ಮಂಡ್ಯ ಜನತೆಗೆ ಗೌರಿ-ಗಣೇಶ ಹಬ್ಬದ ಬಂಪರ್ ಗಿಫ್ಟ್ : Mysugar factory ಪುನರಾರಂಭ

By Ravi NayakFirst Published Sep 1, 2022, 7:32 PM IST
Highlights
  • ಮಂಡ್ಯ ಜನತೆಗೆ ಗೌರಿ-ಗಣೇಶ ಹಬ್ಬದ ಬಂಪರ್ ಗಿಫ್ಟ್ : ಮೈಶುಗರ್ ಕಾರ್ಖಾನೆ ಪುನರಾರಂಭ
  • ಕಳೆದ 3-4 ವರ್ಷಗಳಿಂದ ಸ್ಥಗಿತವಾಗಿದ್ದ ಮಂಡ್ಯದ ಮೈಶುಗರ್ ಕಾರ್ಖಾನೆ
  • ಇಂದು ಕಬ್ಬು ನುರಿಯುವ ಕಾರ್ಯಕ್ಕೆ ಅಧಿಕೃತ ಚಾಲನೆ
  • ಸೆ.10 ರಂದು ಸಿಎಂ ಬಸವರಾಜ ಬೊಮ್ಮಾಯಿ ಕಾರ್ಖಾನೆಗೆ ಭೇಟಿ

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.

ಮಂಡ್ಯ (ಸೆ.1) : ಕಳೆದ 3-4 ವರ್ಷಗಳಿಂದ ಸ್ಥಗಿತವಾಗಿದ್ದ ಮಂಡ್ಯದ ಮೈಶುಗರ್ ಕಾರ್ಖಾನೆ(MySugar Factory) ಪುನರಾರಂಭಗೊಂಡಿದೆ. ಇಂದು ಕಬ್ಬು ನುರಿಯುವ ಕಾರ್ಯಕ್ಕೆ ಅಧಿಕೃತ ಚಾಲನೆ ದೊರೆತಿದ್ದು ಸೆ.10 ರಂದು ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಕಾರ್ಖಾನೆಗೆ ಭೇಟಿ ನೀಡಲಿದ್ದಾರೆ.

Mandya News: ಇಂದಿನಿಂದ ಮೈಷುಗರ್‌ ಕಾರ್ಯಾರಂಭ

ಒಂದು ಕಾಲದಲ್ಲಿ ರಾಜ್ಯದ ಕಬ್ಬಿನ ದರ ನಿಗದಿಪಡಿಸುತ್ತಿದ್ದ ಮೈಶುಗರ್ ಕಾರ್ಖಾನೆ ರಾಜಕೀಯ(Political) ಹಾಗೂ ಅವ್ಯಾಹತ ಭ್ರಷ್ಟಾಚಾರ(Corruption)ದಿಂದಾಗಿ ಸ್ಥಗಿತಗೊಂಡಿತ್ತು. ಕಳೆದ 3-4 ವರ್ಷಗಳಿಂದ ಕಾರ್ಖಾನೆ ಆರಂಭವಾಗದೆ ಜಿಲ್ಲೆಯ ರೈತರು(Farmers)ಸಂಕಷ್ಟಕ್ಕೆ ಸಿಲುಕಿದ್ರು. ರೋಗಗ್ರಸ್ತವಾಗಿದ್ದ ಕಾರ್ಖಾನೆಯನ್ನು ದುರಸ್ತಿ ಮಾಡಿ ಶೀಘ್ರ ಆರಂಭಿಸಿ ಎಂದು ಹಲವು ಹೋರಾಟಗಳು ಕೂಡ ನಡೆಯಿತು. ಆದರೆ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಿಸಲು ಕೆಲವರು ಪಟ್ಟು ಹಿಡಿದರೆ, ಇನ್ನು ಕೆಲವರು ಖಾಸಗಿಯಾದರು ಸರಿ, ಓಅಂಡ್ಎಂ(O&M) ಆದರೂ ಸರಿ ಕಾರ್ಖಾನೆ ಆರಂಭವಾಗಲಿ ಎಂದು ಒತ್ತಾಯಿಸಿದರು. 

