ಮುಸ್ಲಿಂ ಮಹಿಳೆಯರನ್ನು ಭಟ್ಕಳಕ್ಕೆ ಕರೆದುಕೊಂಡು ಹೋಗುವ ನೆಪಮಾಡಿ, ಬಾಡಿಗೆ ವಾಹನ ಗೊತ್ತು ಮಾಡಿಕೊಂಡು, ಅದೇ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಿದವರು ಇದೀಗ ಸಿಕ್ಕಿಬಿದ್ದಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜೂ.10): ಗೋ ನಿಷೇಧ ಕಾಯ್ದೆ ಜಾರಿಗೆ ಬಂದರೂ ಕರಾವಳಿ ಭಾಗದಲ್ಲಿ ಅಕ್ರಮ ಗೋಸಾಗಾಟ ಮಾತ್ರ ನಿಂತಿಲ್ಲ. ಅಕ್ರಮವಾಗಿ ಗೋಮಾಂಸ ಸಾಗಿಸುವುದಕ್ಕೆ ನಾನಾ ತಂತ್ರಗಳನ್ನು ಮಾಡುವ ದುಷ್ಕರ್ಮಿಗಳು, ದಿನಕ್ಕೊಂದು ಉಪಾಯ ಹೂಡಿ, ನಾಜೂಕಾಗಿ ಕೆಲಸ ಪೂರೈಸಿ ಕಿಸೆ ತುಂಬಿಸಿಕೊಳ್ಳುತ್ತಾರೆ. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮತ್ತೊಮ್ಮೆ ಅದು ಸಾಬೀತಾಗಿದೆ.
undefined
ಮುಸ್ಲಿಂ ಮಹಿಳೆಯರನ್ನು ಭಟ್ಕಳಕ್ಕೆ ಕರೆದುಕೊಂಡು ಹೋಗುವ ನೆಪಮಾಡಿ, ಬಾಡಿಗೆ ವಾಹನ ಗೊತ್ತುಮಾಡಿಕೊಂಡು, ಅದೇ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಿದವರು ಇದೀಗ ಸಿಕ್ಕಿಬಿದ್ದಿದ್ದಾರೆ. ಸಮುದಾಯದ ಮಹಿಳೆಯರನ್ನೇ ಗುರಾಣಿ ಮಾಡಿಕೊಂಡು ಗೋಮಾಂಸ ವ್ಯಾಪಾರ ಮಾಡುವ ಕದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಗುರುವಾರ ರಾತ್ರಿ ಮಹಿಳೆಯರನ್ನು ಬಳಸಿಕೊಂಡು ಮಾಡುವ ಈ ದಂಧೆ ಪತ್ತೆಯಾಗಿದೆ, ಟೂರಿಸ್ಟ್ ವಾಹನದಲ್ಲಿ ಮಹಿಳೆಯರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಪರಿಶೀಲಿಸಿದ ಪೊಲೀಸರಿಗೆ ಅಂದಾಜು 300 ಕೆಜಿಗೂ ಅಧಿಕ ಗೋಮಾಂಸ ಪತ್ತೆಯಾಗಿದೆ. ಬೈಂದೂರಿನ ಒತ್ತಿನಣೆ ಬಳಿ ನಡೆಸಿರುವ ಈ ಮಿಂಚಿನ ಕಾರ್ಯಾಚರಣೆಯಲ್ಲಿ ಭಟ್ಕಳದ ಮುಜಾಫರ್ ಪಕ್ರು ಎಂಬಾತನಿಗೆ ನೀಡಲು ಈ ಮಾಂಸವನ್ನು ಕೊಂಡೊಯ್ಯಲಾಗುತ್ತಿದೆ ಅನ್ನೋದು ಬೆಳಕಿಗೆ ಬಂದಿದೆ.
