ಸಿರುಗುಪ್ಪ: ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷ, ಹೌಹಾರಿದ ಜನತೆ..!

By Kannadaprabha News  |  First Published Aug 11, 2021, 3:34 PM IST

*  ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಮೊಸಳೆ ಪ್ರತ್ಯಕ್ಷ
*  ಚರಂಡಿಯಿಂದ ಹೊರ ಬರುತ್ತಿರುವುದನ್ನು ನೋಡಿ ಹೌಹಾರಿದ ಜನತೆ
*  ಮೊಸಳೆ ಹಿಡಿಯುವ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ


ಸಿರುಗುಪ್ಪ(ಆ.11): ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹಿಂಬದಿಯಲ್ಲಿರುವ ಶೌಚಾಲಯ ಕಟ್ಟಡದ ಹಿಂದಿರುವ ಕೇವಲ ಒಂದು ಅಡಿ ಅಗಲದ ಚರಂಡಿಯಲ್ಲಿ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಯು ಮೊಸಳೆ ಚರಂಡಿಯಿಂದ ಹೊರ ಬರುತ್ತಿರುವುದನ್ನು ನೋಡಿ ಹೌಹಾರಿ ಓಡಿ ಬಂದಿ​ದ್ದಾನೆ. 

Tap to resize

Latest Videos

undefined

ದಾಂಡೇಲಿ ಬಳಿ ಗ್ರಾಮಕ್ಕೆ ನುಗ್ಗಿದ ಮೊಸಳೆ: ಕಕ್ಕಾಬಿಕ್ಕಿಯಾದ ಜನತೆ..!

ಬಳಿಕ ಜನರು ಮೊಸಳೆಯನ್ನು ನೋಡಲು ಮತ್ತು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಲು ಮುಗಿಬಿದ್ದರು. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆ ಹಿಡಿಯುವ ಕಾರ್ಯಾಚರಣೆ ನಡೆಸಿದರು.
 

click me!