ಗೊಂದಲದ ಗೂಡಾಗಿದ್ದ ಕಾರ್ಖಾನೆ ಆರಂಭ ವಿಚಾರ ಸದ್ಯ ಬಗೆಹರಿದಿದೆ. ಗೌರಿ ಗಣೇಶ ಹಬ್ಬ(Ganesh Chaturthi)ದಂದು ಮಂಡ್ಯ ಜನರಿಗೆ ಸರ್ಕಾರದ ಬಂಪರ್ ಗಿಫ್ಟ್(Bumper gift) ನೀಡಿದ್ದು. ಮೈಶುಗರ್ ಕಾರ್ಖಾನೆ ಪುನರಾರಂಭಿಸುವ ಮೂಲಕ ಕೊಟ್ಟ ಭರವಸೆ ಈಡೇರಿಸಿದೆ.

ಕಬ್ಬು ನುರಿಯುವ ಕಾರ್ಯಕ್ಕೆ ಗೋಪಾಲಯ್ಯ ಚಾಲನೆ:

ಕಳೆದ 15 ದಿನಗಳ ಹಿಂದೆ ಕಾರ್ಖಾನೆಯಲ್ಲಿ ಹೋಮ ಹವನಗಳನ್ನು ನಡೆಸಿ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡಲಾಗಿತ್ತು. ಇಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ(K.Gopalaiah) ಕಬ್ಬು ನುರಿಯುವ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದರು. ಕ್ರೀಡಾ ಸಚಿವ ಕೆಸಿ ನಾರಾಯಣಗೌಡ(K.C.Narayanagowda), ಜಿಲ್ಲೆಯ ಜೆಡಿಎಸ್ ಶಾಸಕರು(JDS MLA) ಸೇರಿದಂತೆ ಸಂಸದೆ ಸುಮಲತಾ ಅಂಬರೀಶ್(Sumalata Ambarish) ಭಾಗಿಯಾಗಿದ್ದರು. ಕಬ್ಬಿನ ಜೊಲ್ಲೆಯನ್ನು ಮಷಿನ್‌ಗೆ ಹಾಕುವ ಮೂಲಕ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕಾರ್ಖಾನೆ ಆರಂಭದಲ್ಲೇ ಎದುರಾದ ವಿಘ್ನ:

ಮೈಶುಗರ್ ಕಾರ್ಖಾನೆ ಆರಂಭಿಸುವ ಮೊದಲೇ ವಿಘ್ನ ಎದುರಾದಂತಿತ್ತು. ಕಬ್ಬು ಅರೆಯುವ ಯಂತ್ರಕ್ಕೆ ಚಾಲನೆ ನೀಡಿದರು ಯಂತ್ರ ಆರಂಭವಾಗಲಿಲ್ಲ. ಸಚಿವ ಗೋಪಾಲಯ್ಯ ಕ್ರಷರ್ ಮಿಷನ್ನಿನ ಆನ್ ಬಟನ್‌ ಒತ್ತಿದರು. ಕೆಲಕಾಲ ಕ್ರಷರ್ ಮಿಷನ್ ಆನ್ ಆಗಲಿಲ್ಲ. ಪುನಾರಂಭದ ದಿನವೇ ತಾಂತ್ರಿಕ ದೋಷದಿಂದ ಆನ್‌ ಆಗದ ಯಂತ್ರವನ್ನು ಸರಿಪಡಿಸಲು ಸಿಬ್ಬಂದಿಗಳು ಮುಂದಾದರು.ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗಿಗೆ ಕೊಡಬೇಡಿ; ಸಿಎಂಗೆ ಎಚ್‌ಡಿಕೆ ಮನವಿ

click me!