GBA: ಮೂರು ವರ್ಷಗಳ ಬಳಿಕ ಮತ್ತೆ ಆ ಯೋಜನೆ ಜಾರಿ? GBAಯಿಂದ ಬಂತು ಬಿಗ್‌ ಅಪ್ಡೇಟ್‌; ಗೌರಿ ಗಣೇಶ ಹಬ್ಬಕ್ಕೆ ಬರಲಿದೆ ಬಂಪರ್‌ ಗಿಪ್ಟ್‌?

Published : Aug 13, 2026, 05:28 PM IST
GBA

ಸಾರಾಂಶ

ಮೂರು ವರ್ಷಗಳ ದೀರ್ಘ ವಿರಾಮದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ತನ್ನ ಕಲ್ಯಾಣ ಯೋಜನೆಯನ್ನು ಪುನರಾರಂಭಿಸಿದೆ. ಗೌರಿ-ಗಣೇಶ ಹಬ್ಬದ ಕೊಡುಗೆಯಾಗಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆ ಯೋಜನೆ ಯಾವುದು ಗೊತ್ತಾ?

ಕಳೆದ ಮೂರು ಸುದೀರ್ಘ ವರ್ಷಗಳಿಂದ ಆ ಒಂದು ಪ್ರಮುಖ ನಿರ್ಧಾರಕ್ಕಾಗಿ ಸಾವಿರಾರು ಬಡ ಮತ್ತು ಶ್ರಮಿಕ ವರ್ಗದ ಜನರು ಕಾದು ಕುಳಿತಿದ್ದರು. ಸರ್ಕಾರದ ಯೋಜನೆಗಳ ಲಾಭ ತಮಗೆ ಯಾವಾಗ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಕೊನೆಗೂ ಆ ಶುಭ ಸುದ್ದಿ ಸಿಕ್ಕಿದೆ! ಆದರೆ ಈ ಯೋಜನೆಯ ಅಸಲಿ ಪ್ಲಾನ್ ಏನು? ಯಾರಿಗೆಲ್ಲ ಸಿಗಲಿದೆ ಗೌರಿ-ಗಣೇಶ ಹಬ್ಬದ ಈ ಬಂಪರ್ ಗಿಫ್ಟ್? ಹೌದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ತನ್ನ ಬಹುನಿರೀಕ್ಷಿತ ಕಲ್ಯಾಣ ಯೋಜನೆಯನ್ನು (Welfare Scheme) ಪುನರಾರಂಭಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ. ಸುಮಾರು ಮೂರು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ನಗರದ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ದಿವ್ಯಾಂಗರ ಬಾಳಿನಲ್ಲಿ ಬೆಳಕು ಚೆಲ್ಲಲು ಜಿಬಿಎ ಮುಂದಾಗಿದೆ.

15,592 ಫಲಾನುಭವಿಗಳಿಗೆ ಹಬ್ಬದ ಮಹಾ ಕೊಡುಗೆ!

ಜಿಬಿಎ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಮುಂಬರುವ ಗೌರಿ-ಗಣೇಶ ಹಬ್ಬದ ವಿಶೇಷ ಕೊಡುಗೆಯಾಗಿ ಒಟ್ಟು 15,592 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ನೇರ ನೆರವು ನೀಡಲಾಗುತ್ತಿದೆ. ವಿತರಣೆಯ ನಿಖರವಾದ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೌಲಭ್ಯಗಳ ವಿವರ ಹೀಗಿದೆ!

ವಿದ್ಯಾಭ್ಯಾಸಕ್ಕೆ ನೆರವು; ಬಡ ಕುಟುಂಬದ 4,200 ವಿದ್ಯಾರ್ಥಿಗಳಿಗೆ ಶಾಲಾ ಮತ್ತು ಕಾಲೇಜು ಶುಲ್ಕದ ಮರುಪಾವತಿ ಮಾಡಲಾಗುವುದು.

ಹೊಲಿಗೆ ಯಂತ್ರಗಳು: ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು 3,917 ಜನರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು.

‘ಒಂಟಿ ಮನೆ’ ಯೋಜನೆ: ಈ ಯೋಜನೆಯಡಿಯಲ್ಲಿ 2,298 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ನೇರ ಹಣಕಾಸಿನ ನೆರವು ಸಿಗಲಿದೆ.

