ಕೊಡಗು, ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶ; ಯಾರೆಲ್ಲಾ ಬರಬಹುದು? ಇಲ್ಲಿದೆ ಮಾಹಿತಿ

Published : Jun 09, 2026, 07:35 AM IST
Karnataka Gathering of brides grooms

ಸಾರಾಂಶ

ಕೊಡಗು ಗೌಡ ನಿವೃತ್ತ ನೌಕರರ ಸಂಘವು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯಕ್ಕಾಗಿ ವಧು-ವರರ ಸಮಾವೇಶವನ್ನು ಆಯೋಜಿಸಿದೆ. ರೈತಾಪಿ ಯುವಕರು ಸೇರಿದಂತೆ ಮರುವಿವಾಹ ಬಯಸುವವರು, ವಿಚ್ಛೇದಿತರು ಕೂಡ ಈ ಸಮಾವೇಶದಲ್ಲಿ ಭಾಗವಹಿಸಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಮಡಿಕೇರಿ: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶವನ್ನು ಜೂ.13 ರಂದು ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚೊಕ್ಕಾಡಿ.ಎಸ್.ಅಪ್ಪಯ್ಯ ತಿಳಿಸಿದರು.

ದಾಖಲೆಗಳು ಕಡ್ಡಾಯ, ಯಾರೆಲ್ಲಾ ಬರಬಹುದು?

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ನೋಂದಣಿ ಆರಂಭವಾಗಲಿದ್ದು, ವಧುವಿಗೆ 18 ವರ್ಷ, ವರನಿಗೆ 21 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆಸಕ್ತ ವಧು-ವರರು ಫೋಟೋ, ಜಾತಕ, ಆಧಾರ್ ಕಾರ್ಡ್, ವಿದ್ಯಾರ್ಹತೆ, ಉದ್ಯೋಗದ ವಿವರಗಳನ್ನು ತರಬೇಕು. ವಿಶೇಷ ಚೇತನರು, ವಿಧುರರು, ವಿಧವೆಯರು, ಮರುವಿವಾಹ ಬಯಸುವವರು, ವಿಚ್ಛೇದಿತರು ಹಾಗೂ ವಿದೇಶ/ಹೊರ ರಾಜ್ಯದಲ್ಲಿರುವವರೂ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.

ಸಂಪರ್ಕಿಸಬೇಕಾದ ಮಾಹಿತಿ

ಜಿಲ್ಲೆಯಲ್ಲಿ ರೈತಾಪಿ ವರ್ಗದ ಯುವಕರಿಗೆ ಯುವತಿಯರು ಇಂದು ಸಿಗುತ್ತಿಲ್ಲ. ಯುವತಿಯರು ನಗರ ಪ್ರದೇಶದತ್ತ ಆಕರ್ಷಿತರಾಗಿ ಅತ್ತ ಮುಖ ಮಾಡುತ್ತಿದ್ದಾರೆ. ಪರಿಣಾಮ ರೈತಾಪಿ ಯುವಕರಿಗೆ ಯುವತಿಯರು ಸಿಗುತ್ತಿಲ್ಲ. ಆದ್ದರಿಂದ ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿದೆ. ಆನ್‌ಲೈನ್ ನೋಂದಣಿಗೆ appaiahchokkadira1@gmail.com ಅಥವಾ ಹೆಚ್ಚಿನ ಮಾಹಿತಿಗೆ 9448884673 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದರು.

ಇದನ್ನೂ ಓದಿ: ಮಗಳ ಗಂಡನೇ ಅತ್ತೆಯ ಪತಿ, 4 ವರ್ಷಗಳ ಗುಪ್ತ ಪ್ರೀತಿಗೆ ಕೋರ್ಟ್‌ನಲ್ಲಿ ಬಿತ್ತು ಮದುವೆ ಮುದ್ರೆ

ಕೊಡಗು ಗೌಡ ನಿವೃತ್ತ ನೌಕರರ ಸಂಘದ ಖಜಾಂಚಿ ಕುಯ್ಯಮುಡಿ ಅಶ್ವಿನಿ ಕುಮಾರ್ ಮಾತನಾಡಿ, ಇಂದು ಸಂಬಂಧಗಳು ವೇಗವಾಗಿ ಹಾಳಾಗುತ್ತಿದೆ. ಇಂದು ಮದುವೆ ಆಗುತ್ತಾರೆ. ನಾಳೆ ವಿಚ್ಛೇದನಕ್ಕೆ ಸಲ್ಲಿಸುವ ಪ್ರಕರಣಗಳು ಕಾಣುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸೆಟ್ಟೆಜ್ಜನ ಗಣಪತಿ, ಕಾರ್ಯದರ್ಶಿ ಕುಂಜಿಲನ ರತ್ನಕುಮಾರಿ, ಕಟ್ರತನ ಲಲಿತ ಅಯ್ಯಣ್ಣ, ಪ್ರಮುಖರಾದ ಸೂರ್ತಲೆ ರಾಮಚಾರಿ ಇದ್ದರು.

ಇದನ್ನೂ ಓದಿ: ಇನ್ಮುಂದೆ ಮದುವೆ ದಿಬ್ಬಣಗಳ ಫೋಟೋ, ವಿಡಿಯೋ ಚಿತ್ರೀಕರಣ ಮಾಡಲ್ಲ: ಫೋಟೋಗ್ರಾಫರ್ಸ್ ನಿರ್ಧಾರ

PREV
Read more Articles on
click me!

Recommended Stories

ಘಟಪ್ರಭಾ ಕುಷ್ಟಗಿ ರೈಲ್ವೆ ಮಾರ್ಗ ಆರಂಭಿಸಲು ಆಗ್ರಹ: ಸಚಿವ ಜೋಶಿ ನೀಡಿದ ಭರವಸೆ ಏನು?
Bitcoin Scam Case: ಬಿಟ್‌ಕಾಯಿನ್‌ ಹಗರಣದಲ್ಲಿ ನಲಪಾಡ್‌ಗೆ ಇದೀಗ ಎಸ್ಐಟಿ ಚಾರ್ಜ್‌ಶೀಟ್‌ ಶಾಕ್‌!