
ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ: ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಕಟ್ಟಿಲೇಔಟ್ ಬಳಿ ರೌಡಿಶೀಟರ್ ಒಬ್ಬನ ಬರ್ಬರ ಕೊಲೆ ನಡೆದಿದೆ. ಬೈಕ್ ಮೇಲೆ ಬಂದಿದ್ದ ಮೂವರು ಆನಾಮಿಕರು ರೌಡಿಶೀಟರ್ ಇರ್ಫಾನ್ ತಹಶೀಲ್ದಾರ್ ಅಲಿಯಾಸ್ ಗೊರಿಲ್ಲಾ (36) ಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಹಳೆದ ದ್ವೇಷದ ಹಿನ್ನೆಲೆ ಕೊಲೆ ನಡೆದಿರುವ ಬಗ್ಗೆ ಅನುಮಾನ ಮೂಡಿದೆ.
ಕೊಲೆ ವಿಚಾರ ತಿಳಿದು ಸ್ಥಳಕ್ಕೆ ಬಂದಿದ್ದ ಇರ್ಪಾನ್ ಸಂಬಂಧಿಕರು, ರೌಡಿಶೀಟರ್ ಅಬ್ದುಲ್ ಆಡೂರ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೊಲೆಯ ಹಿಂದೆ ರೌಡಿಶೀಟರ್ ಅಬ್ದುಲ್ ಕೈವಾಡ ಇದೆ ಅಂತಾ ಆರೋಪ ಮಾಡ್ತಿದ್ದಾರೆ. ಅಬ್ದುಲ್ ಸಹಚರರೇ ಹತ್ಯೆ ಮಾಡಿದ್ದಾರೆ ಅಂತೆಯೂ ಹೇಳಿಕೊಂಡಿದ್ದಾರೆ.
ಅಬ್ದುಲ್ ಆಡೂರ್ ಹಾಗೂ ಮೃತ ಇರ್ಫಾನ್ ತಹಶೀಲ್ದಾರ್ ಮಧ್ಯೆ ಈ ಹಿಂದಿನಿಂದಲೂ ಗಲಾಟೆ ನಡೆದಿತ್ತು. ಹಣ ಕಾಸಿನ ವಿಷಯವಾಗಿಯೂ ಎರಡು ಗುಂಪಿನ ಮಧ್ಯೆ ವೈಮನಸ್ಸು ಇತ್ತು ಎನ್ನಲಾಗಿದ್ದು, ಸದ್ಯ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸ್ಥಳಕ್ಕೆ ಸೀನ್ ಆಫ್ ಕ್ರೈಮ್ ದಾಖಲಿಸಲು ಎಫ್‌ಎಸ್‌ಎಲ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯಿಂದಷ್ಟೆ ಕೊಲೆಗೆ ಕಾರಣ ತಿಳಿದು ಬರಬೇಕಿದೆ.
ಸ್ಥಳಕ್ಕೆ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಎಸ್‌ಪಿ ಮಿಥುನ್ ಎಚ್.ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಇರ್ಫಾನ್ ತಹಶೀಲ್ದಾರ್ ಕೈಗಳನ್ನು ಹಿಂಬದಿ ಕಟ್ಟಿಹಾಕಿ ಆ ಬಳಿಕ ಚಾಕು ಹಾಗೂ ಕೊಡಲಿಯಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಆ ಬಳಿಕ ಹಾಡಹಗಲೇ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಪೊಲೀಸರು ಬಂಧಿಸಿದ್ದಾರೆ. ನಂದಗಡ ಸೇರಿ ಸುತ್ತಮುತ್ತ ಗ್ರಾಮದಲ್ಲಿ ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್, ಬೀಗ ಹಾಕಿ ಊರಿಗೆ ಹೋಗಿದ್ದ ಮನೆಗಳನ್ನ ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದರು.
ಮನೆಯ ಬೀಗ ಒಡೆದು ಒಳಗೆ ನುಗ್ಗಿ ಕಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ದ ಖದೀಮರು ಇತ್ತೀಚೆಗೆ ಸರಣಿ ಕೃತ್ಯಗಳನ್ನು ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ ಪೊಲೀಸರು, ಕಳ್ಳತನ ಮಾಡಲು ಬಂದಾಗ ಕಾರ್ಯಾಚರಣೆ ನಡೆಸಿ ರೆಡ್‌ಹ್ಯಾಂಡ್ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹನುಮಂತ ದುರಗಮರ್ಗಿ, ಮಂಜುನಾಥ ಬಾಡಗಿ, ಶಂಕರ ಕಾರಿ, ಹನುಮಂತ ಕೊಂಚಿಕೊರವರ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 29ಗ್ರಾಂ ಚಿನ್ನ, 220ಗ್ರಾಂ ಬೆಳ್ಳಿ, ಎರಡು ಬೈಕ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.