ಸಚಿವ ನಾಗೇಶ್ ವಿರುದ್ಧ ಕೊತ್ತೂರು ಕೊತಕೊತ

Kannadaprabha News   | Asianet News
Published : Jan 23, 2020, 11:28 AM IST
ಸಚಿವ ನಾಗೇಶ್ ವಿರುದ್ಧ ಕೊತ್ತೂರು ಕೊತಕೊತ

ಸಾರಾಂಶ

ಸಚಿವರು ತಾವು ಏರಿದ ಏಣಿ ಒದೆಯುತ್ತಿದ್ದಾರೆ, ಕ್ಷೇತ್ರದ ಪರಿಚಯವೇ ಇಲ್ಲದ ನಾಗೇಶ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಸಿ ಒಂದೇ ವಾರದಲ್ಲಿ ಎಂಎಲ್‌ಎ ಮಾಡಿದೆವು. ಅವರೀಗ ಅಬಕಾರಿ ಸಚಿವರೂ ಆಗಿದ್ದಾರೆ. ಆದರೆ ಗೆಲ್ಲಿಸಿದ ಜನತೆಗೆ ಏನೇನೂ ಪ್ರಯೋಜನ ಇಲ್ಲದಂತಾಗಿದೆ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗುಡುಗಿದ್ದಾರೆ.

ಕೋಲಾರ(ಜ.23): ಅಬಕಾರಿ ಸಚಿವ ಎಚ್.ನಾಗೇಶ್ ಗೆಲುವಿಗೆ ಶ್ರಮಿಸಿದ ಕ್ಷೇತ್ರದ ಮುಖಂಡರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಸಚಿವ ಕಾರ್ಯವೈಖರಿ ವಿರುದ್ಧ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗುಡುಗಿದ್ದಾರೆ.

ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು ತಾವು ಏರಿದ ಏಣಿ ಒದೆಯುತ್ತಿದ್ದಾರೆ, ಕ್ಷೇತ್ರದ ಪರಿಚಯವೇ ಇಲ್ಲದ ನಾಗೇಶ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಸಿ ಒಂದೇ ವಾರದಲ್ಲಿ ಎಂಎಲ್‌ಎ ಮಾಡಿದೆವು. ಅವರೀಗ ಅಬಕಾರಿ ಸಚಿವರೂ ಆಗಿದ್ದಾರೆ. ಆದರೆ ಗೆಲ್ಲಿಸಿದ ಜನತೆಗೆ ಏನೇನೂ ಪ್ರಯೋಜನ ಇಲ್ಲದಂತಾಗಿದೆ ಎಂದು ಆರೋಪಿಸಿದರು. ವಿರೋಧಿಗಳಿಗೆ ಮಣೆ: ಸಚಿವರು ನಮ್ಮ ವಿರೋಧಿಗಳ ಜೊತೆ ಕೈ ಜೋಡಿಸಿ ನಮ್ಮ ಮುಖಂಡರನ್ನು ದೂರ ಮಾಡಿಕೊಂಡಿದ್ದಾರೆ. ಎಂದು ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯೇ ಇಲ್ಲದೆ ಅಧಿಸೂಚನೆ!

ನಮ್ಮ ಕಾರ್ಯಕರ್ತರು, ಮುಖಂಡರು ಹಗಲಿರುಳು ನಾಗೇಶ್ ಪರ ಚುನಾವಣೆ ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿದರು. ಚುನಾವಣೆ ವೇಳೆ ನಾಗೇಶ್ ವಿರುದ್ಧ ಕೆಲಸ ಮಾಡಿದವರನ್ನೇ ಸಚಿವರು ಈಗ ಪಕ್ಕದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಾಗಲು ಕಾರಣ ನಾವು: ನಾಗೇಶ್ ಅವರು ಸಚಿವರಾಗಲು ಮುಖ್ಯ ಕಾರಣ ನಾನು ಮತ್ತು ಮುಖಂಡ ನೀಲಕಂಠೇಗೌಡ. ನಮ್ಮ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಅಂತಾ ಹೇಳಿದರೂ ಅವರು ಆ ಕೆಲಸ ಮಾಡುತ್ತಿಲ್ಲ. ನಮ್ಮವರಿಗೆ ಒಂದು ಕೆಲಸವನ್ನೂ ಕೊಡುತ್ತಿಲ್ಲ. ನಮ್ಮ ವಿರೋಧಿಗಳಿಗೆ ಕೆಲಸ ಕಾರ್ಯಗಳನ್ನು ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲರನ್ನೂ ಸರಿಪಡಿಸಿ ಕೊಂಡು ಒಟ್ಟಾಗಿ ಹೋಗುವುದಿದ್ದರೆ ಹೋಗಲಿ, ಇಲ್ಲದಿದ್ದರೆ ಇನ್ನು ಮುಂದೆ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ, ನಮ್ಮ ರಾಜಕೀಯ ನಾವು ಮಾಡುತ್ತೇವೆ, ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಕಿಡಿಕಾರಿದರು. ನನಗೆ ಯಾರೂ ಸಹಾಯ ಮಾಡಬೇಕಾದ ಅವಶ್ಯಕತೆ ಇಲ್ಲ, ಎರಡು ಮೂರು ಟ್ರಾನ್ಸ್‌ಫರ್‌ಗಳನ್ನು ಬಿಟ್ಟರೆ ನಾನಂತೂ ಯಾವ ಕೆಲಸವನ್ನೂ ಸಚಿವರಿಗೆ ಹೇಳಿಲ್ಲ. ಉತ್ತನೂರು ಶ್ರೀನಿವಾಸ್, ಆನಂದರೆಡ್ಡಿ,ನೀಲಕಂಠೇಗೌಡರು ಇವರನ್ನು ಕರೆದುಕೊಂಡು ಬಂದರು, ಇವತ್ತು ಅವರ ಮಾತಿಗೇ ಬೆಲೆ ಇಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

PREV
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!