ಕಾಂಗ್ರೆಸ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಪುತ್ರಿ ಗಾಯಿತ್ರಿ ಬಾಯಿ ಶಂಕರ್‌ಮೂರ್ತಿ ಅವರನ್ನು ಚುನಾವಣೆ ಕಣಕ್ಕಿಳಿಸುವುದಾಗಿ ಮಾಜಿ ಶಾಸಕ ಸೋಮ್ಲನಾಯಕ್ ಹೇಳಿದರು.
ಪಾವಗಡ : ಕಾಂಗ್ರೆಸ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಪುತ್ರಿ ಗಾಯಿತ್ರಿ ಬಾಯಿ ಶಂಕರ್‌ಮೂರ್ತಿ ಅವರನ್ನು ಚುನಾವಣೆ ಕಣಕ್ಕಿಳಿಸುವುದಾಗಿ ಮಾಜಿ ಶಾಸಕ ಸೋಮ್ಲನಾಯಕ್ ಹೇಳಿದರು.
ಭಾನುವಾರ ನಗರದ ಹರ್ಷಿತ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಮುಖಂಡ ಹಾಗೂ ಬೆಂಬಲಿಗ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಗಾಯಿತ್ರಿಬಾಯಿ ಅವರನ್ನು ಚುನಾವಣೆ ಕಣಕ್ಕಳಿಸಲು ಸಜ್ಜಾಗಿದ್ದು, ಕಾಲಾವಕಾಶವಿದೆ. ಆತುರದ ನಿರ್ಧಾರ ಬೇಡ. ವೇದಿಕೆಯಲ್ಲಿದ್ದ ಹಿರಿಯರ ಸಲಹೆಯಂತೆ, ಚುನಾವಣೆಗೆ ಹೋದರೆ ಗೆದ್ದೆ ಗೆಲ್ಲಬೇಕು. ಇದಕ್ಕೆ ಬೇಕಾದ ಜನ ಬೆಂಬಲ ಹಾಗೂ ಸಂಪನ್ಮೂಲದ ಅಗತ್ಯವಿದೆ. ಹಿರಿಯ ಮುಖಂಡರು ಮತ್ತು ಬೆಂಬಲಿಗ ಕಾರ್ಯಕರ್ತರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಮೂಲಕ ಚುನಾವಣೆಗೆ ಹೋಗುವುದಾಗಿ ಅವರು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ ಮಾತನಾಡಿ, ತಾಲೂಕಿನ ಜನತೆ ಬದಲಾವಣೆ ಬಯಸಿದ್ದು, ಅಭ್ಯರ್ಥಿ ಆಕಾಂಕ್ಷಿ ಗಾಯಿತ್ರಿಬಾಯಿ ಪರ ಹೆಚ್ಚು ಬೆಂಬಲವಿದೆ. ಮಹಿಳೆಗೆ ಆದ್ಯತೆ ಸಿಗಬೇಕು. ತಾಲೂಕು ಕಾಂಗ್ರೆಸ್‌ನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬೇರೆಯವರಿಗೆ ಅವಕಾಶ ನೀಡದೇ ಒಂದೇ ಕುಟಂಬದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಅಲ್ಲದೇ ಜನಸಾಮಾನ್ಯರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಶಾಸಕ ಹಾಗೂ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ವಿಫಲರಾಗಿದ್ದಾರೆ. ಹೀಗಾಗಿ, ಚುನಾವಣೆಗೆ ಹೋದರೆ ಗೆಲ್ಲಬೇಕು. ಪರಿಶೀಲಿಸಿ ಗಾಯಿತ್ರಿಬಾಯಿರನ್ನು ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸುವುದು ನಿಶ್ಚಿತ ಎಂದರು.
ಹಿರಿಯ ಮುಖಂಡ ನರಸಿಂಹರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ನಿರಂತರವಾಗಿ ಕಾಂಗ್ರೆಸ್ ಸದೃಢ ಸಂಘಟನೆಗೆ ಶ್ರಮಿಸಿದ್ದೇವೆ. ಕಾಂಗ್ರೆಸ್‌ನಲ್ಲಿದ್ದರೂ ಹಾಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಪ್ರಮುಖ ಗುರಿ ಎಂದರು.
ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಎಂ.ಮೈಲಾರರೆಡ್ಡಿ ಹಾಗೂ ಜಿಪಂ ಮಾಜಿ ಸದಸ್ಯ ವದನಕಲ್ಲು ಗೋಪಾಲರೆಡ್ಡಿ ಮಾತನಾಡಿದರು.
ಹಿರಿಯ ಮುಖಂಡ ವೈ.ಎನ್.ಹೊಸಕೋಟೆ, ತರಕಾರಿ ತಿಮ್ಮಯ್ಯ, ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ನಿವೃತ್ತ ಮಾಸ್ಟರ್ ತಮ್ಮಣ್ಣ ಇತರರು ಮಾತನಾಡಿದರು.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಕಾಂಕ್ಷಿ ಗಾಯಿತ್ರಿಬಾಯಿ ಶಂಕರ್‌ಮೂರ್ತಿ, ತಾಪಂ ಮಾಜಿ ಸದಸ್ಯ ಯು.ಹನುಮಂತರಾಯಪ್ಪ, ಸೊಸೈಟಿ ಪ್ರಕಾಶಪ್ಪ, ಕೇಶವಚಂದ್ರದಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಕಾಂಗ್ರೆಸ್ ಮಾಜಿ ಯುವ ಘಟಕದ ಅಧ್ಯಕ್ಷ ಅನಿಲ್‌ಕುಮಾರ್, ವಕೀಲ ಆಂಜನೇಯಲು, ಕೆ.ರಾಮಪುರ ಆನಂದ್, ದಿವ್ಯ ತೇಜ್ ಯಾದವ್ ಹಾಗೂ ಇತರರಿದ್ದರು.