ಬಿಜೆಪಿ ಅಥವ ಕಾಂಗ್ರೆಸ್ ಸೇರುತ್ತೇನೆ ಎಂದ ಜೆಡಿಎಸ್ ಮುಖಂಡ

By Kannadaprabha News  |  First Published Dec 27, 2019, 2:51 PM IST

ನನಗೆ ಜೆಡಿಎಸ್ ಮುಖಂಡರು ಅನ್ನವಿಟ್ಟು ವಿಷ ಹಾಕಿದ್ದಾರೆ ಎಂದು ಮುಖಂಡರೋರ್ವರು ವಾಗ್ದಾಳಿ ನಡೆಸಿದ್ದು ಇದೀಗ ಪಕ್ಷಾಂತರದ ಮನಸು ಮಾಡಿದ್ದಾರೆ. 


ಶಿಡ್ಲಘಟ್ಟ [ಡಿ.27]:  ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಜೆಡಿಎಸ್ ವರಿಷ್ಠರು ಬೆನ್ನಿಗೆ ಚೂರಿ ಹಾಕಿದ್ದು, ಊಟ ಇಟ್ಟು ವಿಷ ಹಾಕುವಂತ ಕೆಲಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಂ.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2016 - 17 ನೇ ಹಾಗೂ 2017 - 18 ನೇ  ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸುವ ಗುತ್ತಿಗೆ ವಿಚಾರದಲ್ಲಿ ಇಬ್ಬರು ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋದರು. ಈ ಕಾರಣಕ್ಕೆ 2 ವರ್ಷಗಳ ಕಾಲ ಬೋರ್‌ವೆಲ್ ಕೊರೆಸುವ ಕಾರ್ಯ ನನೆಗುದಿಗೆ ಬಿದ್ದಿತ್ತು ಎಂದರು.

Tap to resize

Latest Videos

ಬೇರೆಯವರ ಪಾಲಾದ ಕೊಳವೆಬಾವಿ: ಇದೀಗ ನ್ಯಾಯಾಲಯದಲ್ಲಿ ಸಮಸ್ಯೆ ಇತ್ಯರ್ಥವಾಗಿದೆ. ಆದರೆ ಆ ವರ್ಷಗಳಲ್ಲಿ ನಾನು ಶಾಸಕನಾಗಿದ್ದು 156 ಮಂದಿ ಫಲಾನುಭವಿಗಳ ಪಟ್ಟಿ ತಯಾರಿಸಿ ಅನುಮೋದನೆ ದೊರೆತಿತ್ತು. ಆದರೆ ಇದೀಗ ಆ ಫಲಾನುಭವಿಗಳನ್ನು ಬಿಟ್ಟು ಬೇರೆಯವರಿಗೆ ಕೊಳವೆ ಬಾವಿ ಕೊರೆಸುವ ದೂರುಗಳು ಕೇಳಿ ಬರುತ್ತಿವೆ ಎಂದು ತಿಳಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಧ್ಯವರ್ತಿಗಳು ಹಾಗೂ ಕೆಲ ಅಧಿಕಾರಿಗಳು ಸೇರಿಕೊಂಡು ಆಗಿನ ಫಲಾನುಭವಿಗಳಲ್ಲಿ ಕೆಲವರನ್ನು ಬದಲಿಸುವ ಹುನ್ನಾರ ನಡೆಸಿದ್ದು ಅದಕ್ಕೆ ಅವಕಾಶ ನೀಡದೆ ಆಗಿನ ಫಲಾನುಭವಿಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದ ಅವರು, ಫಲಾನುವಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. 

ಕಾಂಗ್ರೆಸಲ್ಲಿ ಐದೇ ನಿಮಿಷದಲ್ಲಿ ಟೋಪಿ ತೆಗೆದುಬಿಡ್ತಾರೆ: ಡಿಕೆಶಿ...

ಕಾಂಗ್ರೆಸ್ ಅಥವಾ ಬಿಜೆಪಿ: ಮುಂದಿನ ರಾಜಕೀಯ ದೃಷ್ಟಿಯಿಂದ ಬೆಂಬಲಿಗರ ಜತೆ ಚರ್ಚಿಸಿ ಅವರ ತೀರ್ಮಾನಕ್ಕೆ ಬದ್ಧನಾಗಿ ಮುಂದುವರೆಯುತ್ತೇನೆ. ಒಂದು ವೇಳೆ ಬಿಜೆಪಿ ಅಥವಾ ಕಾಂಗ್ರೆಸ್ ಸೇರುವ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧ. ಒಂದು ವೇಳೆ ಯಾವುದೆ ರಾಜಕೀಯ ಪಕ್ಷವೂ ಬೇಡ, ತಟಸ್ಥವಾಗಿ ಉಳಿದುಕೊಂಡೆ ಸೂಚಿಸಿದರೆ ಅದಕ್ಕೂ ನಾನು ಸಿದ್ಧ ಎಂದು ಹೇಳಿದರು.

click me!