ತುಮಕೂರು : ಕಾಂಗ್ರೆಸ್ ಉಪಾಧ್ಯಕ್ಷ ಉಚ್ಛಾಟನೆಗೆ ಆಗ್ರಹ

Published : Sep 01, 2019, 12:52 PM ISTUpdated : Sep 01, 2019, 12:54 PM IST
ತುಮಕೂರು : ಕಾಂಗ್ರೆಸ್ ಉಪಾಧ್ಯಕ್ಷ ಉಚ್ಛಾಟನೆಗೆ ಆಗ್ರಹ

ಸಾರಾಂಶ

ಮಾಜಿ ಡಿಸಿಎಂ ಪರಮೇಶ್ವರ್ ಅವರ ವಿರುದ್ಧ ಭಿತ್ತಿ ಪತ್ರ ಅಂಟಿಸಿದ ಆರೋಪದ ಮೇಲೆ ಮಾಜಿ ಶಾಸಕ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. 

ತುಮಕೂರು [ಸೆ.01]:  ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಪುತ್ರ ಹಾಗೂ ರಾಜ್ಯ ಕಾಂಗ್ರೆಸ್‌ ಉಪಾಧ್ಯಕ್ಷ ರಾಜೇಂದ್ರ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಕೃಷ್ಣ ಮನವಿ ಮಾಡಿದ್ದಾರೆ.

ಮಾಜಿ ಡಿಸಿಎಂ ಪರಮೇಶ್ವರ್‌ ವಿರುದ್ಧ ಬಿತ್ತಿ ಪತ್ರ ಅಂಟಿಸಿದ ಆರೋಪದ ಮೇಲೆ ಉಚ್ಛಾಟನೆ ಮಾಡುವಂತೆ ವರದಿ ಕೊಡಲಾಗಿದೆ. ಇದಕ್ಕೆ ನನ್ನ ವಿರುದ್ಧ ರಾಜೇಂದ್ರ ದ್ವೇಷ ಸಾಧಿಸುತ್ತಿದ್ದಾರೆ ಎಂದಿದ್ದಾರೆ.

ಜಿಲ್ಲಾಧ್ಯಕ್ಷರನ್ನು ಬದಲಾಯಿಸುವಂತೆ ಹೇಳುತ್ತಾರೆ. ಆದರೆ ರಾಜೇಂದ್ರ ಏನು ಮಾಡಿದ್ದಾರೆ. ರಾಜ್ಯ ಉಪಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆ. ಇದರಿಂದ ಉಚ್ಛಾಟನೆ ಮಾಡುವಂತೆ ಕೆಪಿಸಿಸಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜೇಂದ್ರ ಬಿಜೆಪಿ ನಾಯಕರ ಜೊತೆ, ಬಿಜೆಪಿ ಸಂಸದರ ಜೊತೆ ಬಹಿರಂಗವಾಗಿಯೇ ಓಡಾಡುತ್ತಿದ್ದಾರೆ. ಪಕ್ಷದಿಂದ ರಾಜೇಂದ್ರನನ್ನ ಉಚ್ಛಾಟನೆ ಮಾಡದೇ ಇದ್ರೆ ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಮುಖಂಡರೆಲ್ಲಾ ಸೇರಿ ಉಚ್ಛಾಟನೆ ಮಾಡುವಂತೆ ಮತ್ತೊಮ್ಮೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

PREV
click me!

Recommended Stories

ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು