Chikkamagaluru: ಬೆಳಗ್ಗೆ ಹಣ್ಣು ವ್ಯಾಪಾರ, ರಾತ್ರಿ ಮನೆ ದರೋಡೆ: ಖತರ್ನಾಕ್‌ ಕಳ್ಳನ ಬಳಿ ಗನ್‌ ಪತ್ತೆ

By Sathish Kumar KHFirst Published Jan 8, 2023, 9:44 PM IST
Highlights

ಮನೆ ದರೋಡೆ ಮಾಡುವ ಖತರ್ನಾಕ್ ಕಳ್ಳನ ಬಳಿ ಇತ್ತು ಪಿಸ್ತೂಲ್, ಗುಂಡು
ಚಿಕ್ಕಮಗಳೂರು ಹಣ್ಣಿನ ವ್ಯಾಪಾರಿಗೆ ಉಂಟು ಬೆಂಗಳೂರಿನ ಡಿ.ಜೆ.ಹಳ್ಳಿ ನಂಟು
ಚಿಕ್ಕಮಗಳೂರು ನಗರ ಪೊಲೀಸರ ಕಾರ್ಯಾಚರಣೆಯಿಂದ ಜೈಲು ಸೇರಿದ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜ.08):  ಚಿಕ್ಕಮಗಳೂರು ನಗರ ಪೊಲೀಸರು ರಾತ್ರಿ ವೇಳೆಯಲ್ಲಿ ನಗರದಲ್ಲಿ ಗಸ್ತು ತಿರುಗುವ ವೇಳೆಯಲ್ಲಿ ಖತರ್ನಾಕ್ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಆತನ ಬಳಿಯಿಂದ ವಶಕ್ಕೆ ತೆಗೆದುಕೊಂಡ ವಸ್ತುಗಳಿಂದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಆದರೆ, ಕಳ್ಳನಿಗೂ ಬೆಂಗಳೂರಿನ ಡಿ.ಜೆ.ಹಳ್ಳಿಯ ಕಾರ್ಪೆಂಟರ್‌ಗೂ ಇರುವ ನಂಟು ಪೊಲೀಸರ ತಲೆ ಕೆಡಿಸಿದೆ.

ಹೌದು ರಾತ್ರಿ ಮನೆಗಳ ಕಳ್ಳತನಕ್ಕೆ ತೆರಳಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲಿನ ಅತಿಥಿಯಾಗಿರುವ ಖತರ್ನಾಕ್‌ ಕಳ್ಳನ ಯೋಜನೆಯೇ ವಿಚಿತ್ರವಾಗಿದೆ. ರಾತ್ರಿ ಮನೆ ಕಳ್ಳತನ ಮಾಡುವ ಕೆಲಸ ಮಾಡಿದರೆ, ಬೆಳಿಗ್ಗೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದನು. ಆದರೆ, ಕಳ್ಳತನಕ್ಕೆ ತೆರಳಿ ಪೊಲೀಸರ ಕೈಗೆ ಸಿಲುಕಿರುವ ಕಳ್ಳನನ್ನು ಪರಿಶೀಲನೆ ನಡೆಸಿದ ಪೊಲೀಸರು ಪಿಸ್ತೂಲ್, ಗುಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಒಂದು ಬಂದೂಕು ಇಟ್ಟುಕೊಳ್ಳಲು ಸರ್ಕಾರದಿಂದ ಹಲವು ಕಾನೂನುಗಳು ಇದ್ದರೂ ಅವೆಲ್ಲ ನಿಯಮಗಳನ್ನು ಮೀರಿ ಕಳ್ಳನೊಬ್ಬ ಬಂದೂಕು ಇಟ್ಟುಕೊಂಡಿದ್ದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. 

ಖತರ್ನಾಕ್ ಕಳ್ಳನ ಬಳಿಯಿದ್ದ ಪಿಸ್ತೂಲ್, ಗುಂಡು ವಶ: ಚಿಕ್ಕಮಗಳೂರು ನಗರದ ಉಪ್ಪಳ್ಳಿ ನಿವಾಸಿ ಅಹ್ಮದ್ ಕಬೀರ್ ಬಂಧಿತ ಆರೋಪಿ. ಹಣ್ಣಿನ ವ್ಯಾಪಾರಿ ಆಗಿರುವ ಕಬೀರ್ ಬಳಿ ಪಿಸ್ತೂಲ್ ಹಾಗೂ 12 ಜೀವಂತ ಗುಂಡುಗಳ ಎರಡು ಮ್ಯಾಗ್ಜಿನ್ ಇದ್ದವು. ಕಾರಲ್ಲಿ ಕಬ್ಬಿಣದ ರಾಡ್, ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಎಲ್ಲವೂ ಇದ್ದವು. ಮೊನ್ನೆ ರಾತ್ರಿ ಗಸ್ತಿನಲ್ಲಿದ್ದ ನಗರ ಪೊಲೀಸರು ಈತನ ಕಾರು ಅಡ್ಡ ಹಾಕಿದಾಗ ಈ ಎಲ್ಲಾ ವಸ್ತುಗಳು ಸಿಕ್ಕಿವೆ. ಪೊಲೀಸರು ಠಾಣೆಗೆ ಕರೆತಂದು ಚೆಕ್ ಮಾಡಿದಾಗ ಇವನೊಬ್ಬ ದರೋಡೆ ಕೋರ ಅನ್ನೋದು ಗೊತ್ತಾಗಿದೆ. 

