ಚಿಕ್ಕಮಗಳುರು ಜಿಲ್ಲೆಯಲ್ಲಿ ನಾಲ್ಕು ಕಾಲಿನ ಕೋಳಿಯೊಂದು ಪತ್ತೆಯಾಗಿದೆ. ಈ ಕೋಳಿಯನ್ನು ನೋಡಲು ಗ್ರಾಮಸ್ಥರು ಅಚ್ಚರಿಯಿಂದ ಆಗಮಿಸುತ್ತಿದ್ದಾರೆ.
ಚಿಕ್ಕಮಗಳೂರು [ಸೆ.01]: ಪ್ರಕೃತಿ ತನ್ನ ಒಡಲಲ್ಲಿ ಹಲವು ರೀತಿಯ ವೈಶಿಷ್ಟ್ಯಗಳನ್ನು ಅಡಗಿಸಿಕೊಂಡಿರುತ್ತದೆ. ಇದೀಗ ಇಂತಹ ವಿಶಿಷ್ಟ ಘಟನೆಗೆ ಕಾಫಿ ನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ.
ಚಿಕ್ಕಮಗಳುರು ಜಿಲ್ಲೆ ಮಲ್ಲಂದೂರಿನ ಇಕ್ಬಾಲ್ ಕೋಳಿ ಅಂಗಡಿಯಲ್ಲಿ ನಾಲ್ಕು ಕಾಲಿನ ಕೋಳಿ ಪತ್ತೆಯಾಗಿದೆ. ಕೋಳಿ ಕಂಡು ಇಲ್ಲಿನ ಜನತೆ ಅಚ್ಚರಿಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಲ್ಕು ಕಾಲಿನ ಕೋಳಿ ವೀಕ್ಷಿಸುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾತನಾಡಿದ ಸ್ಟಾಲ್ ಮಾಲೀಕ ಇಕ್ಬಾಲ್ ಈ ರೀತಿಯ ಕೋಳಿಯನ್ನು ತಾವೆಂದೂ ನೋಡಿಲ್ಲ. ಇದೇ ಮೊದಲ ಬಾರಿಗೆ ಇಂತಹ ಕೋಳಿ ನೋಡುತ್ತಿರುವುದಾಗಿ ಹೇಳಿದ್ದಾರೆ.
ವಿಶೇಷ ಕೋಳಿಯನ್ನು ಮಾರಾಟ ಮಾಡದೆ ಮಾಲಿಕ ಇಕ್ಬಾಲ್ ಜನರ ವೀಕ್ಷಣೆಗೆ ಇರಿಸಿದ್ದಾರೆ.