ಬ್ಯಾಂಕ್‌ ಗ್ರಾಹಕರೇ ಹುಷಾರ್‌: ಲಾಕ್‌ಡೌನ್‌ ಹೆಸರಲ್ಲಿ 50 ಸಾವಿರ ಪಂಗನಾಮ..!

Kannadaprabha News   | Asianet News
Published : Apr 15, 2020, 07:22 AM IST
ಬ್ಯಾಂಕ್‌ ಗ್ರಾಹಕರೇ ಹುಷಾರ್‌: ಲಾಕ್‌ಡೌನ್‌ ಹೆಸರಲ್ಲಿ 50 ಸಾವಿರ ಪಂಗನಾಮ..!

ಸಾರಾಂಶ

ಬ್ಯಾಂಕಿನ ಖಾತೆ ವಿವರ ಪಡೆದು 50 ಸಾವಿರ ವಂಚಿಸಿದ ಖದೀಮ| ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣ| ಬ್ಯಾಂಕಿನ ಖಾತೆ ವಿವರ ಪಡದು ವಂಚನೆ|

ಹುಬ್ಬಳ್ಳಿ(ಏ.15): ಲಾಕ್‌ಡೌನ್‌ ಹೆಸರಿನಲ್ಲಿ ಬ್ಯಾಂಕಿನ ಖಾತೆ ವಿವರ ಪಡೆದು 50 ಸಾವಿರ ಪಂಗನಾಮ ಹಾಕಿದ ಘಟನೆಯೊಂದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. 

ವ್ಯಕ್ತಿಯೊಬ್ಬರಿಗೆ ಅಪರಿಚಿತ ಕರೆ ಮಾಡಿ ತನ್ನನ್ನು ಬ್ಯಾಂಕ್‌ ಸಿಬ್ಬಂದಿ ಎಂದು ಪರಿಚಯಿಸಿಕೊಂಡು, ಪ್ರಧಾನಿ ಪ್ರತಿಯೊಬ್ಬರ ಖಾತೆಗೆ 2 ಸಾವಿರ ಹಾಕುತ್ತಿದ್ದಾರೆ. ಅದಕ್ಕೆ ಬ್ಯಾಂಕಿನ ಖಾತೆ ವಿವರ ಬೇಕೆಂದು ಪಡೆದುಕೊಂಡಿದ್ದಾನೆ. 

ಮದ್ಯ ಪ್ರಿಯರೇ ಎಚ್ಚರ: ಎಣ್ಣೆ ಆಸೆ ತೋರಿಸಿ ವಂಚನೆ

ಮೊಬೈಲ್‌ಗೆ ಬಂದ ಓಟಿಪಿ ಪಡೆದು 50,890 ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ. ಇದರಿಂದ ಹಣ ಕಳದುಕೊಂಡವರು ಕಂಗಾಲಾಗಿದ್ದಾರೆ. ಲಾಕ್‌ಡೌನ್‌ ಅನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಆನ್‌ಲೈನ್‌ನ್ನಲ್ಲೇ ಮದ್ಯ ಮಾರಾಟ ಸೇರಿದಂತೆ ವಿವಿಧ ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಜನರು ಜಾಗೃತರಾಗುವುದು ಅವಶ್ಯಕವಾಗಿದೆ. 
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!