ಮಹಿಳೆಯರಿಗೆ ಗಾರ್ಮೆಂಟ್ಸ್‌, ಯುವಕರಿಗೆ ಕೈಗಾರಿಕೆಗಳಲ್ಲಿ ಕೆಲಸ

By Kannadaprabha News  |  First Published Jun 17, 2023, 6:02 AM IST

ಚುನಾವಣೆ ಪೂರ್ವದಲ್ಲಿ ನೀಡಿದ ಅಶ್ವಾಸನೆ ಈಡೇರಿಸಲು ಬದ್ಧರಿದ್ದು, ಸಚಿವರ ಜತೆ ಚರ್ಚಿಸಿದ್ದೇನೆ. ಇನ್ನೂ ಒಂದುವರೆ ವರ್ಷದಲ್ಲಿ ಸೋಲಾರ್‌ ಪಾರ್ಕ್ಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಮಹಿಳೆಯರಿಗೆ ಗಾರ್ಮೆಂಟ್ಸ್‌ ಹಾಗೂ ಕೈಗಾರಿಕೆ ಸ್ಥಾಪಿಸಿ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸುವುದಾಗಿ ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು.


  ಪಾವಗಡ : ಚುನಾವಣೆ ಪೂರ್ವದಲ್ಲಿ ನೀಡಿದ ಅಶ್ವಾಸನೆ ಈಡೇರಿಸಲು ಬದ್ಧರಿದ್ದು, ಸಚಿವರ ಜತೆ ಚರ್ಚಿಸಿದ್ದೇನೆ. ಇನ್ನೂ ಒಂದುವರೆ ವರ್ಷದಲ್ಲಿ ಸೋಲಾರ್‌ ಪಾರ್ಕ್ಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಮಹಿಳೆಯರಿಗೆ ಗಾರ್ಮೆಂಟ್ಸ್‌ ಹಾಗೂ ಕೈಗಾರಿಕೆ ಸ್ಥಾಪಿಸಿ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸುವುದಾಗಿ ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು.

ತಾಲೂಕು ಕಾಂಗ್ರೆಸ್‌ ಸಮಿತಿ ವತಿಯಿಂದ ಶುಕ್ರವಾರ ಇಲ್ಲಿನ ಎಸ್‌ಎಸ್‌ಕೆ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಭಿನಂದನೆ ಮತ್ತು 47ನೆ ವರ್ಷದ ಹುಟ್ಟುಹಬ್ಬದ ಸಮಾರಂಭದಲ್ಲಿ ಕೇಕ್‌ ಕತ್ತರಿಸಿ ಸಿಹಿ ಹಂಚುವ ಮೂಲಕ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು.

Tap to resize

Latest Videos

ತಂದೆ ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದು, ವಿಧಾನ ಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಗೆಲ್ಲಿಸಿದ್ದೀರಿ. ತಾ. ಮುಖಂಡರು ಮತ್ತು ಕಾರ್ಯಕರ್ತರ ಸಹಕಾರ ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ, ನಿಮಗೆ ಅಭಾರಿಯಾಗಿದ್ದೇನೆ. ಶಾಸಕರಾಗಿದ್ದರೂ ಸಾಮಾನ್ಯ ಕಾರ್ಯಕರ್ತರಂತೆ ನನ್ನನ್ನು ಕಾಣಿ, ನಾನು ಮೊದಲಿನಿಂದಲೂ ಸರಳತೆ ಮೈಗೊಡಿಸಿಕೊಂಡಿದ್ದೇನೆ ಎಂದರು.

