ಡಿಸೆಂಬರ್‌ ಅಂತ್ಯಕ್ಕೆ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಪೂರ್ಣ, ಹೊಸ ಮಾರ್ಗಗಳ ಪಟ್ಟಿ ಇಲ್ಲಿದೆ

By Suvarna News  |  First Published Sep 19, 2023, 9:28 AM IST

ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ತ್ವರಿತಗತಿಯಲ್ಲಿದ್ದು, ಡಿಸೆಂಬರ್‌ ಅಂತ್ಯಕ್ಕೆ ಖಜ್ಜಿಡೋಣಿ-ಲೋಕಾಪೂರ 9 ಕಿಮೀ ಮಾರ್ಗ ಪೂರ್ಣಗೊಳ್ಳಲಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದ್ದಾರೆ.


ಬಾಗಲಕೋಟೆ (ಸೆ.19): ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ಕುಂಠಿತಗೊಂಡಿದ್ದು, ಸದ್ಯ ತ್ವರಿತಗತಿಯಲ್ಲಿ ಕೇಂದ್ರ ಸರ್ಕಾರ ಕಾಮಗಾರಿ ಕೈಗೆತ್ತಿಕೊಂಡಿದೆ. ಡಿಸೆಂಬರ್‌ ಅಂತ್ಯಕ್ಕೆ ಖಜ್ಜಿಡೋಣಿ-ಲೋಕಾಪೂರ 9 ಕಿಮೀ ಮಾರ್ಗ ಪೂರ್ಣಗೊಳ್ಳಲಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ಬಾಗಲಕೋಟೆ ಮತಕ್ಷೇತ್ರದಲ್ಲಿನ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ಅನುಮೋದನೆ ನೀಡುತ್ತಿದೆ. ಇದರಿಂದಾಗಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿವೆ. ಈಗಾಗಲೇ ಖಜ್ಜಿಡೋಣಿ-ಲೋಕಾಪೂರ ಮಾರ್ಗ ಡಿಸೆಂಬರ್‌ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಲೋಕಾಪೂರ-ಯಾದವಾಡ 21 ಕಿಮೀ ಮಾರ್ಗ ಮೇ ತಿಂಗಳಲ್ಲಿ ಅವಾರ್ಡ್‌ ಆಗಿ ಕಾಮಗಾರಿ ಪ್ರಗತಿಯಲ್ಲಿ ನಡೆದಿವೆ.

Tap to resize

Latest Videos

undefined

ಬೈಯ್ಯಪ್ಪನಹಳ್ಳಿ- ಕೆ.ಆರ್‌.ಪುರ ಮೆಟ್ರೋ ಮಾರ್ಗದಲ್ಲಿ ಚಲಿಸುವ ಐಟಿ ಉದ್ಯೋಗಿಗಳಿಗೆ ಮತ್ತೆ ನಿರಾಸೆ

ಯಾದವಾಡ-ಜಮಖಂಡಿ 25 ಕಿ.ಮೀ ಮಾರ್ಗದ ಕಾಮಗಾರಿಗೆ ಆ.3 ರಂದು ಟೆಂಡರ್ ಕರೆಯಲಾಗಿದೆ. ಜಮಖಂಡಿ-ಜಗದಾಳ ಮಾರ್ಗ 20 ಕಿ.ಮೀ ಮತ್ತು ಜಗದಾಳ-ಹಾರೂಗೇರಿ 19 ಕಿಮೀ ಮಾರ್ಗದ ಕಾಮಗಾರಿಗೆ ಸೆಪ್ಟೆಂಬರ್‌ 9 ರಂದು ಟೆಂಡರ್ ಕರೆಯಲಾಗಿದೆ. ಮುಂಬರುವ ಹಂತದಲ್ಲಿ ಹಾರೂಗೇರಿ-ಕುಡಚಿ 18 ಕಿ.ಮೀ ಮಾರ್ಗದ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು, ಹೊಸಪೇಟೆಯಲ್ಲಿ ಪರಿಶೀಲನೆ

ಬಹುದಿನಗಳ ಬೇಡಿಕೆಯಾದ ಎಲ್ಸಿ ನಂ.34 ರೈಲ್ವೆ ಓವರ್ ಬ್ರಿಡ್ಜ್ (ಬಾದಾಮಿ-ಕೆರೂರ ರಸ್ತೆ) ನಿರ್ಮಾಣ ಕಾಮಗಾರಿ ಹಾಗೂ ಎಲ್ಸಿನಂ.41 ಗುಳೇದಗುಡ್ಡ ರೈಲ್ವೆ ಸ್ಟೇಷನ್ ಹತ್ತಿರ ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿಗಳಿಗೆ ರೈಲ್ವೆ ಇಲಾಖೆಯಿಂದಲೇ ಸೆ.11 ರಂದು ಟೆಂಡರ್ ಕರೆಯಲಾಗಿದೆ. ಇವೆರಡು ಬ್ರಿಡ್ಜ್ ನಿರ್ಮಾಣಕ್ಕೆ ₹76.12 ಕೋಟಿ ಅನುದಾನ ಮಂಜೂರಾಗಿದೆ.

ಕೈಗೆತ್ತಿಕೊಳ್ಳಲಾದ ಹೊಸ ರೈಲು ಮಾರ್ಗ:  ಆಲಮಟ್ಟಿ-ಚಿತ್ರದುರ್ಗ (ವಾಯಾ ಕೂಡಲಸಂಗಮ, ಇಳಕಲ್ಲ, ಕೊಪ್ಪಳ ಮಾರ್ಗವಾಗಿ) ಹೊಸದಾಗಿ ರೈಲು ಮಾರ್ಗ ನಿರ್ಮಾಣ ಮಾಡಲು ಸರ್ವೆ ಕಾರ್ಯ ಪೂರ್ಣಗೊಂಡಿದೆ. ಅದೇ ರೀತಿ ಯಲಬುರ್ಗಾ-ಗಜೇಂದ್ರಗಡ-ಬಾದಾಮಿ ಮಾರ್ಗ ನಿರ್ಮಾಣದ ಸರ್ವೆ ಕಾರ್ಯಕ್ಕೆ ಟೆಂಡರ್ ಕರೆಯಲಾಗಿದೆ. ದರೋಜಿ-ಬಾಗಲಕೋಟೆ ಹೊಸ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಮೃತ ಭಾರತ ಯೋಜನೆಯಡಿ ಬಾದಾಮಿ ಮತ್ತು ಬಾಗಲಕೋಟೆ ರೈಲ್ವೆ ನಿಲ್ದಾಣಗಳನ್ನು ಉನ್ನತೀಕರಿಸಲಾಗುತ್ತಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದ್ದಾರೆ.

click me!