'ಗೌಡ, ಎಚ್‌ಡಿಕೆ ದೇಹ ಬಂಗಾರದ್ದು, ಕಿವಿ ಹಿತ್ತಾಳೆ'

Published : Sep 22, 2019, 08:45 AM IST
'ಗೌಡ, ಎಚ್‌ಡಿಕೆ ದೇಹ ಬಂಗಾರದ್ದು, ಕಿವಿ ಹಿತ್ತಾಳೆ'

ಸಾರಾಂಶ

ಗೌಡ, ಎಚ್‌ಡಿಕೆ ದೇಹ ಬಂಗಾರದ್ದು, ಕಿವಿ ಹಿತ್ತಾಳೆ| ಎಚ್. ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ

ನಾಗಮಂಗಲ[ಸೆ.22]: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ತೀವ್ರ ಅಸಮಾಧಾನ ಹೊರಹಾಕಿದ್ದು, ಇಬ್ಬರ ದೇಹ ಬಂಗಾರದ್ದು, ಆದರೆ ಕಿವಿ ಮಾತ್ರ ಹಿತ್ತಾಳೆ ಎಂದಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರೂ ನಾಯಕರು ಹೇಳಿಕೆ ಮಾತುಗಳನ್ನು ಮಾತ್ರ ಕೇಳುತ್ತಾರೆ. ಹಿತ್ತಾಳೆ ಕಿವಿ ಇರುವುದರಿಂದ ಚಾಡಿಕೋರರ ಮಾತುಗಳಿಗೆ ಹೆಚ್ಚಿನ ಬೆಲೆ. ಸತ್ಯಕ್ಕೆ ಬೆಲೆ ಕೊಡುವುದಿಲ್ಲ ಎಂದು ದೂರಿದರು. ನಾನು ಯಾವುದೇ ಕಾರಣಕ್ಕೂ ಜೆಡಿಎಸ್‌ ಬಿಡುವುದಿಲ್ಲ. ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ಒಕ್ಕಲಿಗರ ನಾಯಕರನ್ನು ತಯಾರು ಮಾಡಿದ್ದೇ ದೇವೇಗೌಡರು ಹಾಗೂ ಕುಮಾರಸ್ವಾಮಿ. ಆದರೆ, ಇವರ ದ್ವಂದ್ವ ನೀತಿ ಹಾಗೂ ನಿರ್ಧಾರಗಳು ಪಕ್ಷದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ನಾನು ಯಾವುದೇ ಕಾರಣಕ್ಕೂ ಜೆಡಿಎಸ್‌ ಬಿಡುವುದಿಲ್ಲ. ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ದೇವೇಗೌಡರ ಜತೆ ಇದ್ದುಕೊಂಡು ಪಕ್ಷ ಕಟ್ಟುತ್ತೇನೆ. ನಿಖಿಲ್‌ ಸೋಲಿಗೆ ಜೆಡಿಎಸ್‌ ಮುಖಂಡರು ಕಾರಣರಲ್ಲ. ಸುಮಲತಾ ಜಯದ ಹಿಂದೆ ಮತದಾರರ ತೀರ್ಮಾನವಿತ್ತು. ಜನ ಬದಲಾವಣೆ ಬಯಸಿದ್ದರು ಎಂದರು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!