ವಿಜಯಪುರದಲ್ಲಿ ಭೀಕರ ಅಪಘಾತ: ರಸ್ತೆ ಬದಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ, ನಾಲ್ವರು ಯುವಕರ ದುರ್ಮರಣ

By Girish Goudar  |  First Published Oct 18, 2023, 4:28 AM IST

ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಟೋಲ್ ಗೇಟ್ ಬಳಿಯ ಟ್ರಕ್  ಬೈಲೈನ್ ಬಳಿ ನಡೆದ ಘಟನೆ. 


ವಿಜಯಪುರ(ಅ.18):  ಟ್ರಕ್ ಬೈಲ್ ಬಳಿಯ ಸರ್ವೀಸ್ ರಸ್ತೆಯ ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಟೋಲ್ ಗೇಟ್ ಬಳಿಯ ಟ್ರಕ್  ಬೈಲೈನ್ ಬಳಿ ನಡೆದಿದೆ.

ಮೃತರನ್ನ ಶಿವಾನಂದ ಚೌಧರಿ (25), ಸುನೀಲ ಖಾನಾಪೂರ(26), ಈರಣ್ಣ ಕೋಲಾರ (26), ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ. ಎಲ್ಲರೂ ವಿಜಯಪುರ ನಗರದ ವಜ್ರ ಹನುಮಾನ ನಗರದ ವಾಸಿಗಳಾಗಿದ್ದಾರೆ. 

Tap to resize

Latest Videos

Breaking : ಕೆಎಸ್‌ಆರ್‌ಟಿಸಿ ಬಸ್‌ ಟಾಟಾ ಸುಮೋ ಡಿಕ್ಕಿ, ಐವರ ದುರ್ಮರಣ: ಮಠಕ್ಕೆ ಹೊರಟವರು ಮಸಣ ಸೇರಿದರು!

ಅಪರಿಚಿತ ವಾಹನ ಎರಡು ಬೈಕ್ ಮೇಲೂ ಹರಿದು ಪರಾರಿಯಾಗಿದೆ. ಎರಡೂ ಬೈಕ್‌ಗಳು ಜಖಂ ಆಗಿವೆ.  KA28 EZ 7126 ಹಾಗೂ KA28 W 9952 ನಂಬರಿನ ಪಲ್ಸರ್ ಹಾಗೂ ಸಿಬಿಝಡ್ ಬೈಕ್‌ಗಳಾಗಿವೆ. ಸ್ಥಳೀಯರ ಮಾಹಿತಿ ಪ್ರಕಾರ MH12 QW 8521 ನಂಬರಿನ ಲಾರಿ ಗುದ್ದಿ ಪರಾರಿಯಾಗಿದೆ. 

ಸ್ಥಳಕ್ಕೆ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!