'ನನ್ನ ಮಗ ಬಿಜೆಪಿ ಜೊತೆ ಹೋಗಿ ಶಿಕ್ಷೆ ಅನುಭವಿಸಿದ್ದಾನೆ'

Published : Dec 02, 2019, 03:06 PM ISTUpdated : Dec 02, 2019, 03:07 PM IST
'ನನ್ನ ಮಗ ಬಿಜೆಪಿ ಜೊತೆ ಹೋಗಿ ಶಿಕ್ಷೆ ಅನುಭವಿಸಿದ್ದಾನೆ'

ಸಾರಾಂಶ

ನಾನು ಸಿದ್ದರಾಮಯ್ಯ ಬಳಿ ಹೋಗಿ ಮೈತ್ರಿ ಮಾಡಿಕೊಳ್ಳುವ ಕಾಲ ತುಂಬಾ ದೂರ ಇದೆ| ಯಡಿಯೂರಪ್ಪ ಆನಂದವಾಗಿ ಇರಲಿ| ಸೋತ ಶಾಸಕ ಲಕ್ಷ್ಮಣ ಸವದಿಯನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ| ಉಮೇಶ್ ಕತ್ತಿ ನನ್ನ ಹಳೆಯ ಸ್ನೇಹಿತ ಅಂತ ಹಿರಿಯ ನಾಯಕರಿಗೆ ಇವರು ಮಂತ್ರಿಗಿರಿ ಕೊಟ್ಟಿಲ್ಲ ಎಂದ ಹೆಚ್ ಡಿ ದೇವೇಗೌಡ| 

ಬೆಳಗಾವಿ(ಡಿ.02): ನನ್ನ ಮಗ ಕುಮಾರಸ್ವಾಮಿ ಬಿಜೆಪಿ ಜೊತೆ ಹೋಗಿ ಶಿಕ್ಷೆ ಅನುಭವಿಸಿದ್ದಾನೆ. ನಾನು ಬಿಜೆಪಿ ಜೊತೆ ಹೋಗಲ್ಲ ಅಂತಾ ಅವನೇ ಹೇಳಿಕೊಳ್ಳುತ್ತಾನೆ. ಯಡಿಯೂರಪ್ಪ ಸರ್ಕಾರಕ್ಕೆ ನನ್ನ ಪಕ್ಷದ ವತಿಯಿಂದ ಸಧ್ಯಕ್ಕೆ ಯಾವ ಆತಂಕ ಇಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಅವರು ಹೇಳಿದ್ದಾರೆ.

ಸೋಮವಾರ ಜಿಲ್ಲೆಯ ಗೋಕಾಕ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು 105 ಜನ ಇದ್ದಾರೆ, 15 ಕ್ಷೇತ್ರ ಕಳೆದುಕೊಂಡು ಅವರು ರಾಜ್ಯ ಆಳಲಿ, ಯಾಕೆ ಅಂತಾ ನೀವು ಕೇಳಬಹುದು ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ನಾನು ಸಿದ್ದರಾಮಯ್ಯ ಬಳಿ ಹೋಗಿ ಮೈತ್ರಿ ಮಾಡಿಕೊಳ್ಳುವ ಕಾಲ ತುಂಬಾ ದೂರ ಇದೆ. ಯಡಿಯೂರಪ್ಪ ಆನಂದವಾಗಿ ಇರಲಿ. ಸೋತ ಶಾಸಕ ಲಕ್ಷ್ಮಣ ಸವದಿಯನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಉಮೇಶ್ ಕತ್ತಿ ನನ್ನ ಹಳೆಯ ಸ್ನೇಹಿತ ಅಂತ ಹಿರಿಯ ನಾಯಕರಿಗೆ ಇವರು ಮಂತ್ರಿಗಿರಿ ಕೊಟ್ಟಿಲ್ಲ ಎಂದಿದ್ದಾರೆ. 

ಉಪಚುನಾವಣೆ ಬಳಿಕ ಏನು ಬೇಕಾದರೂ ಆಗಬಹುದಾ ಅಂತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,ನನಗೆ ಗೊತ್ತಿಲ್ಲ ಸರ್ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

PREV
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!