
ಗದಗ (ಆ.6): ಮಗನಿಗೆ ಕೆಲಸ ಕೊಡುವಂತೆ ಮೈಗೆ ಮಲ ಬಳಿದುಕೊಂಡು ಪುರಸಭೆ ಎದುರು ವ್ಯಕ್ತಿಯೊಬ್ಬ ವಿಚಿತ್ರ ಪ್ರತಿಭಟನೆ ಮಾಡಿದ್ದಾನೆ. ಲಕ್ಷ್ಮೇಶ್ವರ ಪುರಸಭೆ ಎದುರು ಮಗನಿಗೆ ಕೆಲಸ ಕೊಡುವಂತೆ ವ್ಯಕ್ತಿ ಮಾಡಿರುವ ವಿಚಿತ್ರ ಪ್ರತಿಭಟನೆ ಕಂಡು ಜನರೇ ದಂಗಾಗಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪುರಸಭೆ ಕಚೇರಿ ಆವರಣದಲ್ಲಿ ವ್ಯಕ್ತಿ ಪ್ರತಿಭಟನೆ ಮಾಡಿದ್ದಾರೆ. ಸುರೇಶ್ ಬಸವನಾಯಕ್ ಎಂಬಾತನಿಂದ ಧರಣಿ ಸತ್ಯಾಗ್ರಹ ಮಾಡಿದ್ದ. ಪುರಸಭೆಯಲ್ಲಿ ಮಗನಿಗೆ ಕೆಲಸ ಕೊಡುವಂತೆ ಆತ ಪಟ್ಟು ಹಿಡಿದಿದ್ದ. ಇದಕ್ಕಾಗಿ ಮೈಗೆ ಮಲ ಬಳಿದುಕೊಂಡು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
40 ವರ್ಷದಿಂದ ಪುರಸಭೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ಈಗ ಮಗನಿಗೆ ಕೆಲಸ ಕೊಡಿ ಎಂದು ಸುರೇಶ್ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪುರಸಭೆಯವರು ಮ್ಯಾನ್ ಪವರ್ ಏಜನ್ಸಿ ಮೂಲಕ ಅರ್ಜಿ ಹಾಕುವಂತೆ ಹೇಳಿದ್ದಾರೆ. ಆದರೆ ಪಟ್ಟು ಸಡಿಲಿಸದ ಸುರೇಶ ತನ್ನ ತೋಳುಗಳಿಗೆ ಮಲ ಬಳಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.
ವಿಚಿತ್ರ ಪೊಟೆಸ್ಟ್ ನಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲ ಹೊತ್ತಿನ ಬಳಿಕ ಸುರೇಶನಿಗೆ ಸಮಾಧಾನ ಮಾಡಿ ಪೊಲೀಸರು ಅಲ್ಲಿಂದ ಕಳಿಸಿದ್ದಾರೆ.