ಭೋಪಾಲ್‌ನಲ್ಲಿ ಕಾಣಿಸಿ ಮತ್ತೆ ಮಾಯ; ಫರ್ವೇಜ್ ಚಲನವಲನ ಹೇಗಿತ್ತು? ಹೋಗಿದ್ದೆಲ್ಲಿಗೆ?

Published : Sep 30, 2026, 01:21 PM IST
Gadag

ಸಾರಾಂಶ

ಗದಗದಿಂದ ನಾಪತ್ತೆಯಾಗಿದ್ದ ಕೆಆರ್‌ಐಡಿಎಲ್ ಎಇಇ ಫರ್ವೇಜ್ ಭೋಪಾಲ್ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಉಜ್ಜಯಿನಿಯತ್ತ ಪ್ರಯಾಣ ಬೆಳೆಸಿರುವ ಶಂಕೆ ಇದೆ. ಸಚಿವ ಈಶ್ವರ ಖಂಡ್ರೆ ಅವರು ಫರ್ವೇಜ್ ತಂದೆಗೆ ಕರೆ ಮಾಡಿ ಧೈರ್ಯ ತುಂಬಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.

ಗದಗ: ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಗದಗ ಜಿಲ್ಲೆಯ KRIDL ಎಇಇ ಫರ್ವೇಜ್, ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಓಡಾಡಿದ ದೃಶ್ಯವನ್ನು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಭೋಪಾಲ್‌ ನಿಲ್ದಾಣದಿಂದ ಫರ್ವೇಜ್ ಹೋಗಿದ್ದೆಲ್ಲಿಗೆ ಎಂಬುದರ ಬಗ್ಗೆ ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ರೈಲು ನಿಲ್ದಾಣದಲ್ಲಿ ಫರ್ವೇಜ್ ಚಲನವಲನ ಹೇಗಿತ್ತು? ಅಲ್ಲಿಂದ ಯಾವ ರೈಲು ಏರಿದ್ರು ಎಂಬುದರ ಕುರಿತ ಎಕ್ಸ್‌ಕ್ಲೂಸಿವ್ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಲೋಕಲ್ ಟ್ರೈನ್ ಮುಖಾಂತರ ಉಜ್ಜಯಿನಿಯತ್ತ ಪ್ರಯಾಣ ಫರ್ವೇಜ್?

ಗದಗದಿಂದ ನಾಪತ್ತೆಯಾಗಿದ್ದ ಫರ್ವೇಜ್, ಭೋಪಾಲ್ ರೈಲು ನಿಲ್ದಾಣಕ್ಕೆ ತಲುಪಿ ಅಲ್ಲಿ ಸುಮಾರು ಮೂರು ರೈಲುಗಳನ್ನು ಏರಿ ಇಳಿದ ಬಳಿಕ, ಕೊನೆಗೆ ಲೋಕಲ್ ಟ್ರೈನ್ ಮುಖಾಂತರ ಉಜ್ಜಯಿನಿಯತ್ತ ಪ್ರಯಾಣ ಬೆಳೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸುಳಿವಿನ ಆಧಾರದ ಮೇಲೆ ಗದಗ-ಬೆಟಗೇರಿ ಪೊಲೀಸರು ಉಜ್ಜಯಿನಿಗೆ ತೆರಳಿದ್ದು, ಅಲ್ಲಿನ ಪ್ರಸಿದ್ಧ ಮಹಾಕಾಳ ದೇವಸ್ಥಾನ ಹಾಗೂ ಶಾಹಿ ಮಸೀದಿಗೆ ಫರ್ವೇಜ್ ಭೇಟಿ ನೀಡಿದ್ದಾನೆಯೇ ಎಂಬುದರ ಕುರಿತು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಇದಷ್ಟೇ ಅಲ್ಲದೆ, ಫರ್ವೇಜ್ ಉಜ್ಜಯಿನಿಯಿಂದ ರಾಜಸ್ಥಾನದ ಅಜ್ಮೇರ್ ಶರೀಫ್ ದರ್ಗಾಕ್ಕೆ ತೆರಳಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು, ಈ ಎಲ್ಲಾ ಮಾಹಿತಿಗಳನ್ನು ಪೊಲೀಸ್ ಮೂಲಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಖಚಿತಪಡಿಸಿವೆ.

ಫರ್ವೇಜ್ ತಂದೆಗೆ ಧೈರ್ಯ ಹೇಳಿದ ಈಶ್ವರ ಖಂಡ್ರೆ

ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಕೆಆರ್‌ಐಡಿಎಲ್ ಗದಗ ಉಪ ವಿಭಾಗದ ಎಇಇ ಫರ್ವೇಜ್ ಪತ್ತೆಗೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.

ಎಇಇ ಫರ್ವೇಜ್ ಕೆಲವು ದಿನಗಳಿಂದ ನಾಪತ್ತೆಯಾದ ಹಿನ್ನೆಲೆ ಸಚಿವರು ಮಂಗಳವಾರ ಬೆಂಗಳೂರಿನಲ್ಲಿ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ, ಮುಖ್ಯ ಎಂಜಿನಿಯರ್ ಗಳಾದ ತಿಮ್ಮರಾಜಪ್ಪ, ಶ್ರೀನಿವಾಸ್, ವೇಣುಗೋಪಾಲ್ ಹಾಗೂ ಗದಗದ ಎಂಜಿನಿಯರುಗಳೊಂದಿಗೆ ಸಭೆ ನಡೆಸಿದರು. ಬಳಿಕ ಫರ್ವೇಜ್ ತಂದೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ಹೇಳಿದರು.

ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಫರ್ವೇಜ್ ಹಣ ಪಾವತಿಗೆ ಸಂಬಂಧಿಸಿದಂತೆ ಆತಂಕ ಪಡುವ ಅಗತ್ಯವಿಲ್ಲ, ಫರ್ವೇಜ್ ನಿಮ್ಮನ್ನು ಸಂಪರ್ಕಿಸಿದರೆ, ಯಾವುದೇ ಸಮಸ್ಯೆ ಇದ್ದರೂ ಸರ್ಕಾರ ಅದನ್ನು ಪರಿಹರಿಸುತ್ತದೆ ಎಂದು ತಿಳಿಸಿ ಎಂಬ ಮಾಹಿತಿ ನೀಡಿ. ಮನೆಯವರಿಗೆಲ್ಲಾ ಧೈರ್ಯ ಹೇಳಿ ಎಂದರು. ಈ ಪ್ರಕರಣದ ಬಗ್ಗೆ ತನಿಖೆ ಮಾಡಲೂ ಸೂಚಿಸಲಾಗಿದೆ. ಫರ್ವೇಜ್ ಅವರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಈಶ್ವರ ಖಂಡ್ರೆ ಜಾಫರ್ ಅವರಿಗೆ ಧೈರ್ಯ ಹೇಳಿದರು.

PREV
Read more Articles on
click me!

Recommended Stories

ಹೊಸಪೇಟೆಯಲ್ಲಿ ಭೀಕರ ರೈಲು ಅಪಘಾತ ಅಣುಕು ಪ್ರದರ್ಶನ; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ ಪ್ರತ್ಯಕ್ಷಿಕೆ!
Breaking: ಮಂಗಳೂರು MRPL ನಲ್ಲಿ ಭಾರೀ ಸ್ಫೋಟ, ಆಕಾಶದೆತ್ತರ ದಟ್ಟ ಹೊಗೆ, ವಿಮಾನ ನಿಲ್ದಾಣದ ಗಾಜುಗಳು ಪುಡಿ ಪುಡಿ!