ಔರಾದ್: ಲಂಚ ಪಡೆಯುತ್ತಿದ್ದ ವೈದ್ಯಾಧಿಕಾರಿ ಮೇಲೆ ಹರಿಹಾಯ್ದ ಸಚಿವ ಚೌವ್ಹಾಣ್

By Suvarna News  |  First Published Dec 27, 2019, 1:53 PM IST

ಲಂಚ ಪಡೆಯುತ್ತಿದ್ದ ವೈದ್ಯಾಧಿಕಾರಿ ವಿರುದ್ಧ ಕಿಡಿ ಕಾರಿದ ಸಚಿವ ಪ್ರಭು ಚೌವ್ಹಾಣ್| ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದಲ್ಲಿ ನಡೆದ ಘಟನೆ| ವೈದ್ಯಾಧಿಕಾರಿ ಪದ್ಮಾಕರ್ ಪಾಟೀಲ್ ಬಡ ರೋಗಿಗಳ ಬಳಿ  500, ರಿಂದ 1000 ರೂ.ವರೆಗೂ ಲಂಚ ಪಡೆಯುತ್ತಿದ್ದರು ಎಂದು ದೂರುಗಳು ಬಂದಿದ್ದವು| ದೂರಿನ ಮೇರೆಗೆ ವೈದ್ಯಾಧಿಕಾರಿ ಪದ್ಮಾಕರ್ ಪಾಟೀಲ್‌ರನ್ನ ತರಾಟೆಗೆ ತೆಗೆದುಕೊಂಡ ಸಚಿವ|


ಬೀದರ್(ಡಿ.27): ಲಂಚ ಪಡೆಯುತ್ತಿದ್ದ ವೈದ್ಯಾಧಿಕಾರಿ ವಿರುದ್ಧ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಪ್ರಭು ಚೌವ್ಹಾಣ್ ಅವರು ಕಿಡಿ ಕಾರಿದ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದಲ್ಲಿ ಇಂದು ನಡೆದಿದೆ. 

ವಡಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪದ್ಮಾಕರ್ ಪಾಟೀಲ್ ಬಡ ರೋಗಿಗಳ ಬಳಿ  500, ರಿಂದ 1000 ರೂ.ವರೆಗೂ ಲಂಚ ಪಡೆಯುತ್ತಿದ್ದರು ಎಂದು ದೂರುಗಳು ಬಂದಿದ್ದವು. ದೂರಿನ ಮೇರೆಗೆ ವೈದ್ಯಾಧಿಕಾರಿ ಪದ್ಮಾಕರ್ ಪಾಟೀಲ್ ರನ್ನ ತರಾಟೆಗೆ ತೆಗೆದುಕೊಂಡ ಸಚಿವರು ಮದುವೆ ಆಗಿದ್ದೀಯಾ, ಮದುವೆ ಆಗಿಲ್ಲ ಅಂದ್ರೆ ಆಸೆ ಯಾಕೆ ಮಾಡುತ್ತೀರಿ? ಅಂತ ಹೇಳುವ ಮೂಲಕ ಕ್ಲಾಸ್ ತಗೆದುಕೊಂಡಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಿಂಗಳಿಗೆ 80 ಸಾವಿರ ರು. ಸಂಬಳ‌ ಇದ್ದರೂ ಯಾಕೆ ಲಂಚ‌ ಪಡೆಯುತ್ತೀರಿ, ಬಡವರಿಗೋಸ್ಕರ ಆಸ್ಪತ್ರೆ ಬಿಲ್ಡಿಂಗ್ ಕಟ್ಟಿದ್ದೇವೆ, ಚೆನ್ನಾಗಿ ನೋಡಿಕೊಳ್ಳಬೇಕು. ಒಬ್ಬ ವೈದ್ಯರಾಗಿ ಆಸ್ಪತ್ರೆಯನ್ನ ತಿಪ್ಪೆ ಗುಂಡಿ ಹಾಗೆ ಇಟ್ಕೊಂಡಿದ್ದೀರಿ ಯಾಕೆ? ವೈದ್ಯರಾಗಿ ಆಸ್ಪತ್ರೆ ಹೇಗೆ ಇಟ್ಟುಕೊಳ್ಳಬೇಕು ಗೊತ್ತಿಲ್ವಾ ನಿಮಗೆ, ಇದು ಕೊನೆಯ ಅವಕಾಶ, ಮುಂದೆ ಇಂತಹ ಆರೋಪಗಳು ಕೇಳಿ ಬಂದರೆ ಕೆಲಸದಿಂದ ತೆಗೆದುಹಾಕಲಾಗುವುದು ಎಂದು ವೈದ್ಯಾಧಿಕಾರಿ ಪದ್ಮಾಕರ್ ಪಾಟೀಲ್‌ಗೆ ಎಚ್ಚರಿಕೆ ನೀಡಿದ್ದಾರೆ.
 

click me!