ಅಧಿಕಾರವಲ್ಲ ನಾವು ಮಾಡಿದ ಜನಪರ ಕೆಲಸ ಶಾಶ್ವತ. ಚುನಾವಣೆ ಪೂರ್ವದಲ್ಲಿ ತಿಳಿಸಿದ ಹಾಗೆ 5 ಗ್ಯಾರಂಟಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದ್ದಾರೆ. ಸ್ಥಳೀಯವಾಗಿ ಪಟ್ಟಣದಲ್ಲಿ ರಿಂಗ್‌ ರಸ್ತೆ, ಶಿಕ್ಷಣಕ್ಕಾಗಿ ಉನ್ನತಾ ಕೋರ್ಸ್‌ಗಳ ಕೇಂದ್ರ ಮತ್ತು ಉದ್ಯೋಗಕ್ಕಾಗಿ ಕೈಗಾರಿಕೆ ಸ್ಥಾಪನೆಗೆ ಈಗಾಗಲೇ ಸಿಎಂ, ಡಿಸಿಎಂ ಹಾಗೂ ಇಂಧನ ಸಚಿವರ ಜತೆ ಚರ್ಚಿಸಿದ್ದೇನೆ. ಸದನದಲ್ಲೂ ಈ ಬಗ್ಗೆ ಗಂಭೀರವಾಗಿ ಚರ್ಚಿಸಲಿದ್ದೇನೆ. ತಂದೆ ವೆಂಕಟರಮಣಪ್ಪರನ್ನು ನಾಲ್ಕು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದು ಅವರ ಕಾಲದಲ್ಲಿ ತಾ.ಹೆಚ್ಚಿನ ಪ್ರಗತಿ ಕಂಡಿದೆ. ರೈಲ್ವೆ,ಮಾರ್ಗ ಕುಡಿವ ನೀರು ನೀರಾವರಿ ಯೋಜನೆಗಳ ಕಾಮಗಾರಿ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿಯೇ ಸಿಎಂ ಸಿದ್ದು ನೇತೃತ್ವದಲ್ಲಿ ತುಂಗಭದ್ರಾ ಯೋಜನೆ ಮನೆಮನೆ ಕುಡಿವ ನೀರಿಗೆ ಚಾಲನೆ ನೀಡುವುದಾಗಿ ಹೇಳಿದರು.

