Gadag: ನಿವೃತ್ತಿ ನೆಪದಲ್ಲಿ DC ನಿವಾಸದಲ್ಲಿ ಅದ್ಧೂರಿ ಪಾರ್ಟಿ: ಡಿಜೆ ಹಾಡಿಗೆ ಡ್ಯಾನ್ಸ್

Published : Nov 23, 2026, 07:55 AM IST
Gadag DC

ಸಾರಾಂಶ

ಗದಗ ಜಿಲ್ಲಾದ್ಯಂತ ಭೀಕರ ಬರಗಾಲವಿದ್ದು ರೈತರು ಸಂಕಷ್ಟದಲ್ಲಿರುವಾಗಲೇ ನಿವೃತ್ತರಾಗಲಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಮ್ಮ ನಿವಾಸದಲ್ಲಿ ತಡರಾತ್ರಿವರೆಗೆ ಅದ್ಧೂರಿ ಪಾರ್ಟಿ ನಡೆಸಿದ್ದಾರೆ. ಅಧಿಕಾರಿಗಳೊಂದಿಗೆ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿರುವ ಇವರ ಮೋಜು ಮಸ್ತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ: ಇದೇ ನ. 30ರಂದು ನಿವೃತ್ತರಾಗಲಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಬೀಳ್ಕೊಡುಗೆ ಅಂಗವಾಗಿ ತಮ್ಮ ಅಧಿಕೃತ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವತಃ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಡ ರಾತ್ರಿ ವರೆಗೆ ಮೋಜು, ಮಸ್ತಿ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತ ನಿವೃತ್ತಿ ನೆಪದಲ್ಲಿ ಟೈಟ್‌ ಪಾರ್ಟಿ

ಜಿಲ್ಲಾದ್ಯಂತ ತೀವ್ರ ಬರಗಾಲವಿದ್ದು, ರೈತರು ಸಂಕಷ್ಣದಲ್ಲಿ ಇದ್ದಾರೆ. ಅವರ ನೆರವಿಗೆ ಧಾವಿಸಬೇಕಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತ ನಿವೃತ್ತಿ ನೆಪದಲ್ಲಿ ಟೈಟ್‌ ಪಾರ್ಟಿ ನಡೆಸಿದ್ದಾರೆ. ರೈತರು ಬರಗಾಲ, ಬೆಳೆಹಾನಿ ಹಾಗೂ ಬೆಳೆ ವಿಮೆ ಮತ್ತು ಪರಿಹಾರ ದೊರೆಯದೆ ಸಂಕಷ್ಟ ಎದುರಿಸುತ್ತಿರುವ ಸಂದರ್ಭ. ತಮ್ಮ ಅರ್ಹ ಬೇಡಿಕೆಗಳಿಗಾಗಿ ರೈತರು ಮನವಿ ಮಾಡಿದ ವೇಳೆಯಲ್ಲಿ ದರ್ಪ ತೋರಿದ್ದ ಇದೇ ಜಿಲ್ಲಾಧಿಕಾರಿ, ಇಂದು ಕುಣಿದು ಕುಪ್ಪಳಿಸಿದ್ದು ಜನತೆಯ ಸಿಡಿದೇಳುವಂತೆ ಮಾಡಿದೆ.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಸರ್ಕಾರಿ ನಿವಾಸದಲ್ಲಿ ಶನಿವಾರ ರಾತ್ರಿ ಅದ್ಧೂರಿ ಔತಣಕೂಟ ನಡೆದಿದೆ. ನಿವಾಸವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಔತಣಕೂಟದಲ್ಲಿ ಪಾಲ್ಗೊಂಡಿದ್ದ ಗಣ್ಯರು ಊಟ ಮುಗಿಸಿ ತೆರಳಿದ ಬಳಿಕವೂ ಕೆಲ ಅಧಿಕಾರಿಗಳು ತಡರಾತ್ರಿ ವರೆಗೆ ಸಂಭ್ರಮ ಮುಂದುವರಿಸಿದ್ದಾರೆ.

ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಜಾನಪದ ಹಾಡು ಹಾಗೂ ಡಿಜೆ ಸಂಗೀತಕ್ಕೆ ಅಧಿಕಾರಿಗಳು ಹೆಜ್ಜೆ ಹಾಕಿದ್ದು, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕೂಡ ಅವರೊಂದಿಗೆ ಕುಣಿದು ಸಂಭ್ರಮಿಸಿದ್ದಾರೆ. ಈ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

PREV
Read more Articles on
click me!

Recommended Stories

ಬೆಂಗಳೂರು ನಗರ ಜಿಲ್ಲೆಯಲ್ಲಿ ಇನ್ನು ಗ್ರಾಮ ಪಂಚಾಯ್ತಿಗಳೇ ಇಲ್ಲ: ಮೇಜರ್‌ ಸರ್ಜರಿಗೆ ಮುಂದಾದ ಸರ್ಕಾರ
ಎಲ್‌ನಿನೊ ಎಫೆಕ್ಟ್: ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಮೊದಲ ಬಾರಿ ಇಂತಹ ನಿರ್ಧಾರ!