ಲಾಕ್‌ಡೌನ್‌ ಎಫೆಕ್ಟ್‌: ಗೋ ಮಾತೆಗೆ ಪೂಜಿಸಿ ಶಾಸಕ ಮುನ​ವಳ್ಳಿ ಜನ್ಮ​ದಿ​ನ

By Kannadaprabha NewsFirst Published May 4, 2020, 8:01 AM IST
Highlights

ನಾಗರಿಕರು ಕೊರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಬೇಕಾಗಿದೆ|ನಾಗರಿಕರು ಮನೆಯಲ್ಲಿದ್ದುಕೊಂಡು ರಕ್ಷಿಸಿಕೊಳ್ಳ ಬೇಕು: ಶಾಸಕ ಮುನವಳ್ಳಿ| ಲಾಕ್‌ ಡೌನ್‌ ಸಡಿಲಗೊಳಿಸಿದೆ ಎಂಬ ಕಾರಣ ಅನಾವಶ್ಯಕ ರಸ್ತೆ ಮೇಲೆ ಸಂಚಾರ ಮಾಡಬಾರದು, ಕಾರಣ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಿಕೊಳ್ಳಬೇಕು|

ಗಂಗಾವತಿ(ಮೇ.04):  ಇಲ್ಲಿಯ ಶಾಸಕರಾದ ಪರಣ್ಣ ಮುನವಳ್ಳಿ ಅವರು ತಮ್ಮ 67ನೇ ವರ್ಷದ ಹುಟ್ಟು ಹಬ್ಬವನ್ನು ಸರಳವಾಗಿ ಗೋ ಮಾತೆಗೆ ಪೂಜೆಯೊಂದಿಗೆ ನೆರವೇರಿಸಿದರು. ದೇಶದಲ್ಲಿ ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್‌ಗೊಂಡು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಳ್ಳುವದು ಸರಿಯಲ್ಲ. ಈ ಕಾರಣಕ್ಕೆ ಸರಳವಾಗಿ ಗೋಮಾತೆಗೆ ಪೂಜೆ, ನಾಗರಿಕರಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮತ್ತು ಮಾಸ್ಕ್‌ಗಳನ್ನು ನೀಡುವುದರ ಮೂಲಕ ಜನ್ಮದಿನ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್‌ಗೊಂಡಿತ್ತು. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದರು.ಈ ಕಾರಣಕ್ಕಾಗಿ ತಮ್ಮ ಶಕ್ತಿಯನುಸಾರವಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನತಗೆ ಕಳೆದ 40 ದಿನಗಳಿಂದ ಆಹಾರದ ಪ್ಯಾಕೆ​ಟ್‌ ವಿತರಿಸಲಾಗಿದೆ. ಔಷಧ, ಮತ್ತು ಮಾಸ್ಕ್‌ಗಳನ್ನು ನೀಡಲಾಗಿದೆ ಎಂದರು.

ನಿಷೇಧದ ಮಧ್ಯೆಯೂ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ: ಲಘು ಲಾಠಿ ಪ್ರಹಾರ

ನಾಗರಿಕರು ಕೊರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಬೇಕಾಗಿದೆ. ಕಾರಣ ನಾಗರಿಕರು ಮನೆಯಲ್ಲಿದ್ದುಕೊಂಡು ರಕ್ಷಿಸಿಕೊಳ್ಳ ಬೇಕೆಂದರು. ಲಾಕ್‌ ಡೌನ್‌ ಸಡಿಲಗೊಳಿಸಿದೆ ಎಂಬ ಕಾರಣ ಅನಾವಶ್ಯಕ ರಸ್ತೆ ಮೇಲೆ ಸಂಚಾರ ಮಾಡಬಾರದು, ಕಾರಣ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಿಕೊಳ್ಳಬೇಕೆಂದರು.

ಬಹಳಷ್ಟು ಅಭಿಮಾನಿಗಳು, ಕಾರ್ಯಕರ್ತರು ಹೂ ಮಾಲೆಗಳನ್ನು ತೆಗೆದುಕೊಂಡು ಬಂದು ಶುಭ ಹಾರೈಸಿದ್ದಾರೆ. ಆದರೆ ತಾವು ಹಾರ ಸ್ವೀಕರಿಸದೆ ಎಲ್ಲರು ಕೊರೋನಾ ಜಾಗೃ​ತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ತಿಳಿಸಿರುವುದಾಗಿ ಹೇಳಿದರು.

ಬಿಜೆಪಿ ಮುಖಂಡರಾದ ದೇವಾನಂದ, ಶಂಭು, ಹನಮಂತಪ್ಪ, ಎಪಿಎಂಸಿ ಅಧ್ಯಕ್ಷ ನೀಲಪ್ಪ, ನ್ಯಾಯವಾದಿ ಹೊಸಕೇರಿ ಪ್ರಭಾಕರ, ಎಪಿಎಂಸಿ ಸದಸ್ಯ ಶರಣೇಗೌಡ, ಯಮನಪ್ಪ ವಿಠಲಾಪುರ ಸೇರಿದಂತೆ ಇತರರು ಇದ್ದರು.
 

click me!