ಈಗಾಗಲೇ ತಾ.ತಿರುಮಣಿ ವಳ್ಳೂರಿನ ಸೌರಶಕ್ತಿ ಘಟಕಗಳಲ್ಲಿ 2.50 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಇನ್ನೂ 10 ಸಾವಿರ ಎಕರೆಯಲ್ಲಿ ಸೌರಶಕ್ತಿ ಘಟಕಗಳ ವಿಸ್ತಾರಣೆ ಮಾಡುವ ಉದ್ದೇಶವಿದೆ. ಗುತ್ತಿಗೆ ಅದಾರದ ಮೇಲೆ ಜಮೀನು ನೀಡಲು ರೈತರು ಅರ್ಜಿ ಸಲ್ಲಿಸಿದ್ದು, ಶೀಘ್ರ ಪರಿಶೀಲನೆ ನಡೆಸುವುದಾಗಿ ತಿಳಿಸಿ, ಚುನಾವಣೆಯಲ್ಲಿ ಹೆಚ್ಚು ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಹಿರಿಯ ಮುಖಂಡ ಎಚ್‌.ವಿ.ಕುಮಾರಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಕಾರ್ಯಕ್ರಮಗಳು ಮಹಿಳೆಯರಿಗೆ ಹೆಚ್ಚು ಅನುಕೂಲವಾಗಲಿದೆ. ಮಹಿಳೆಯರ ಪ್ರಗತಿಗೆ ಹೆಚ್ಚು ಅದ್ಯತೆ ನೀಡಿದ್ದು, ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ. ತಮ್ಮೆಲ್ಲರ ಸಹಕಾರದ ಮೇರೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಕಾಂಗ್ರೆಸ್‌ ಪಾಲಾಗವಾಗಲಿದ್ದು, ರಾಷ್ಟ್ರದ ಸರ್ವತೋಮುಖ ಅಭಿವೃದ್ದಿಗೆ ರಾಹುಲ್‌ಗಾಂಧಿ ಈ ದೇಶದ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ಸಂಘಟಿತರಾಗಿ ಪಕ್ಷ ಬಲಪಡಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ತಾಲೂಕಿನ ಜನತೆಯ ಸಹಕಾರದ ಮೇರೆಗೆ ನಾಲ್ಕು ಬಾರಿ ಶಾಸಕ ಹಾಗೂ ಎರಡು ಬಾರಿ ಮಂತ್ರಿಯಾಗಿದ್ದೇನೆ. ನನ್ನ ಪುತ್ರ ವೆಂಕಟೇಶ್‌ರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಶಾಸಕರನ್ನಾಗಿ ಆಯ್ಕೆಮಾಡಿರುವ ತಾಲೂಕಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಾಗಲಮಡಿಕೆ ಡ್ಯಾಂ 220ಕೆವಿ ವಿದ್ಯುತ್‌ ಘಟಕ, ತುಂಗಭದ್ರಾ ಕುಡಿವ ನೀರು ನೀರಾವರಿ ಅನುಷ್ಟಾನಕ್ಕೆ ಭದ್ರಾ ಮೇಲ್ದಂಡೆ, ಎತ್ತಿನ ಹೊಳೆ ಪೊಲೀಸ್‌ ಠಾಣೆ ಶಾಲಾ ಕಾಲೇಜುಗಳ ಪ್ರಗತಿ ತಮ್ಮ ಅವಧಿಯಲ್ಲಿಯೇ ನಡೆದಿದ್ದು, ಪ್ರಧಾನಿ ಮೋದಿ ಅಶ್ವಾಸನೆ ಒಂದು ಈಡೇರಿಲ್ಲ. ಅದರ ಬಗ್ಗೆ ಬಿಜೆಪಿ ಚಕಾರವೆತ್ತದೆ ಈಗ ಗ್ಯಾರಂಟಿಗಳ ಬಗ್ಗೆ ಪ್ರತಿಭಟನೆಯ ಬೆದರಿಕೆ ಹಾಕುತ್ತಿದ್ದಾರೆ. ಕಾಂಗ್ರೆಸ್‌ ನುಡಿದಂತೆ ನಡೆಯುವ ಪಕ್ಷ, 5 ಗ್ಯಾರಂಟಿಗಳು ರಾಜ್ಯದಲ್ಲಿ ಜಾರಿಯಲ್ಲಿವೆ. ಜೆಡಿಎಸ್‌ ಕಾಲದಲ್ಲಿ ತಿಮ್ಮರಾಯಪ್ಪರ ಪ್ರಗತಿ ಎನು ಇಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಬರೀ ಸುಳ್ಳಿನಲ್ಲಿ ಕಾಲ ಕಳೆದರೂ ಚುನಾವಣೆ ಪೂರ್ವದಲ್ಲಿ 20 ಸಾವಿರ ಅಂತರದಲ್ಲಿ ಜೆಡಿಎಸ್‌ ಗೆದ್ದಿದ್ದೆ ಎಂದು ಬಿಗುತ್ತಿದ್ದರು. ಚಾಲೆಂಜಾಗಿ ತೆಗೆದುಕೊಂಡು ರಾತ್ರಿ ಹಗಲು ನಿದ್ದೆ ಮಾಡದೇ ಕೆಲಸ ಮಾಡಿದ್ದು ತಮ್ಮೆಲ್ಲರ ಸಹಕಾರದ ಮೇರೆಗೆ ಪುತ್ರ ವೆಂಕಟೇಶ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖಂಡರು ಮತ್ತು ಕಾರ್ಯಕರ್ತರ ಶ್ರಮ ಎಂದು ಮರೆಯುವುದಿಲ್ಲ, ನಿಮಗೆಲ್ಲಾ ಆಭಾರಿಯಾಗಿದ್ದೇನೆ ಎಂದರು.

