ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿವಾಹನದಿಂದ ತಿಥಿ ಕಾರ್ಯ ಮುಗಿಸಿ ಬೆಂಗಳೂರಿನ ಬಾಗಲಗುಂಟೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಾಗಡಿ(ಸೆ.18): ಮರಕ್ಕೆ ಎರ್ಟಿಗಾ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ಸೋಲೂರು ಹೋಬಳಿಯ ಭದ್ರಾಪುರ ಗೇಟ್ ಸಮೀಪ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿವಾಹನದಿಂದ ತಿಥಿ ಕಾರ್ಯ ಮುಗಿಸಿ ಬೆಂಗಳೂರಿನ ಬಾಗಲಗುಂಟೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ನಂಜುಂಡಯ್ಯ (56), ಪತ್ನಿ ಶಾರದಮ್ಮ (50), ತಾಯಿ ಭದ್ರಮ್ಮ (80) ಮೃತರು. ಮತ್ತೊಬ್ಬ ಮೃತರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
ಯಮವೇಗದಲ್ಲಿ ಬಂದ ಕಾರು ಡಿಕ್ಕಿ; 10 ಅಡಿ ದೂರಕ್ಕೆ ಹಾರಿಬಿದ್ದ ಬೈಕ್ ಸವಾರರು!
ಕುಸುಮಾ ಎಂಬುವವರಿಗೆ ಗಂಭೀರ ಗಾಯವಾಗಿದ್ದು ನೆಲಮಂಗಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುದೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ. ಅಪಘಾತದ ವೇಳೆ ಕಾರಿನಲ್ಲಿದ್ದ ನಾಯಿ ಮರಿಯೊಂದು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.