ಚಿಕ್ಕಮಗಳೂರು: ರಾಗಿ ರೈತರಿಗೆ ವರ್ತಕರು, ಅಧಿಕಾರಿಗಳಿಂದ ಧೋಖಾ...?

ಮನೆಗಳ ದರೋಡೆ ಮಾಡೋದು ಖಯಾಲಿ: ಈ ಆರೋಪಿಗೆ ಮನೆಗಳನ್ನ ಮಾತ್ರ ದರೋಡೆ ಮಾಡೋದು ಈತನ ಖಯಾಲಿ. ಚಿಕ್ಕಮಗಳೂರು ನಗರದ ನಗರ ಠಾಣೆಯಲ್ಲೇ ಈತನ ಮೇಲೆ 9 ಕೇಸ್‌ಗಳಿವೆ. ಶಿವಮೊಗ್ಗ ಹಾಗೂ ಬಾಳೆಹೊನ್ನೂರಿನಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ. ಆದರೆ,  ಪೊಲೀಸರು ಕೇಳಿದರೆ ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತೇನೆ ಎಂದು ಉತ್ತರಿಸಿದ್ದಾನೆ. ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದು, ಆಗಾಗ ಚಿಕ್ಕಮಗಳೂರಿಗೆ ಬಂದು ದರೋಡೆ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹಣ್ಣಿನ ವ್ಯಾಪಾರಿ ಬಳಿ ಗನ್ ಎಲ್ಲಿಂದ ಬಂತು?: ಹಣ್ಣಿನ ವ್ಯಾಪಾರಿಗೆ ಗನ್ ಎಲ್ಲಿ ಸಿಕ್ತು ಅಂತ ಪೊಲೀಸರು ತನಿಖೆ ಮಾಡಿದಾಗ, ಬೆಂಗಳೂರಿನ ಡಿ.ಜೆ.ಹಳ್ಳಿಯ ಕಾರ್ಪೆಂಟರ್ ವಾಸೀಮ್ ಎಂಬುವನ ಕಡೆಯಿಂದ ಗನ್‌ ಪಡೆದುಕೊಂಡಿದ್ದಾನೆ. ಪೊಲೀಸರು ಈಗ ವಾಸೀಮ್ ಬುಡಕ್ಕೂ ಕೈ ಹಾಕಿ ಅವನ ನೆಟ್ವರ್ಕ್ ಹಿಂದೆ ಬಿದ್ದಿದ್ದಾರೆ. ಸದ್ಯಕ್ಕೆ ಬಂಧಿತನಿಂದ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ. 292 ಗ್ರಾಂ ಬಂಗಾರ, 300 ಗ್ರಾಂ ಬೆಳ್ಳಿ, ಒಂದು ಕಾರು ಹಾಗೂ ಬೈಕನ್ನ ವಶಪಡಿಸಿಕೊಂಡಿದ್ದಾರೆ. ಈತನ ಮೇಲೆ ಕೇವಲ ಚಿಕ್ಕಮಗಳೂರಷ್ಟೆ ಬೇರೆ ಕಡೆಯೂ ಪ್ರಕರಣಗಳಿರಬಹುದು ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಧಿತನಿಂದಲೂ ಎಲ್ಲೆಲ್ಲಿ ಕಳ್ಳತನ ಮಾಡಿದ್ದೀಯಾ ಎಂದು ತನಿಖೆ ನಡೆಸುತ್ತಿದ್ದಾರೆ. 

ಚಿಕ್ಕಮಗಳೂರು: ಬಿಜೆಪಿ ಟಿಕೆಟ್‌ಗಾಗಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ..!

ಮತ್ತಷ್ಟು ದರೋಡೆ ಪ್ರಕರಣಗಳಿರುವ ಸಾಧ್ಯತೆ: ಕಾರಲ್ಲಿ ಗನ್ ಜೊತೆ, ಕಬ್ಬಿಣದ ರಾಡ್, ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಎಲ್ಲವನ್ನೂ ಇಟ್ಕೊಂಡು ಆತ್ಮರಕ್ಷಣೆ ನಾಟಕವನ್ನಾಡಿ ತಪ್ಪಿಸುವ ಪ್ಲಾನ್ ಅನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಒಟ್ಟಾರೆ, ಈತನ ಕಳ್ಳತನ ಸ್ಟೈಲ್ ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಸ್ವಂತ ಊರು ಚಿಕ್ಕಮಗಳೂರು. ಹಾಲಿ ವಾಸ ಬೆಂಗಳೂರು. ಅಲ್ಲೇ ಹಣ್ಣಿನ ವ್ಯಾಪಾರ. ಆದರೆ 9 ಪ್ರಕರಣಗಳಿರೋದು ಮಾತ್ರ ಚಿಕ್ಕಮಗಳೂರಲ್ಲಿ. ಇದು ಪೊಲೀಸರಿಗೆ ಇನ್ನೆಷ್ಟು ಕೇಸ್ ಇರಬಹುದು, ಎಲ್ಲೆಲ್ಲಿ ಕಳ್ಳತನ-ದರೋಡೆ ಮಾಡಿರಬಹುದು ಎಂಬ ಅನುಮಾನದಿಂದ ವಿಚಾರಣೆಯನ್ನ ಮತ್ತಷ್ಟು ತೀವ್ರಗೊಳಿಸಿದ್ದಾರೆ.

click me!