ಸುಳ್ಯದಲ್ಲಿ ಭೀಕರ ಅಪಘಾತ, ಕೊಡಗಿನ ಕುಟುಂಬದ ನಾಲ್ವರ ದುರ್ಮರಣ

By Web Desk  |  First Published Oct 1, 2019, 6:11 PM IST

ನಾಲ್ವರ ಜೀವ ಬಲಿ ಪಡೆದ ಭೀಕರ ರಸ್ತೆ ಅಪಘಾತ/ ಸುಳ್ಯ ತಾಲೂಕಿನಲ್ಲಿ ನಡೆದ ಅಪಘಾತ/ಕಾರು ಮತ್ತು ಲಾರಿ ನಡುವೆ ಡಿಕ್ಕಿ/ ಮೃತರನ್ನು ಕೊಡಗಿನ ನಾಪೋಕ್ಲು ಸಮೀಪದ ಕೊಟ್ಟಮುಡಿಯವರೆಂದು ಗುರುತಿಸಲಾಗಿದೆ


ಸುಳ್ಯ/ಮಡಿಕೇರಿ[ಅ. 01] ಭೀಕರ ರಸ್ತೆ ಅಪಘಾತ ನಾಲ್ಕು ಜೀವಗಳನ್ನು ಸ್ಥಳದಲ್ಲಿಯೇ ಬಲಿ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ಸಂಭವಿಸಿದಭೀಕರ ಅಪಘಾತದಲ್ಲಿ ನಾಲ್ವರ ಪ್ರಾಣ ಹೊತ್ತೊಯ್ದಿದೆ.

ಕಾರು ಮತ್ತು ಲಾರಿ ಮಧ್ಯೆ ಭೀಕರ ಅಪಘಾತವಾಗಿದೆ. ಮೃತರರನ್ನು ಕೊಡಗು ಜಿಲ್ಲೆಯ ಮೊಣ್ಣಂಗೇರಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಸುಳ್ಯ ಸಮೀಪದ ಅಡ್ಕಾರ್ ಎಂಬಲ್ಲಿ  ಸ್ವಿಫ್ಟ್ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಪೋಕ್ಲು ಸಮೀಪದ ಕೊಟ್ಟಮುಡಿಯ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Tap to resize

Latest Videos

ಅವಘಡಕ್ಕೀಡಾದ ಕಾರು ಎಂ.ಇ. ಅಬ್ದುಲ್ ರೆಹಮಾನ್ ಎಂಬುವರಿಗೆ ಸೇರಿದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟು,  ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಭೀಮಾತೀರದ ಕುಖ್ಯಾತಿ ಬಾಗಪ್ಪ ಹರಿಜನ ಪತ್ನಿ ಅಪಘಾತದಲ್ಲಿ ಸಾವು

ಅಪಘಾತದಲ್ಲಿ ಸಾವನ್ನಪ್ಪಿದವರು ಕೊಟ್ಟಮುಡಿಯ ಹಸೈನಾರ್ ಹಾಜಿ ಹಾಗೂ ಅವರ ಮೂವರು ಮಕ್ಕಳು. ಸಂಜೆ 4 ಗಂಟೆ ಸುಮಾರಿಗೆ ಅಪಘಾತ ನಡೆದಿದೆ.  ಗಂಭೀರ ಗಾಯಗೊಂಡ ಉಮ್ಮರ್ ಫಾರುಕ್ ಎಂಬವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ದುರ್ಮರಣಕ್ಕೆ ಗುರಿಯಾದವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ತಂದೆ ಹಾಗೂ ಮಕ್ಕಳಾಗಿದ್ದಾರೆ. ಮೃತರನ್ನು ನಾಪೊಕ್ಲು  ಕೊಟ್ಟಮುಡಿಯ ಹಸೈನಾರ್ ಹಾಜಿ(80) ,  ಇಬ್ರಾಹಿಂ(55) . ಅಬ್ದುಲ್ ರಹಿಮಾನ್(50) , ಹ್ಯಾರಿಸ್ (45 ) ಗುರುತಿಸಲಾಗಿದೆ.

click me!