Koppalaದಲ್ಲಿ ಬಿಇಓ ವಿರುದ್ಧ ಶಿಕ್ಷಕನ ಮೌನ ಪ್ರತಿಭಟನೆ
ವಾಹನ ಚಾಲಕ ಮೊಹಮ್ಮದ್ ಅಲ್ತಾಫ್, ಮತ್ತು ಆತನ ಪತ್ನಿ ನಿಕತ್ ಜೊತೆಗೆ ಆಶಿಯಾ, ಜರೀನಾ ಎಂಬ ಮತ್ತಿಬ್ಬರು ಮಹಿಳೆಯರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು . ಮಹಿಳೆಯರು ವಾಹನದಲ್ಲಿದ್ದರೆ, ಸುಲಭವಾಗಿ ಗೋಮಾಂಸ ಸಾಗಾಟ ಮಾಡಬಹುದು ಅನ್ನೋದು ಈ ಕದೀಮರ ಲೆಕ್ಕಾಚಾರವಾಗಿತ್ತು. ಆದರೆ ಹಿಂದೂ ಸಂಘಟನೆಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಗೋಕಳ್ಳರ ಮತ್ತೊಂದು ಐಡಿಯಾ ವಿಫಲ ಆಗುವಂತೆ ನೋಡಿಕೊಂಡಿದ್ದಾರೆ.
ಕುಂದಾಪುರದ ಕಂಡ್ಲೂರು ಭಾಗದಿಂದ ಭಟ್ಕಳದ ಕಡೆಗೆ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಇತ್ತು, ರಾತ್ರಿಯ ವೇಳೆ ದನಗಳನ್ನು ಕದ್ದು ಮಾಂಸ ಮಾಡಿ ಭಟ್ಕಳಕ್ಕೆ ಸಾಗಿಸುವ ಉಪಾಯ ಮಾಡಲಾಗಿತ್ತು. ಆದರೆ ಬೈಂದೂರು ಪೊಲೀಸರು ಈ ಸಂಚನ್ನು ವಿಫಲಗೊಳಿಸಿದ್ದಾರೆ ಹಾಗೂ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭಾರತ ಸ್ವಾತಂತ್ರ್ಯಕ್ಕಾಗಿ ಬಂದೂಕು ಫ್ಯಾಕ್ಟರಿ ತೆರೆದಿದ್ದ ಇಂಚಗೇರಿ ಮಠಾಧೀಶ!
ಗೋ ನಿಷೇಧ ಕಾಯ್ದೆ ಜಾರಿಗೆ ಬಂದರೂ ಮನೆಗೆ ನುಗ್ಗಿ ಕಳ್ಳತನ ಮಾಡುವುದು, ಸಾರ್ವಜನಿಕ ಸ್ಥಳದಲ್ಲಿರುವ ಗೋವುಗಳನ್ನು ಐಷಾರಾಮಿ ಕಾರುಗಳಲ್ಲಿ ತುಂಬಿಸಿಕೊಂಡು ಹೋಗುವುದು ಮುಂತಾದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. 300 ಕೆಜಿ ಯಷ್ಟು ಮಾಂಸ ಪತ್ತೆಯಾಗಿರುವುದರಿಂದ, ಈ ವ್ಯವಹಾರದ ಅಗಾಧತೆ ಬೆಳಕಿಗೆ ಬಂದಂತಾಗಿದೆ.ಇತ್ತೀಚೆಗಷ್ಟೇ ಉಡುಪಿ ಜಿಲ್ಲೆಯ ಕಾಪು ಪರಿಸರದಲ್ಲಿ ಇದೇ ರೀತಿ ಚಾಲಾಕಿತನ ತೋರಿಸಿ ಸಂಗ್ರಹಿಸಿದ್ದ ಸುಮಾರು 400 ಕೆಜಿ ಎಷ್ಟು ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಪತ್ತೆಯಾಗುವ ಪ್ರಕರಣಕ್ಕೂ ಪಾರಾಗುವ ಪ್ರಕರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಏನೇ ಕಾನೂನು ಬಂದರೂ ಕರಾವಳಿಯಲ್ಲಿ ಗೋಮಾಂಸ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ ಅನ್ನೋದು ಸ್ಪಷ್ಟ!