ಸಮ್ಮಿಶ್ರ ಸರ್ಕಾರ: ಡಿ.9 ರವರೆಗೆ ಕಾಯ್ದು ನೋಡಿ

Published : Dec 06, 2019, 10:13 AM IST
ಸಮ್ಮಿಶ್ರ ಸರ್ಕಾರ: ಡಿ.9 ರವರೆಗೆ ಕಾಯ್ದು ನೋಡಿ

ಸಾರಾಂಶ

4 ತಿಂಗಳಿಂದ ಮಾಡಿದ ಕೆಲಸ ಖಂಡಿತವಾಗಿ ಜಯ ತರುತ್ತೆ: ಸತೀಶ ಜಾರಕಿಹೊಳಿ ವಿಶ್ವಾಸ|ಈ ಬಾರಿ ಖಂಡಿತವಾಗಿಯೂ ನೋಡುವಂತಹ ಉತ್ತರ ಬರುತ್ತದೆ| ಗೋಕಾಕ್ ಜನರು ಅಭಿವೃದ್ಧಿ ಬಯಸುತ್ತಾರೆ| ದುಡ್ಡು ಮಾಡಿದರೂ ಜನಶಕ್ತಿಯೇ ಅಂತಿಮ| ಗೋಕಾಕ್ ಮತಕ್ಷೇತ್ರ ಈ ಬಾರಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ|

ಗೋಕಾಕ್(ಡಿ.06): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಚಾರದಲ್ಲಿ ಡಿ.9 ರವರೆಗೆ ಕಾಯ್ದು ನೋಡಬೇಕು. ಈಗಲೇ ಮಾತನಾಡಿದರೇ ಟೂ ಅರ್ಲಿ ಆಗುತ್ತೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಬಿಜೆಪಿ ಕರೆ ತರುತ್ತೇನೆ ಎಂಬ ರಮೇಶ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರಮೇಶ್ ಬಗ್ಗೆ ಮಾತನಾಡುವುದು ಅವಶ್ಯಕತೆ ಇಲ್ಲ. ಡಿ.9ರ ಬಳಿಕ ಅವರಿಗೆ ಉತ್ತರ ಬರುತ್ತೆ. ಈ ಬಾರಿ ಖಂಡಿತವಾಗಿಯೂ ನೋಡುವಂತಹ ಉತ್ತರ ಬರುತ್ತದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಮೇಶ್ ಬಳಿ ಪಕ್ಷದ ದುಡ್ಡಿದೆ. ಬಾಲಚಂದ್ರ ಸಹ ಅವರ ಜೊತೆ ಸೇರಿದ್ದಾರೆ. ಜನರು ಗೋಕಾಕ್ ಅಭಿವೃದ್ಧಿ ಬಯಸುತ್ತಾರೆ. ದುಡ್ಡು ಮಾಡಿದರೂ ಜನಶಕ್ತಿಯೇ ಅಂತಿಮ. ಗೋಕಾಕ್ ಮತಕ್ಷೇತ್ರ ಈ ಬಾರಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಎಂದ ಅವರು, ಬೂತ್ ಮಟ್ಟದಲ್ಲಿ ಮತ್ತೊಂದು ಸುತ್ತು ನಮ್ಮ ಕಾರ್ಯ ಕರ್ತರನ್ನು ಭೇಟಿ ಮಾಡುತ್ತಿದ್ದೇವೆ. ಫಲಿತಾಂಶದ ಬಗ್ಗೆ ನಮಗೆ ವಿಶ್ವಾಸವಿದೆ. ಕಳೆದ ನಾಲ್ಕು ತಿಂಗಳಿಂದ ಮಾಡಿದ ಕೆಲಸ ಖಂಡಿತವಾಗಿ ಜಯ ತರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅರಬಾವಿ ಮತಕ್ಷೇತ್ರದ ಕೆಲವರು ಇನ್ನೂ ಗೋಕಾಕ್ ಮತಕ್ಷೇತ್ರದಲ್ಲಿದ್ದರು. ಹೀಗಾಗಿ ಅವರನ್ನು ಕಳೆದ ರಾತ್ರಿಯೇ ಹೊರ ಹಾಕುವಂತಹ ಕೆಲಸ ಮಾಡಿದ್ದೇವೆ. ಈ ಮತಕ್ಷೇತ್ರಕ್ಕೂ ಸಂಬಂಧವಿಲ್ಲ. ಮತದಾರರು ಅಲ್ಲ. ಅಂತವರನ್ನು ಹೊರ ಹಾಕುವ ಕೆಲಸ ಮಾಡಿದ್ದೇವೆ. ಎಲ್ಲ ಊರಲ್ಲಿ ಬಾಲ ಚಂದ್ರ ಬೆಂಬಲಿಗರು ಇದ್ದರೂ ರಾತ್ರಿಯಿಡಿ ಹೊರ ಹಾಕುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.   
 

PREV
click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!