ಆಟೋ ಹಾಗೂ ವೆಂಡಿಂಗ್ ಕಾರ್ಟ್ಸ್; 1,507 ಜನರಿಗೆ ಇವಿ/ಸಿಎನ್‌ಜಿ ವೆಂಡಿಂಗ್ ತಳ್ಳುಗಾಡಿಗಳು ಮತ್ತು ‘ಸಾರಥಿ’ ಯೋಜನೆಯಡಿಯಲ್ಲಿ 732 ಜನರಿಗೆ ಆಟೋ ರಿಕ್ಷಾಗಳನ್ನು ನೀಡಲಾಗುತ್ತಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು: ಪೌರಕಾರ್ಮಿಕರು ಹಾಗೂ ಶೋಷಿತ ವರ್ಗದ ದುಡಿಯುವ ಮಹಿಳೆಯರು ಸೇರಿ 730 ಫಲಾನುಭವಿಗಳಿಗೆ ಇ-ಬೈಕ್‌ಗಳನ್ನು ನೀಡಲಾಗುವುದು.

ಉಚಿತ ಕೌಶಲ್ಯ ತರಬೇತಿ; ಉದ್ಯೋಗಾವಕಾಶ ಹೆಚ್ಚಿಸಲು 675 ಜನರಿಗೆ ಸಂಪೂರ್ಣ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.

ದಿವ್ಯಾಂಗರಿಗೆ ಆಸರೆ; ವಿಶೇಷ ಚೇತನರಿಗಾಗಿ ಪ್ರತ್ಯೇಕ ಸೌಲಭ್ಯವಿದ್ದು, 592 ಜನರಿಗೆ ವಿಶೇಷ ವಿನ್ಯಾಸದ ದ್ವಿಚಕ್ರ ವಾಹನಗಳು ಹಾಗೂ 71 ಜನರಿಗೆ ಎಲೆಕ್ಟ್ರಿಕ್ ವೀಲ್‌ಚೇರ್‌ಗಳನ್ನು ವಿತರಿಸಲಾಗುವುದು.

ಇತರ ಸೌಲಭ್ಯಗಳು; ಅಮೃತ ಮಹೋತ್ಸವ ಯೋಜನೆಯಡಿ 444 ಜನರು ಲಾಭ ಪಡೆಯಲಿದ್ದು, ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ 426 ಫಲಾನುಭವಿಗಳಿಗೆ ಅಗತ್ಯ ದಾಖಲೆಗಳನ್ನು ಹಸ್ತಾಂತರಿಸಲಾಗುವುದು.

ಅಕ್ರಮ ಎಸಗಿದರೆ ಕಠಿಣ ಕ್ರಮ: ಜಿಬಿಎ ಖಡಕ್ ಎಚ್ಚರಿಕೆ!

ಉಚಿತ ಸೌಲಭ್ಯಗಳನ್ನು ನೀಡುವ ಜೊತೆಗೆ, ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಿಕರಿಯಾಗದಂತೆ ತಡೆಯಲು ಕಟ್ಟೆಚ್ಚರ ವಹಿಸಿದ್ದಾರೆ. ಸರ್ಕಾರದಿಂದ ಉಚಿತವಾಗಿ ಪಡೆಯುವ ಆಟೋ, ತಳ್ಳುಗಾಡಿ ಹಾಗೂ ದ್ವಿಚಕ್ರ ವಾಹನಗಳನ್ನು ಕೆಲವರು ಹಣಕ್ಕಾಗಿ ಹೊರಗಿನವರಿಗೆ ಮಾರಾಟ ಮಾಡುತ್ತಾರೆಯೇ ಎಂಬುದನ್ನು ತಪಾಸಣೆ ನಡೆಸಲಾಗುವುದು. ಅಷ್ಟೇ ಅಲ್ಲದೆ, ಪಾಲಿಕೆಯ ಕ್ವಾರ್ಟರ್ಸ್‌ಗಳನ್ನು ಪಡೆದು ಅದನ್ನು ಬಾಡಿಗೆಗೆ ನೀಡಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೂರು ವರ್ಷಗಳ ನಂತರ ಬಂದಿರುವ ಈ ಯೋಜನೆ ಅರ್ಹರ ಕೈಸೇರಿ ಅವರ ಜೀವನ ಮಟ್ಟ ಸುಧಾರಿಸಲಿ ಎಂಬುದೇ ಎಲ್ಲರ ಆಶಯ.

PREV
Read more Articles on
click me!

Recommended Stories

Bengaluru New parking policy: ವಾಹನ ಸವಾರರಿಗೆ ಬಿಗ್‌ಶಾಕ್; ಇನ್ಮೇಲೆ ರಸ್ತೆ ಪಕ್ಕ ವೆಹಿಕಲ್ ಪಾರ್ಕ್ ಮಾಡಿದರೆ ಕಟ್ಟಬೇಕು ಹಣ, ಇಲ್ಲಿದೆ ಶುಲ್ಕ ಪಟ್ಟಿ!
ರೇಣುಕಾಸ್ವಾಮಿ ಕೇಸ್: ಜೈಲಲ್ಲಿ ಹೆಡ್‌ಫೋನ್ ಬಳಸಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾದ ಪವಿತ್ರಾ ಗೌಡ!