ಮೈಸೂರು ವಿಭಾಗದ 30 ರೈಲ್ವೇ ನಿಲ್ದಾಣಕ್ಕೆ ಉಚಿತ ವೈಫೈ ಸೌಲಭ್ಯ

By Kannadaprabha NewsFirst Published Jul 19, 2019, 3:21 PM IST
Highlights

ಇಂಟರ್‌ನೆಟ್‌ನಲ್ಲಿ ಬ್ರೌಸ್ ಮಾಡುತ್ತಲೇ ಇರುವ ಡಾಟಾ ಪ್ರಿಯರಿಗೆ ಸಂತಸದ ಸುದ್ದಿ. ಕೇಂದ್ರ ಸರ್ಕಾರದ ಡಿಜಿಟಲ್‌ ಇಂಡಿಯಾ ಯೋಜನೆಯಡಿ ನೈಋುತ್ಯ ರೈಲ್ವೆ ವ್ಯಾಪ್ತಿಯ 125 ರೈಲು ನಿಲ್ದಾಣಗಳಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.

ಮೈಸೂರು(ಜು.19): ಕೇಂದ್ರ ಸರ್ಕಾರದ ಡಿಜಿಟಲ್‌ ಇಂಡಿಯಾ ಯೋಜನೆಯಡಿ ರಾಜ್ಯದ ರೈಲು ನಿಲ್ದಾಣಗಳಿಗೆ ಉಚಿತ ವೈಫೈ ಕಲ್ಪಿಸುವ ಉದ್ದೇಶದೊಂದಿಗೆ ಈಗ ಹೊಸದಾಗಿ ನೈಋುತ್ಯ ರೈಲ್ವೆ ವ್ಯಾಪ್ತಿಯ 125 ರೈಲು ನಿಲ್ದಾಣಗಳಿಗೆ ಉಚಿತ ವೈಫೈ ಕಲ್ಪಿಸಲಾಗಿದೆ.

2016-17 ರಿಂದ 2017-18ರವರೆಗೆ ಮೊದಲ ಹಂತದಲ್ಲಿ ನೈಋುತ್ಯ ರೈಲ್ವೆಯ 153 ರೈಲು ನಿಲ್ದಾಣಗಳಿಗೆ ವೈಫೈ ಸೌಲಭ್ಯ ಕಲ್ಪಿಸಲಾಗಿತ್ತು. ಈಗ ಹೊಸದಾಗಿ ಪ್ರಸಕ್ತ ಸಾಲಿಗೆ 125 ನಿಲ್ದಾಣಗಳಿಗೆ ಈ ಸೌಲಭ್ಯ ಕಲ್ಪಿಸಲು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅನುಮೋದನೆ ನೀಡಿದ್ದಾರೆ. ಗೂಗಲ್‌ ಮತ್ತು ರೈಲ್‌ವೈರ್‌ ಜೊತೆಗೂಡಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಪ್ರತಿನಿತ್ಯ 20 ಸಾವಿರ ಜನರಿಗೆ ಯೋಜನೆ ಫಲಾನುಭವ:

ಈ ಬಾರಿ 125 ರೈಲು ನಿಲ್ದಾಣಗಳ ಪೈಕಿ ಹುಬ್ಬಳ್ಳಿ ವಿಭಾಗದ 58 ನಿಲ್ದಾಣ, ಬೆಂಗಳೂರು ವಿಭಾಗದ 37 ಮತ್ತು ಮೈಸೂರು ವಿಭಾಗದ 30 ನಿಲ್ದಾಣಗಳಿಗೆ ಇದರ ಸೌಲಭ್ಯ ಲಭ್ಯವಾಗಲಿದೆ. ವೈಫೈಗೆ ಹೋಗಿ ಒನ್‌ ಟೈಮ್‌ ಒಟಿಪಿ ಪಡೆದು ಈ ಸೇವೆ ಬಳಸಬಹುದು. ಪ್ರತಿನಿತ್ಯ ಸುಮಾರು 20 ಸಾವಿರ ಮಂದಿ ಪ್ರಯಾಣಿಕರು ಈ ಸೇವೆ ಪಡೆಯುವರು. ಮುಂದಿನ ಹಂತದಲ್ಲಿ ಉಳಿದ 92 ರೈಲು ನಿಲ್ದಾಣಗಳಿಗೆ ಈ ಸೌಲಭ್ಯ ದೊರಕಿಸಿಕೊಡಲಾಗುವುದು.

ರಾಜ್ಯದ ವೈಫೈ ಪಟ್ಟಣದಲ್ಲಿ ಒಬ್ಬರಿಗೆ ದಿನಕ್ಕೆ 1 ಜಿಬಿ ಉಚಿತ ಇಂಟರ್‌ನೆಟ್

ಒಂದು ಅಧ್ಯಯನದ ಪ್ರಕಾರ ಕೇರಳದಲ್ಲಿ ಓರ್ವ ಮಹಿಳೆಯು ರೈಲ್ವೆ ನಿಲ್ದಾಣದಲ್ಲಿ ಆಟೋ ಓಡಿಸುತ್ತ, ಈ ವೈಫೈ ಸೇವೆ ಪಡೆದುಕೊಂಡು ತನ್ನ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ತನ್ನ ಮಗನಿಗೆ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಮುಂಬೈನಲ್ಲಿ ಫ್ಯಾಷನ್‌ ಡಿಸೈನಿಂಗ್‌ ವಿದ್ಯಾರ್ಥಿಯು ಈ ಸೌಲಭ್ಯ ಬಳಸಿಕೊಂಡು ತನ್ನ ಕ್ರಿಯಾಶೀಲತೆಯನ್ನು ಪ್ರದರ್ಶಿಸಿ ಉದ್ಯೋಗ ದೊರಕಿಸಿಕೊಂಡ ಉದಾಹರಣೆ ಇದೆ. ಹೀಗೆ ಉಚಿತ ವೈಫೈ ಅನೇಕರಿಗೆ ನೆರವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

click me!