ಪರಿಹಾರ ಕೇಂದ್ರಗಳಾದ ಶಾಲೆಗಳು : ಆಗಸ್ಟ್ 20ರವರೆಗೆ ರಜೆ ವಿಸ್ತರಣೆ

Published : Aug 15, 2019, 02:52 PM IST
ಪರಿಹಾರ ಕೇಂದ್ರಗಳಾದ ಶಾಲೆಗಳು :  ಆಗಸ್ಟ್ 20ರವರೆಗೆ ರಜೆ ವಿಸ್ತರಣೆ

ಸಾರಾಂಶ

ರಾಜ್ಯದಲ್ಲಿ ಉಂಟಾದ ಭಿಕರ ಪ್ರವಾಹ ಪರಿಸ್ಥಿತಿಗೆ ಹಲವು ಜಿಲ್ಲೆಗಳು ತತ್ತರಿಸಿವೆ. ಶಾಲೆಗಳು ಪರಿಹಾರ ಕೇಂದ್ರಗಳಾಗಿ ಮಾರ್ಪಾಡಾಗಿದ್ದು, ಇದರಿಂದ ಶಾಲೆಗಳ ರಜೆ ವಿಸ್ತರಣೆ ಮಾಡಲಾಗಿದೆ. 

ಬೆಳಗಾವಿ [ಆ.15] :  ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಹಲವೆಡೆ ಭೂ ಕುಸಿತವಾಗಿದೆ. ಸಂಚಾರ ಅಸ್ತವ್ಯಸ್ತವಾಗಿದೆ. 

ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು, ಬೆಳಗಾವಿ ಜಿಲ್ಲೆಯ ಶಾಲೆಗಳಲ್ಲಿ ಪರಿಹಾರ ಕೇಂದ್ರ  ತೆರೆದಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ. 

ನೂರಾರು ಜನರನ್ನು ಶಾಲೆಗಳ ಪರಿಹಾರ ಕೇಂದ್ರಗಳಲ್ಲಿ ಇರಿಸಲಾಗಿದ್ದು, ಆಗಸ್ಟ್ 20ರವರೆಗೂ  ಕೂಡ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದ 17 ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ್ದು, ಇಲ್ಲಿನ ಲಕ್ಷಾಂತರ ಜನರು ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ. ನೆಲೆ ಇಲ್ಲದೇ ಎಲ್ಲವನ್ನೂ ಕಳೆದುಕೊಂಡು ಪರದಾಡುವ ಸ್ಥಿತಿಯಲ್ಲಿದ್ದಾರೆ. ಇವರಿಗೆಲ್ಲಾ ತಾತ್ಕಾಲಿಕವಾಗಿ ಇಂತಹ ಪರಿಹಾರ ಕೇಂದ್ರಗಳೇ ಆಶ್ರಯವಾಗಿವೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!