ವಾಹನ ಮಾಲೀಕರೇ ಗಮನಿಸಿ: ಫಾಸ್ಟ್ಯಾಗ್‌ ಸ್ಟಿಕ್ಕರ್‌ ಫ್ರೀ

By Kannadaprabha NewsFirst Published Feb 15, 2020, 12:03 PM IST
Highlights

ಟೋಲ್‌ಗಳಲ್ಲಿ  ಫೆ.29ರವರೆಗೂ ಲಭ್ಯ|ಫಾಸ್ಟ್ಯಾಗ್‌ ಸ್ಟಿಕ್ಕರ್‌ ಉಚಿತವಾಗಿ ವಿತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ|ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್‌ ಮೂಲಕ ಮಾತ್ರ ಶುಲ್ಕ ಪಾವತಿ ಕಡ್ಡಾಯ|

ಬೆಂಗಳೂರು[ಫೆ.15]:  ಸಾಕಷ್ಟು ಬಾರಿ ಅವಕಾಶ ನೀಡಿರುವ ಹೊರತಾಗಿಯೂ ಈವರೆಗೆ ಶೇ.100 ರಷ್ಟು ವಾಹನಗಳು ಫಾಸ್ಟ್ಯಾಗ್‌ ಖರೀದಿ ಮಾಡದಿರುವ ಹಿನ್ನೆಲೆಯಲ್ಲಿ ಫೆ.15ರಿಂದ 29ರವರೆಗೆ ಫಾಸ್ಟ್ಯಾಗ್‌ ಸ್ಟಿಕ್ಕರ್‌ಗಳನ್ನು ಉಚಿತವಾಗಿ ವಿತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ.

ಫಾಸ್ಟ್ಯಾಗ್‌ : ದುಪ್ಪಟ್ಟು ಶುಲ್ಕಕ್ಕೆ ತಕರಾರು

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್‌ ಮೂಲಕ ಮಾತ್ರ ಶುಲ್ಕ ಪಾವತಿ ಕಡ್ಡಾಯ ಮಾಡಲಾಗಿದೆ. ಆದರೆ, ನೂರಕ್ಕೆ ನೂರರಷ್ಟು ವಾಹನಗಳು ಖರೀದಿ ಮಾಡದಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಸ್ಟಿಕ್ಕರ್‌ಗಳನ್ನು ವಿತರಿಸಲಾಗುತ್ತಿದೆ. ಫಾಸ್ಟ್ಯಾಗ್‌ ಖರೀದಿಗೆ 100ರಿಂದ 200 ರು. ಪ್ರಕ್ರಿಯೆ ಶುಲ್ಕ ಮತ್ತು 200 ರು. ಭದ್ರತಾ ಠೇವಣಿ ಪಾವತಿಸಬೇಕಿದೆ. ಅದರ ಜತೆಗೆ ಟ್ಯಾಗ್‌ ಸಕ್ರಿಯಗೊಳಿಸಲು ವಾಲೆಟ್‌ ರಚಿಸಿ 100 ರು. ರೀಚಾರ್ಜ್ ಮಾಡಬೇಕಿದೆ. ಆದರೆ, ಫಾಸ್ಟ್ಯಾಗ್‌ ಖರೀದಿ ಕುರಿತು ವಾಹನ ಮಾಲೀಕರನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಫಾಸ್ಟ್ಯಾಗ್‌ : ಎರಡು ದಿನವಾದ್ರೂ ತಪ್ಪದ ವಾಹನ ಸವಾರರ ಬವಣೆ

ಈ ಆದೇಶದಂತೆ ಟೋಲ್‌ ಪ್ಲಾಜಾ, 22 ಬ್ಯಾಂಕ್‌ಗಳಲ್ಲಿ ಫೆ.29ರವರೆಗೆ ಪ್ರಕ್ರಿಯೆ ಶುಲ್ಕ ಮತ್ತು ಭದ್ರತಾ ಠೇವಣಿಯಿಲ್ಲದೆ ಫಾಸ್ಟ್ಯಾಗ್‌ ವಿತರಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಹಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಲಿದೆ. ಆದರೆ, ಫಾಸ್ಟ್ಯಾಗ್‌ ಸ್ಟಿಕ್ಕರ್‌ ಪಡೆಯುವಾಗ ಕನಿಷ್ಠ 100 ರು.ಗಳನ್ನು ಮಾತ್ರ ಕಡ್ಡಾಯವಾಗಿ  ರೀಚಾರ್ಜ್ ಮಾಡಬೇಕು.

ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಸಲು ಕೊನೆಯ ದಿನ

 ಈ ಕ್ಷಣದ ಪ್ರಮುಖ ಸುದ್ದಿಗಳು

"

click me!