡೆಯಲು ಮಾತ್ರವಲ್ಲ ಆರೋಗ್ಯ ಸಂಬಂಧಿಸಿದ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ನೆರವಾಗಲಿದೆ ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಪಟ್ಟಣದಲ್ಲಿ ಆಹಾರ (Food) ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಆಯ್ದ ಫಲಾನುಭವಿಗಳಿಗೆ ಬಿಪಿಎಲ್ (BPL) ಕಾರ್ಡ್ ವಿತರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಮತ್ತು ಆಹಾರ ಇಲಾಖೆ ನಿರ್ದೇಶಕರ ಕಚೇರಿಗಳಿಗೆ ಎಡೆಬಿಡದೆ ಅಲೆದು ಬಿಪಿಎಲ… ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ನನ್ನ ಈ ಶ್ರಮದಿಂದಾಗಿ ಇಂದು ರಾಜ್ಯಾದ್ಯಂತ 1.5 ಲಕ್ಷ ಮಂದಿಗೆ ಬಿಪಿಎಲ… ಕಾರ್ಡ್ ನೀಡುವಂತೆ ಆದೇಶ ಬಂದಿದೆ, ಕ್ಷೇತ್ರದ ಜನರ ಬೇಡಿಕೆಗಳನ್ನು ಪೂರೈಸಲು ಸರ್ಕಾರ ವಿಳಂಬ ಮಾಡಿದರೆ ಆಗ ಸದನದಲ್ಲಿ ಧ್ವನಿ ಎತ್ತುವ ಪ್ರಯತ್ನ ಮಾಡಿದ್ದೇನೆ, ನನ್ನ ಒಡೆತನದಲ್ಲಿರುವ ಈ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಕೆಲವು ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದು ಹಾಗೂ ಕೆಲವು ಕಾಂಗ್ರೆಸ್ ಬೆಂಬಲಿತರು ಇಲ್ಲಿಗೆ ಕಾರ್ಡ್ ಪಡೆಯಲು ಬಂದಿಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ ಯಾರಿಗೂ ಅಂಜಿಕೊಂಡು ಹೆದರಿಕೊಂಡು ತಾಲೂಕಿನ ಜನರ ಸೇವೆ ನಾನು ಮಾಡುತ್ತಿಲ್ಲ ಎಂದರು.
undefined
ಆಹಾರ ಇಲಾಖೆ ಶಿರಸ್ತೆದಾರ್ ಸಣ್ಣಸ್ವಾಮಿ ಮಾತನಾಡಿ, ಈ ಸಾಲಿನಲ್ಲಿ ಹೊಸದಾಗಿ ಬಿಪಿಎಲ… ಕಾರ್ಡ್ ಪಡೆಯಲು ತಾಲೂಕಿನಲ್ಲಿ 1,036 ಅರ್ಜಿಗಳು ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿದ್ದು, ಈವರೆಗೆ 504 ಮಂದಿ ಪಲಾನುಭವಿಗಳಿಗೆ ಬಿಪಿಎಲ… ಕಾರ್ಡ್ ವಿತರಿಸಲಾಗಿದೆ. ಎರಡನೇ ಹಂತದಲ್ಲಿ 380 ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇನ್ನುಳಿದವರಿಗೆ ಜನವರಿ ತಿಂಗಳಿನಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ಕೆ. ಚಂದ್ರಮೌಳಿ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಯೋಜನೆ ತಲುಪುವಂತಾಗಬೇಕು ಬಿಪಿಎಲ… ಕಾರ್ಡ್ ದುರುಪಯೋಗವಾಗುವುದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಅಧ್ಯಕ್ಷ ಕೆ. ಮಹೇಶ್, ಉಪಾಧ್ಯಕ್ಷೆ ಪಿ.ಕೆ. ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ. ಕೃಷ್ಣ, ಸದಸ್ಯರಾದ ಭಾರತಿ, ಪುಷ್ಪಲತಾ, ನಿರಂಜನ್, ಪ್ರಕಾಶ್‌ಸಿಂಗ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್. ರವಿ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿಇದ್ದರು.
ಕೊನೆಗೂ ಸಿಕ್ಕ ಬಿಪಿಎಲ್
ರವಿ ಕಾಂಬಳೆ
ಹುಕ್ಕೇರಿ(ಡಿ.08): ಅಂತು ಇಂತೂ ಆದ್ಯತಾ ಪಡಿತರ ಚೀಟಿ(ಬಿಪಿಎಲ್)ಗಳ ವಿತರಣೆಗೆ ಇದೀಗ ಕಾಲ ಕೂಡಿ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿರುವ ಬಡಕುಟುಂಬಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವ ಭಾಗ್ಯ ಒದಗಿ ಬಂದಿದೆ.
ಎಲ್ಲ ವರ್ಗದ ಕುಟುಂಬಗಳಿಗೆ ಆಹಾರ ಭದ್ರತೆ ಹಾಗೂ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಆಸರೆ ಎನಿಸಿರುವ ಆದ್ಯತಾ ಪಡಿತರ ಚೀಟಿ(ಬಿಪಿಎಲ್)ಗಳನ್ನು ಪಾರದರ್ಶಕವಾಗಿ, ಸಲ್ಲಿಕೆಯಾಗಿರುವ ಅರ್ಜಿಗಳ ಹಿರಿತನದ ಆಧಾರದ ಮೇಲೆ ವಿತರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ 2022 ಆ.25ರವರೆಗೂ ಆದ್ಯತಾ ಪಡಿತರ ಚೀಟಿಗಾಗಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ ಬರೋಬ್ಬರಿ 73,772 ಕುಟುಂಬಗಳ ಅರ್ಜಿಗಳಲ್ಲಿ 47911 ವಿಲೇವಾರಿಗೆ ಅರ್ಹವೆಂದು ಗುರುತಿಸಲಾಗಿದೆ. 30861 ಅರ್ಜಿಗಳ ಪರಿಶೀಲನೆ ಬಾಕಿಯಿದ್ದು ಇಲ್ಲಿಯವರೆಗೆ 20151 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
Mysuru ಎಪಿಎಲ್, ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆಹಾರ ಧಾನ್ಯ ವಿತರಣೆ
ಸದ್ಯ ಜಿಲ್ಲೆಗೆ ಒಟ್ಟು 10874 ಹೊಸ ಬಿಪಿಎಲ್ ಕಾರ್ಡ್‌ಗಳನ್ನು ಮಂಜೂರು ಮಾಡಲು ಅನುಮತಿ ನೀಡಲಾಗಿದೆ. ತಾಲೂಕುವಾರು ಆಹಾರ ಇಲಾಖೆ ಅಧಿಕಾರಿಗಳು ಸ್ಥಳ ತನಿಖೆ ಮಾಡಿರುವ ಪ್ರಕಾರ ಒಟ್ಟು 9787 ಕಾರ್ಡ್‌ಗಳನ್ನು ವಿತರಿಸಲು ಸೂಚಿಸಲಾಗಿದೆ. ಇನ್ನುಳಿದ 1087 ಪಡಿತರ ಚೀಟಿ ಮಂಜೂರಿಸುವ ಗುರಿಯನ್ನು ಕೇಂದ್ರ ಕಚೇರಿಯವರು ವಿವಿಧ ತುರ್ತು ಕಾರಣಗಳಿಗೆ ಶೇ.10ರಷ್ಟುಕಾಯ್ದಿರಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಲಾಗಿದೆ.