ವಿಷ ಸೇವನೆ: ಕಾರಲ್ಲಿ ಒದ್ದಾಡುತ್ತಿದ್ದ ಕುಟುಂಬಕ್ಕೆ ಪೇದೆ ನೆರವು

Published : Aug 13, 2018, 03:32 PM ISTUpdated : Sep 09, 2018, 10:00 PM IST
ವಿಷ ಸೇವನೆ: ಕಾರಲ್ಲಿ ಒದ್ದಾಡುತ್ತಿದ್ದ ಕುಟುಂಬಕ್ಕೆ ಪೇದೆ ನೆರವು

ಸಾರಾಂಶ

ಸಾಲವಂತೆ. ಬೆಂಗಳೂರು ಮೂಲದ ದಂಪತಿ ತಮ್ಮ ಮಕ್ಕಳಿಗೆ ವಿಷವುಣಿಸಿ, ತಾವೂ ವಿಲ ವಿಲ ಒದ್ದಾಡುತ್ತಿದ್ದರು. ಈ ಕುಟುಂಬದ ಚೀರಾಟ ಕೇಳಿಸಿಕೊಂಡ ಪೇದೆಯೊಬ್ಬರು ಇವರ ನೆರವಿಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಡ್ಯ: ವಿಷ ಕುಡಿದು, ಕಾರಿನಲ್ಲಿ ಒದ್ದಾಡುತ್ತಿದ್ದ ಬೆಂಗಳೂರು ಮೂಲದ ಕುಟುಂಬಕ್ಕೆ ಪೇದೆಯೊಬ್ಬರು ನೆರವಾಗಿದ್ದು, ಶ್ರೀರಂಗಪಟ್ಟಣ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಮೂಲದ ಮರೀಗೌಡ, ಪತ್ನಿ ರಜಿನಿ ಹಾಗೂ ಮಕ್ಕಳಾದ ಚಂದ್ರಶೇಖರ್ ಮತ್ತು ಚೇತನ್ ವಿಷ ಸೇವಿಸಿದ್ದರು. ಹೊಸೂರು ಗೇಟೆ ಬಳಿ ಪೊಲೀಸ್ ತಂಗುದಾಣದ ಎದುರು ಕಾರಿನಲ್ಲಿ ವಿಷ ಸೇವಿಸಿದ ಈ ನಾಲ್ವರು ಚೀರಾಡುತ್ತಿದ್ದರು. ಸಾಲಬಾಧೆ ತಾಳಲಾಗದೇ ತಾವು ವಿಷ ಸೇವಿಸಿದ ದಂಪತಿ ಮಕ್ಕಳಿಗೂ ವಿಷವುಣಿಸಿದ್ದರು.

ನೋವಿನಿಂದ ಚೀರಾಡುತ್ತಿದ್ದ ಮಗುವನ್ನು ದಂಪತಿ ಕಾರಿನಿಂದ ಹೊರ ತಳ್ಳಿದ್ದರು. ಈ ಎಲ್ಲರ ಕಿರುಚಾಟ ಕೇಳಿದ ಪೇದೆ ನಂಜುಂಡ ಸ್ಥಳೀಯರ ಸಹಾಯದಿಂದ ನಾಲ್ವರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ.

PREV
click me!

Recommended Stories

ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