ಇದೇ ವೇಳೆ ತಾ. ಕಾಂಗ್ರೆಸ್‌ ಅಧ್ಯಕ್ಷ ಸುದೇಶ್‌ಬಾಬು, ರಾಮಾಂಜಿನಪ್ಪ, ಹಿರಿಯ ಮುಖಂಡರಾದ ಗುರಪ್ಪ, ಮುಗದಾಳಬೆಟ್ಟನರಸಿಂಹಪ್ಪ, ಮಾನಂ ವೆಂಕಟಸ್ವಾಮಿ, ಶಂಕರರೆಡ್ಡಿ, ವಕೀಲ ಭಗವಂತಪ್ಪ, ಮೈಲಪ್ಪ, ಪ್ರಮೋದ್‌ ಕುಮಾರ್‌, ಮಾಜಿ ಜಿಪಂ ಸದಸ್ಯರಾದ ಪಾಪಣ್ಣ ಕೋಟೆ ಪ್ರಭಾಕರ್‌, ವಕೀಲ ವೆಂಕಟರಾಮರೆಡ್ಡಿ, ಪಿ.ಎಚ್‌.ರಾಜೇಶ್‌, ತೆಂಗಿನಕಾಯಿ ರವಿ, ಮಹಿಳಾ ಘಟಕದ ಸುಮಾ ಅನಿಲ್‌, ಉಷಾರಾಣಿ, ಪುರಸಭೆ ಸದಸ್ಯರಾದ ಎಂ.ಎಸ್‌.ವಿಶ್ವನಾಥ್‌, ವೆಂಕಟರಮಣಪ್ಪ, ಬಾಲಸುಬ್ರಮಣ್ಯಂ, ವಿಜಯಕುಮಾರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಮಾರಪ್ಪ ದಿವಾಕರ್‌, ಅಲ್ಪ ಸಂಖ್ಯಾತರ ಘಟಕದ ಷಾಬಾಬು ರಿಜ್ವಾನ್‌, ಬೋವಿ ಸಂಘದ ದಾಸಭೋವಿ ಬಂಗಾರಪ್ಪ, ರಾಮಾಂಜಿನಪ್ಪ, ನಾಗೇಶ್‌, ಪಾತನ್ನ ವೆಂಕಟಸ್ವಾಮಿ ಸ್ಟುಡಿಯೋ ಅಮರ್‌, ರಾಮಚಂದ್ರಪ್ಪ ಇತರೆ ಕಾಂಗ್ರೆಸ್‌ ಪಕ್ಷದ ಎಲ್ಲಾ ಮುಖಂಡರು ಮತ್ತು ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ದ್ರೋಹ ಎಸೆಗಿದವರು ಉದ್ಧಾರ ಆಗಿಲ್ಲ

ತಂದೆ ವೆಂಕಟರಮಣಪ್ಪರಿಗೆ ವಿಶ್ವಾಸ ದ್ರೋಹ ಬಗೆದವರೂ ಯಾರು ಇಲ್ಲಿ ಉದ್ದಾರವಾಗಿಲ್ಲ,ರಾಜಕೀಯದಿಂದಲೇ ವಿನಾಶವಾಗಿದ್ದಾರೆ. ನಾನು ವೆಂಕಟರಮಣಪ್ಪರ ಪುತ್ರ, ನಮಗೆ ದ್ರೋಹವೆಸಗಿದವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೇಲೆಳಲು ಬಿಡುವುದಿಲ್ಲ. ಆಂತಹ ವಿಶ್ವಾಸ ದ್ರೋಹಿಗಳನ್ನ ರಾಜಕೀಯದಿಂದ ದೂರವಿಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಲೆಕ್ಕಚಾರ ತಲೆಕೆಳಗೆ

ಕಾಂಗ್ರೆಸ್‌ ತೊರೆದು ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್‌ ಸೇರ್ಪಡೆಯಾಗುತ್ತಿದ್ದಾರೆ. ಸಮಯವೇ ಸಾಕಾಗುತ್ತಿಲ್ಲ ಎಂದು ಚುನಾವಣೆಯಲ್ಲಿ ಜೆಡಿಎಸ್‌ನ ಮಾಜಿ ಶಾಸಕ ತಿಮ್ಮರಾಯಪ್ಪ ಹೇಳುತ್ತಿದ್ದರು. ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ಇನ್ನಾದರೂ ಜನತೆ ಅಭಿವೃದ್ಧಿಪರ ನಿಲ್ಲುತ್ತಾರೆಂದು ಜೆಡಿಎಸ್‌ ಅರ್ಥೈಸಿಕೊಳ್ಳಬೇಕಿದೆ ಎಂದು ಲೇವಡಿ ಮಾಡಿದರು.16ಪಿವಿಡಿ1

 

click me!