'ಯಡಿಯೂರಪ್ಪ ನಮ್ಮ ಮೇಲೆ ಹಗೆತನ ಸಾಧಿಸಿದ್ರೆ ಸುಮ್ಮನೆ ಕೂರಲು ಆಗೋದಿಲ್ಲ'

Suvarna News   | Asianet News
Published : Feb 16, 2020, 12:12 PM IST
'ಯಡಿಯೂರಪ್ಪ ನಮ್ಮ ಮೇಲೆ ಹಗೆತನ ಸಾಧಿಸಿದ್ರೆ ಸುಮ್ಮನೆ ಕೂರಲು ಆಗೋದಿಲ್ಲ'

ಸಾರಾಂಶ

ಪೊಲೀಸರನ್ನ ಬಳಸಿಕೊಂಡು ನಮ್ಮ‌ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ| ನಮ್ಮ ಪಕ್ಷದ ಜಿ.ಪಂ ಸದಸ್ಯನಿಗೆ ಪಿಸ್ತೂಲ್ ಇಟ್ಟು ಹೆದರಿಸಲಾಗುತ್ತಿದೆ|ಕುಮಾರಸ್ವಾಮಿ ಮಂಜೂರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಡೆ ನೀಡಿದ್ದಾರೆ|

ಹುಬ್ಬಳ್ಳಿ(ಫೆ.16): ಬಿ. ಎಸ್. ಯಡಿಯೂರಪ್ಪ ಇನ್ನೂ ಮೂರು ವರ್ಷ ಅಧಿಕಾರ ನಡೆಸಲು ನಮ್ಮದು ಯಾವುದೇ ಅಭ್ಯಂತರವಿಲ್ಲ. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ. ಕುಮಾರಸ್ವಾಮಿ ಅವಧಿಯಲ್ಲಿ ಮಂಜೂರಾದ ಎಲ್ಲ‌ ಕೆಲಸಗಳನ್ನ ರದ್ದು ಮಾಡಲಾಗಿದೆ. ಈ ಹಿಂದೆ ಯಡಿಯೂರಪ್ಪ ರಾಜಕೀಯ ದ್ವೇಷ ಸಾಧಿಸುವುದಿಲ್ಲ ಎಂದಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಅಧಿಕಾರಿಗಳನ್ನು ವರ್ಗಾವಣೆ  ಮಾಡಿದ್ದಾರೆ. ಕುಮಾರಸ್ವಾಮಿ ಮಂಜೂರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಡೆ ಹಿಡಿದಿದ್ದಾರೆ. ಇದರ ವಿರುದ್ಧ ಸದನದ ಒಳಗೆ ಹಾಗೂ ಹೊರಗೂ ಹೋರಾಟ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಳೆ ರಾಜಕೀಯ ದ್ವೇಷದಿಂದ ನಮ್ಮ ಮೇಲೆ ಹಗೆತನ ಸಾಧಿಸಿದರೆ ಸುಮ್ಮನೆ ಕೂರಲು ಆಗೋದಿಲ್ಲ, ಪೊಲೀಸರನ್ನ ಬಳಸಿಕೊಂಡು ನಮ್ಮ‌ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ನಮ್ಮ ಪಕ್ಷದ ಜಿ.ಪಂ ಸದಸ್ಯನಿಗೆ ಪಿಸ್ತೂಲ್ ಇಟ್ಟು ಹೆದರಿಸಲಾಗುತ್ತಿದೆ. ನಮ್ಮ‌ ಮುಂದೆ ಇರುವ ಗುರಿ ಕೇವಲ ಪಕ್ಷ ಸಂಘಟನೆ ಮಾತ್ರ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೈತ್ರಿ ಸರ್ಕಾರ ಪತನವಾಗಲು ಕಾರಣ ಯಾರು ಎಂಬುದು ಜಗತ್ತಿಗೆ ಗೊತ್ತಿದೆ. 15 ಜನ ಶಾಸರು ಬಾಂಬೆಗೆ ಹೊದ್ರಲ್ಲ ಅವರನ್ನೇ ಕೇಳಿ ಯಾರು ಕಳಿಸಿದ್ರು ಅಂತ. ಅವರೆ ಹೇಳುತ್ತಾರೆ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ ದೇವೇಗೌಡ, ಅವರ ಮಗ ಸತ್ತಾಗ ನನಗೆ ಯಾರು ಹೇಳಿರಲಿಲ್ಲ, ನಾನೇ ಹೋಗಿದ್ದೆ, ನನಗೂ ಮನುಷ್ಯತ್ವ ಇದೆ. ಈ‌ ಹಿಂದೇ ಒಟ್ಟಾಗಿ ಕೆಲಸ ಮಾಡಿದ್ವಿ ಎಂಬ ಕಾರಣಕ್ಕೆ ಎಲ್ಲ ಮರೆತು ಕೈ ಜೋಡಿಸಿದ್ವಿ. ಜೆಡಿಎಸ್ ಜೊತೆ ಹೋಗಿದಕ್ಕೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಅಂತ ಸ್ವತಃ ಅವರೇ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. 

ಕಾಂಗ್ರೆಸ್ ನಾಯಕ ಗುಲಾಂನಬಿ ಆಜಾದ್ ಗೆಹ್ಲೋಟ್ ನಮ್ಮ ಮನೆಗೆ ಬಂದಿದ್ದರು. ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಮಾಡಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೇಳಿದ್ದಾರೆ ಎಂದರು. ಆದರೆ ನಾನು ಒಪ್ಪಿರಲಿಲ್ಲ, ನಿರಂತರವಾದ ಚರ್ಚೆ ಬಳಿಕ ನಿರ್ಧಾರ ಮಾಡಿದ್ವಿ. ನನಗೆ ಕಾಂಗ್ರೆಸ್ ಬಗ್ಗೆ ಸಿಂಪಥಿ ಇದ್ದದ್ದು ನಿಜ. ಕಾಂಗ್ರೆಸ್ ಮುಕ್ತ ಭಾರತ ಎಂಬ ಮೋದಿ ಹೇಳಿಕೆಯನ್ನ ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. 
 

PREV
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