ರಾಮಕೊಲ್ಲಿಗೆ ಭೂವಿಜ್ಞಾನ ಇಲಾಖೆ, ಎನ್‌ಡಿಆರ್‌ಎಫ್‌ ತಂಡ ಭೇಟಿ, ಪರಿಶೀಲನೆ

By Kannadaprabha News  |  First Published Jul 23, 2022, 12:12 PM IST

ರಾಮಕೊಲ್ಲಿ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರು ಮತ್ತು ಎನ್‌ಡಿಆರ್‌ಎಫ್‌ ಬಿರುಕು ಬಿಟ್ಟ ಸ್ಥಳ ಪರಿಶೀಲಿಸಿದರು.


ಮಡಿಕೇರಿ (ಜು.23): ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದ ಗುಡ್ಡ ಪ್ರದೇಶದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ರಾಮಕೊಲ್ಲಿ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರು ಮತ್ತು ಎನ್‌ಡಿಆರ್‌ಎಫ್‌ ತಂಡವು ಶುಕ್ರವಾರ ಪರಿಶೀಲಿಸಿದರು.

ಪರಿಶೀಲನೆ ನಡೆಸಲು ತೆರಳಿದ ಸಂದರ್ಭದಲ್ಲಿ ಮಳೆಯು ಹೆಚ್ಚಾದ ಕಾರಣ ಸ್ಥಳಿಯರು ಬಿರುಕು ಬಿಟ್ಟಿರುವ ಸ್ಥಳವನ್ನು ಮಳೆ ಕಡಿಮೆಯಾದ ನಂತರ ತೋರಿಸುವುದಾಗಿ ತಿಳಿಸಿದ ಮೇರೆಗೆ 2ನೇ ಮೊಣ್ಣಂಗೇರಿ ಗುಡ್ಡ ಪ್ರದೇಶದಲ್ಲಿ 2018 ನೇ ಸಾಲಿನಲ್ಲಿ ಬೆಟ್ಟಕುಸಿದಿದ್ದ ಪ್ರದೇಶ ಹಾಗೂ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ತಂಡವು ಪರಿಶೀಲಿಸಿತು. ಈ ಪ್ರದೇಶದಲ್ಲಿ 2018ನೇ ಸಾಲಿನಲ್ಲಿ ಗುಡ್ಡ ಕುಸಿದಿದ್ದ ಪ್ರದೇಶದ ಒಂದು ಭಾಗದಲ್ಲಿ ಅಲ್ಪ ಪ್ರಮಾಣದ ಮಣ್ಣು ಜರಿದಿದ್ದು ಹಾಗೂ ಪಕ್ಕದ ಗುಡ್ಡದಲ್ಲಿ ಸಣ್ಣ ಪ್ರಮಾಣದ ಬಿರುಕು ಬಿಟ್ಟಿರುವುದು ಕಂಡುಬಂದಿದೆ.

Tap to resize

Latest Videos

ಕೊಡಗಿನಲ್ಲಿ ಮತ್ತೆ ಪ್ರವಾಹ; ಮತ್ತೆ ಮರುಕಳಿಸಲಿದೆಯಾ 2018ರ ಕರಾಳ ದಿನ..?

ಗುಡ್ಡದ ಕೆಳಭಾಗದ ಪೂರ್ವ ದಿಕ್ಕಿನಲ್ಲಿ ಸುಮಾರು 900 ಮೀಟರ್‌ ದೂರದಲ್ಲಿ ಅಂದಾಜು 30 ಮನೆಗಳಿವೆ. ಮಳೆ ಹೆಚ್ಚಾಗಿರುವ ಕಾರಣ ಹಾಗೂ ಮಂಜು ಕವಿದಿರುವುದರಿಂದ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ಅಧ್ಯಯನ ನಡೆಸಲು ಸಾಧ್ಯವಾಗಿಲ್ಲ, ಮಳೆ ಕಡಿಮೆಯಾದ ನಂತರ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ಅಧ್ಯಯನ ನಡೆಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್‌ ಅವರು ತಿಳಿಸಿದ್ದಾರೆ.

ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಜೋರು

ವಾರದ ಹಿಂದೆ ಸುರಿಯುತ್ತಿದ್ದ ಮಹಾ ಮಳೆಗೆ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೃಷಿಕರು ತತ್ತರಿಸಿದ್ದರು. ಭಾರಿ ಮಳೆಯಿಂದ ರೈತರು ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದರು. ಆದರೆ ಕಳೆದ 4 ದಿನಗಳಿಂದ ಮಳೆ ವಿರಾಮ ನೀಡಿದ್ದು, ರೈತರು ಮತ್ತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.f ವಾರದ ಹಿಂದೆ ಸುರಿದ ಭಾರಿ ಮಳೆಗೆ ಕಾಫಿ, ಕಾಳು ಮೆಣಸು, ಏಲಕ್ಕಿ, ಶುಂಠಿ ನೆಲ ಕಚ್ಚಿದ್ದು, ಇದರಿಂದ ಹೋಬಳಿ ಭಾಗದ ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ. ಕೆಲವು ರೈತರು ಗದ್ದೆಯಲ್ಲಿ ಬಿತ್ತನೆ ಮಾಡಿದ್ದು, ಮೊಳಕೆಯೊಡೆಯುತ್ತಿದ್ದ ಭತ್ತದ ಸಸಿ ಮಡಿ ಮಳೆಗೆ ಕೊಚ್ಚಿ ಹೋಗಿತ್ತು.

ಮಳೆಯ ಅಬ್ಬರಕ್ಕೆ ಮತ್ತೆ ಮೈದುಂಬಿದ ಕರಿಕೆ ಜಲಪಾತಗಳು

ಕಳೆದ 4 ದಿನಗಳಿಂದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಇದ್ದು, ರೈತರು ಗದ್ದೆಗಳಲ್ಲಿ ನಾಟಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಬಳಿ ವ್ಯಾಪ್ತಿಯ ಕ್ಯಾತೆ, ಬೆಂಬಳೂರು, ಶಾಂತಪುರ ಮುಂತಾದ ಗ್ರಾಮಗಳಲ್ಲಿ ರೈತರು ನಾಟಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೆ ಕೆಲವು ಕಡೆಗಳಲ್ಲಿ ರೈತರು ನಾಟಿ ಮಾಡಲು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಫಿ ಬೆಳೆಗಾರರು ಕಾಫಿ ಗಿಡಗಳಿಗೆ ಗೊಬ್ಬರ ಹಾಕುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಡ್ಲಿಪೇಟೆ ಹೋಬಳಿಯಲ್ಲಿ ವಾರದ ಹಿಂದೆ ಬಂದ ಮಹಾ ಮಳೆಗೆ ಕಾಫಿ, ಕರಿ ಮೆಣಸು, ಏಲಕ್ಕಿ, ಶುಂಠಿ ಬೆಳೆಗೂ ತುಂಬಾ ಹಾನಿಯಾಗಿತು. ಇದೀಗ ಮಳೆ ವಿರಾಮ ನೀಡಿರುವುದರಿಂದ ಮತ್ತೆ ರೈತರು ಭತ್ತ ನಾಟಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

click me!