'ಪಾಕ್ ಪರ ಘೋಷಣೆ ಕೂಗುವ ದೇಶದ್ರೋಹಿಗಳನ್ನ ಬಾರ್ಡರ್‌ನಲ್ಲಿ ಬಿಡಿ'

Suvarna News   | Asianet News
Published : Feb 16, 2020, 11:52 AM IST
'ಪಾಕ್ ಪರ ಘೋಷಣೆ ಕೂಗುವ ದೇಶದ್ರೋಹಿಗಳನ್ನ ಬಾರ್ಡರ್‌ನಲ್ಲಿ ಬಿಡಿ'

ಸಾರಾಂಶ

ಪಾಕಿಸ್ತಾನ ಪರ ಘೋಷಣೆ ಕೂಗುವ ದೇಶದ್ರೋಹಿಗಳಿಗೆ ದೇಶದ ಎಲ್ಲಿಯೂ ಶಿಕ್ಷಣ ನೀಡಬಾರದು| ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ| ದೇಶದ್ರೋಹಿಗಳಿಗೆ ಇಲ್ಲಿ‌ ನೀಡಲಾಗುವ ಶಿಕ್ಷಣ ಸೌಲಭ್ಯ ಹಿಂಪಡೆಯಬೇಕು|

ವಿಜಯಪುರ(ಫೆ.16): ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಪ್ರಕರಣದ ಸಂಬಂಧ ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗುವ ಮಕ್ಕಳನ್ನ ಪಾಕಿಸ್ತಾನ ಬಾರ್ಡರ್‌ನಲ್ಲಿ ಬಿಡಬೇಕು. ಅವರಿಗೆ ದೇಶದ ಎಲ್ಲಿಯೂ ಶಿಕ್ಷಣ ನೀಡಬಾರದು. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. 

'ಪಾಕಿಸ್ತಾನ್ ಜಿಂದಾಬಾದ್'ಎಂದ ಹುಬ್ಬಳ್ಳಿಯ KLE ವಿದ್ಯಾರ್ಥಿಗಳು ಅರೆಸ್ಟ್

ಇಲ್ಲಿನ ಗಾಳಿ, ಅನ್ನ, ಶಿಕ್ಷಣ ಪಡೆದು ಪಾಕ್ ಪರ ಘೋಷಣೆ ಕೂಗುವವರಿಗೆ ಎಲ್ಲಾ ಸೌಲಭ್ಯ ಹಿಂಪಡೆಯಬೇಕು. ದೇಶದ್ರೋಹಿಗಳಿಗೆ ಇಲ್ಲಿ‌ ನೀಡಲಾಗುವ ಶಿಕ್ಷಣ ಸೌಲಭ್ಯ ಹಿಂಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. 

PREV
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