ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಕಾಮಗಾರಿಗೆ ಶಂಕು

By Kannadaprabha News  |  First Published Jul 25, 2022, 9:05 AM IST

ಮಂಗಳೂರಿನ ಲೇಡಿಹಿಲ್‌ ಶಾಲೆ ಬಳಿ ಸುಮಾರು 48 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಕಾಮಗಾರಿಗೆ  ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಭಾನುವಾರ ಶಿಲಾನ್ಯಾಸ ನೆರವೇರಿಸಿದರು.


ಮಂಗಳೂರು ಜು.25: ನಗರದ ಲೇಡಿಹಿಲ್‌ ಶಾಲೆ ಬಳಿ ಸುಮಾರು 48 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಭಾನುವಾರ ಶಿಲಾನ್ಯಾಸ ನೆರವೇರಿಸಿದರು. ವೃತ್ತ ನಿರ್ಮಾಣ ಮಾಡಲು ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಿದರು. ಮಂಗಳೂರಿನ ಪ್ರಮುಖ ರಸ್ತೆಗೆ ಈ ಹಿಂದೆಯೇ ಬ್ರಹ್ಮಶ್ರೀ ನಾರಾಯಣ ಗುರು(Brahmarshi Narayana Guru)ಗಳ ಹೆಸರನ್ನು ನಾಮಕರಣ ಮಾಡಲಾಗಿತ್ತು. ಈಗ ನಗರಾಭಿವೃದ್ಧಿ ಪ್ರಾ​ಧಿಕಾರದ ಸಹಭಾಗಿತ್ವದೊಂದಿಗೆ ಸುಮಾರು 48 ಲಕ್ಷ ರು. ವೆಚ್ಚದಲ್ಲಿ ನಾರಾಯಣ ಗುರು ವೃತ್ತ ನಿರ್ಮಿಸಲು ಅಧಿ​ಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಲ್ಲಿ ವೃತ್ತ ಹಾಗೂ ಅವರ ಸುಂದರ ಪುತ್ಥಳಿ ನಿರ್ಮಿಸಲಾಗುವುದು. ನವರಾತ್ರಿ ವೇಳೆಗೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ತಿಳಿಸಿದರು.

extbook Row; ಸರ್ಕಾರದ ವಿರುದ್ಧ ನಾರಾಯಣ ಗುರು ವಿಚಾರ ವೇದಿಕೆ ಪ್ರತಿಭಟನೆ

Tap to resize

Latest Videos

ನಾರಾಯಣ ಗುರುಗಳ ಹೆಸರಿನ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಬೇಕು ಮತ್ತು ಅವರ ಹೆಸರಿನ ಮೂಲಕ ಅಭಿವೃದ್ಧಿಗೆ ಹೊಸ ಆಯಾಮವನ್ನು ಸೃಷ್ಟಿಸಲು ಚಿಂತಿಸಲಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಬೇರೆ ಬೇರೆ ಆಯಾಮಗಳಲ್ಲಿ ಪ್ರಕಟಿಸುವಂತಹ ಕಾರ್ಯವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎನ್ನುವ ವಿಶೇಷ ಅಭಿಯಾನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಆ.12ರಿಂದ ಎಲ್ಲ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವಂತಾಗಬೇಕು. ಕರ್ನಾಟಕದಲ್ಲಿ ಒಂದು ಕೋಟಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಬೇಕು. ಈ ಸಂದರ್ಭ ರಾಷ್ಟ್ರ ಧ್ವಜದ ಮೆರವಣಿಗೆಗಳನ್ನು ನಡೆಸುವಂತೆ ಕರೆ ನೀಡಿದರು.

ನಾರಾಯಣಗುರು, ಭಗತ್‌ ಸಿಂಗ್‌ ಪಾಠ ತೆಗೆದಿಲ್ಲ: ಸಚಿವ ಸುನಿಲ್‌ ಕುಮಾರ್‌

ಶಾಸಕ ವೇದವ್ಯಾಸ್‌ ಕಾಮತ್‌(MLA Vedavyasa Kamath) ಮಾತನಾಡಿ, ನಾರಾಯಣ ಗುರು ವೃತ್ತ(Narayanaguru circle) ಆಗಬೇಕೆಂಬ ಕನಸು ಈಡೇರುವ ಹಂತದಲ್ಲಿದೆ. ಈ ವೃತ್ತದಿಂದ ನಗರದ ಕಳೆ ಇನ್ನಷ್ಟುಹೆಚ್ಚಲಿದೆ ಎಂದರು.

ಶಾಸಕ ಡಾ.ಭರತ್‌ ಶೆಟ್ಟಿ(Dr Bharath shetty), ಮೇಯರ್‌ ಪ್ರೇಮಾನಂದ ಶೆಟ್ಟಿ,(Mayor Premananda shetty) ಕೆಎಫ್‌ಡಿಸಿ ಅಧ್ಯಕ್ಷ ನಿತಿನ್‌ ಕುಮಾರ್‌(Nitin Kumar), ದ.ಕ.ಜಿಲ್ಲಾ ಬಿಜೆಪಿ ವಕ್ತಾರ ರವಿಶಂಕರ ಮಿಜಾರು(Ravishankar mijaaru), ಸುಧೀರ್‌ ಶೆಟ್ಟಿಕಣ್ಣೂರು(Sudheer Shetty Kannooru), ಮಾಜಿ ಮೇಯರ್‌ ದಿವಾಕರ, ಕಾರ್ಪೊರೇಟರ್‌ಗಳು ಇದ್ದರು.

ಸಣ್ ಸುದ್ದಿ:

ಮಂಗ್ಳೂರು ಲೇಡಿಗೋಷನ್‌ ಆಸ್ಪತ್ರೆಗೆ ಕೇಂದ್ರ ಪ್ರಶಸ್ತಿ: ಗುಣಮಟ್ಟದ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ನೀಡುವ ‘ಲಕ್ಷ್ಯ’ ಪ್ರಮಾಣ ಪತ್ರ ಮಂಗಳೂರಿನ ಸರ್ಕಾರಿ ಲೇಡಿಗೋಷನ್‌ ಆಸ್ಪತ್ರೆಗೆ ದೊರಕಲಿದೆ. ಹೆರಿಗೆ ವಿಭಾಗ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಉತ್ತಮ ಸೇವೆಗಾಗಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ. ಆಗಸ್ಟ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಗೆ ಮೂರು ವರ್ಷ ಮಾನ್ಯತೆ ಇರಲಿದ್ದು, ಗುಣಮಟ್ಟದ ಸೇವೆ ನೀಡಲು ಪ್ರತಿ ವರ್ಷ 6 ಲಕ್ಷ ರು. ಅನುದಾವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಲೇಡಿಗೋಷನ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್‌ ತಿಳಿಸಿದ್ದಾರೆ. 

Breast Milk Bank : ಮಂಗಳೂರಲ್ಲಿ ರಾಜ್ಯದ 2ನೇ ಎದೆ ಹಾಲು ಸಂಗ್ರಹ ಬ್ಯಾಂಕ್‌

click me!