ಮೈಸೂರು ರೈಲ್ವೆಯ ಎಲ್ಲ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ

By Kannadaprabha NewsFirst Published Aug 18, 2019, 1:48 PM IST
Highlights

ಮೈಸೂರು ರೈಲ್ವೆ ವಿಭಾಗದ ಎಲ್ಲ ನಿಲ್ದಾಣಗಳಲ್ಲಿ ಉಚಿತ ವೈಫೈ- ಬ್ರಾಡ್‌ಬ್ಯಾಂಡ್‌ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿಯ ಡಿಜಿಟಲ್‌ ಇಂಡಿಯಾ ಆಶಯವನ್ನು ರೈಲ್ವೆ ಇಲಾಖೆ ಈ ಮೂಲಕ ಈಡೇರಿಸಿದೆ. ರೈಲ್ವೆ ಸಚಿವಾಲಯವು ತನ್ನ 100 ದಿನಗಳ ಕ್ರಿಯಾ ಯೋಜನೆಯಲ್ಲಿ ಭಾರತೀಯ ರೈಲ್ವೆಯ 4791 ನಿಲ್ದಾಣಗಳಲ್ಲಿ ರೈಲ್ವೆ ಬಳಕೆದಾರರಿಗೆ ವೈಫೈ ಬ್ರಾಡ್‌ ಬ್ಯಾಂಡ್‌ ಸೌಲಭ್ಯವನ್ನು ಒದಗಿಸುವ ಪ್ರಸ್ತಾಪ ಮಾಡಿತ್ತು.

ಮಂಗಳೂರು(ಆ.18): ಮೈಸೂರು ರೈಲ್ವೆ ವಿಭಾಗದ ಎಲ್ಲ ನಿಲ್ದಾಣಗಳಲ್ಲಿ ಉಚಿತ ವೈಫೈ- ಬ್ರಾಡ್‌ಬ್ಯಾಂಡ್‌ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿಯ ಡಿಜಿಟಲ್‌ ಇಂಡಿಯಾ ಆಶಯವನ್ನು ರೈಲ್ವೆ ಇಲಾಖೆ ಈ ಮೂಲಕ ಈಡೇರಿಸಿದೆ.

ರೈಲ್ವೆ ಸಚಿವಾಲಯವು ತನ್ನ 100 ದಿನಗಳ ಕ್ರಿಯಾ ಯೋಜನೆಯಲ್ಲಿ ಭಾರತೀಯ ರೈಲ್ವೆಯ 4791 ನಿಲ್ದಾಣಗಳಲ್ಲಿ ರೈಲ್ವೆ ಬಳಕೆದಾರರಿಗೆ ವೈಫೈ ಬ್ರಾಡ್‌ ಬ್ಯಾಂಡ್‌ ಸೌಲಭ್ಯವನ್ನು ಒದಗಿಸುವ ಪ್ರಸ್ತಾಪ ಮಾಡಿತ್ತು.

ಈ ನಿರ್ದೇಶನದ ಅನುಸಾರ ಮೈಸೂರು ವಿಭಾಗದ ಪ್ರಾದೇಶಿಕ ವ್ಯಾಪ್ತಿಗೆ ಒಳಪಡುವ ಹಾಲ್ಟ್ ನಿಲ್ದಾಣಗಳನ್ನು ಹೊರತುಪಡಿಸಿ ಎಲ್ಲ 85 ಉಪನಗರ ರೈಲ್ವೆ ನಿಲ್ದಾಣಗಳಿಗೆ ಈಗ ಉಚಿತ ವೈಫೈ ಒದಗಿಸಲಾಗಿದೆ. ಪ್ರಯಾಣಿಕರು ಮೊದಲ 30 ನಿಮಿಷಗಳವರೆಗೆ ಹೈಸ್ಪೀಡ್‌ ಇಂಟರ್ನೆಟ್‌ನ್ನು ಉಚಿತವಾಗಿ ಬಳಸಬಹುದಾಗಿದೆ.

ರೈಲ್ವೆ ಹಳಿಗಳ ಉದ್ದಕ್ಕೂ ಪ್ಯಾನ್‌ ಇಂಡಿಯಾ ಆಪ್ಟಿಕ್‌ ಫೈಬರ್‌ ನೆಟ್ವರ್ಕ್ ಹೊಂದಿರುವ ಸಾರ್ವಜನಿಕ ವಲಯದ ರೈಲ್‌ಟೆಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಸಂಸ್ಥೆಯು ಎಕ್ಸಿಕ್ಯೂಟಿಂಗ್‌ ಏಜೆನ್ಸಿಯಾಗಿದ್ದು, ತಾಂತ್ರಿಕ ಮೂಲಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಟಾಟಾ ಟ್ರಸ್ಟ್‌ ಮಾಡಿದೆ.

ಒಂದೂ ಕಾಲು ರು. ಹರಕೆ ಹೊತ್ತ ಯದುವೀರ್ ಒಡೆಯರ್

ರೈಲ್‌ಟೆಲ್‌ನ ಚಿಲ್ಲರೆ ಬ್ರಾಡ್‌ಬ್ಯಾಂಡ್‌ ವಿತರಣಾ ಮಾದರಿ ರೈಲ್‌ ವೈರ್‌ ಅಡಿಯಲ್ಲಿ ಪ್ರಯಾಣಿಕರಿಗೆ ವೈಫೈ ಸೇವೆಗಳನ್ನು ಒದಗಿಸಲಾಗುತ್ತಿದೆ. ಬಳಕೆದಾರರಿಗೆ ಉತ್ತಮ ಇಂಟರ್ನೆಟ್‌ ಅನುಭವವನ್ನು ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಹೆಚ್ಚಿನ ರೆಸಲ್ಯೂಶನ್‌ ಇರುವ ವಿಡಿಯೊಗಳನ್ನು ಸ್ಟ್ರೀಮಿಂಗ್‌ ಮಾಡಲು, ತಮ್ಮ ಕಚೇರಿ ಕೆಲಸವನ್ನು ಆನ್‌ಲೈನ್‌ಲ್ಲಿ ಮಾಡಲು ಈ ಸೌಲಭ್ಯವನ್ನು ಬಳಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

click me!