ಬೀದರ್‌: ಅಂತ್ಯಕ್ರಿಯೆ ಮುಗಿಸಿ ವಾಪಸ್ ಬರುವಾಗ ಭೀಕರ ಅಪಘಾತ, ನಾಲ್ವರ ದುರ್ಮರಣ

Published : Feb 28, 2024, 09:03 AM IST
ಬೀದರ್‌: ಅಂತ್ಯಕ್ರಿಯೆ ಮುಗಿಸಿ ವಾಪಸ್ ಬರುವಾಗ ಭೀಕರ ಅಪಘಾತ, ನಾಲ್ವರ ದುರ್ಮರಣ

ಸಾರಾಂಶ

ಅಂತ್ಯಕ್ರಿಯೆ ಮುಗಿಸಿ ವಾಪಸ್ ಬರುವಾಗ ಭೀಕರ ಅಪಘಾತ ನಡೆದಿದೆ. ಗಾಯಾಳುಗಳನ್ನ ಬೀದರ್‌ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತಪಟ್ಟ ಎಲ್ಲಾ ದುರ್ದೈವಿಗಳು ಮಹಾರಾಷ್ಟ್ರದ ಉದಗಿರ್ ಮೂಲದವರು ಎಂದು ತಿಳಿದು ಬಂದಿದೆ.  

ಬೀದರ್(ಫೆ.28):  ಟ್ರಕ್ ಹಾಗೂ ಟಾಟಾ ಎಸಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿ, 10 ಮಂದಿಗೆ ಗಾಯಗಳಾದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ಇಂದು(ಬುಧವಾರ) ನಡೆದಿದೆ.  

ಮೃತರನ್ನ ಸ್ತಗಿರ್ ದಾವಲಸಾಬ್ (36), ರಸೀದಾ ಸೈಕ್ (41),  ಟಾಟಾ ಎಸಿ ಚಾಲಕ ವಲಿ (31), ಅಮಾಮ್ ಸೇಕ್ (51) ಎಂದು ಗುರುತಿಸಲಾಗಿದೆ.  ಅಂತ್ಯಕ್ರಿಯೆ ಮುಗಿಸಿ ವಾಪಸ್ ಬರುವಾಗ ಭೀಕರ ಅಪಘಾತ ನಡೆದಿದೆ. ಗಾಯಾಳುಗಳನ್ನ ಬೀದರ್‌ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತಪಟ್ಟ ಎಲ್ಲಾ ದುರ್ದೈವಿಗಳು ಮಹಾರಾಷ್ಟ್ರದ ಉದಗಿರ್ ಮೂಲದವರು ಎಂದು ತಿಳಿದು ಬಂದಿದೆ.  

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಲಾರಿ ಚಾಲಕನ ಪಾದವೇ ತುಂಡು!

ಟಾಟಾ ಎಸಿ ವಾಹನದಲ್ಲಿ ಒಟ್ಟು 14 ಜನ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಉದಗೀರ್‌ನಿಂದ ಹೈದ್ರಾಬಾದ್ ಹೋಗುತ್ತಿದ್ದರು. 6 ಜನ ಮಹಿಳೆಯರು, 5 ಜನ ಪುರುಷರು 3 ಮಕ್ಕಳು ಪ್ರಯಾಣಿಸುತ್ತಿದ್ದರು. ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 4:30ರ ಸುಮಾರಿಗೆ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಚೆನ್ನಬಸವಣ್ಣ.ಎಸ್.ಎಲ್, ಎಎಸ್ಪಿ‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

PREV
Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!