ಕಡಿಮೆ ಲಸಿಕೆ ನೀಡಿ ದೊಡ್ಡ ಪ್ರಚಾರ ಪಡೆಯುತ್ತಿರುವ ಬಿಜೆಪಿ: ಲಾಡ್‌

By Kannadaprabha NewsFirst Published Jul 1, 2021, 10:32 AM IST
Highlights

* ಬಡವರಿಗೆ ಆಹಾರ ಧಾನ್ಯ ವಿತರಿಸಿದ ಮಾಜಿ ಸಚಿವ ಸಂತೋಷ ಲಾಡ್‌
* ಸರ್ಕಾರ ಪ್ರಚಾರ ಬಿಟ್ಟು ಎಲ್ಲರಿಗೂ ಲಸಿಕೆ ಹಾಕುವ ಕಾರ್ಯ ಮಾಡಲಿ
* ಬಡಕಾರ್ಮಿಕರನ್ನು ತೊಂದರೆಗೀಡು ಮಾಡಿದ ಕೊರೋನಾ 

ಅಳ್ನಾವರ(ಜು.01):  ಕೋವಿಡ್‌ ರೋಗಕ್ಕೆ ತುತ್ತಾದ ಜಗತ್ತಿನ ಎಲ್ಲ ದೇಶಗಳು ತಮ್ಮ ಜನರಿಗೆ ಉಚಿತವಾಗಿಯೇ ಲಸಿಕೆ ನೀಡುತ್ತಿದ್ದು, ಕೇಂದ್ರ, ರಾಜ್ಯ ಸರ್ಕಾರಗಳು ಕಡಿಮೆ ಪ್ರಮಾಣದ ಲಸಿಕೆ ಹಾಕಿ ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸುತ್ತುವೆ ಎಂದು ಮಾಜಿ ಸಚಿವ ಸಂತೋಷ ಲಾಡ್‌ ವ್ಯಂಗ್ಯವಾಡಿದ್ದಾರೆ. 

ಪಟ್ಟಣದಲ್ಲಿ ಉಚಿತ ಆಹಾರ ಧಾನ್ಯ ವಿತರಣೆ ಮಾಡಿದ ಅವರು, ಲಸಿಕಾಕರಣ ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಬೇಕಿದ್ದು ಪ್ರಚಾರ ಬಿಟ್ಟು ಎಲ್ಲರಿಗೂ ಲಸಿಕೆ ಹಾಕುವ ಕಾರ್ಯ ಮಾಡಲಿ. ಜನರು ಸಹ ತಡ ಮಾಡದೇ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಕೊರೋನಾ ರೋಗದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

ಸಂತೋಷ್‌ ಲಾಡ್‌ ಕುಟುಂಬದಿಂದ ಭೂ ಕಬಳಿಕೆ ಆರೋಪ 

ಕೋವಿಡ್‌ ಎರಡನೇ ಅಲೆಯು ಬಡಕಾರ್ಮಿಕರನ್ನು ತೊಂದರೆಗೀಡು ಮಾಡಿದೆ. ಇಂತಹ ಸಂದರ್ಭದಲ್ಲಿ ಜನರ ಬೆನ್ನೆಲುಬಾಗಿ ನಿಲ್ಲಬೇಕಾಗಿರುವುದು ನಮ್ಮ ಧರ್ಮ. ಜನಗಳ ಸೇವೆ ಮಾಡುವುದು ನನ್ನ ಕಾರ್ಯವಾಗಿದೆ. ಹುಟ್ಟೂರಾದ ಬಳ್ಳಾರಿಯ ಸಂಡೂರು ಮತ್ತು ಕಲಘಟಗಿ ಮತಕ್ಷೇತ್ರದಲ್ಲಿಯೂ 1.20 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದೇನೆ. ಅದರಲ್ಲೂ ಅಳ್ನಾವರ ತಾಲೂಕಿನಲ್ಲಿ 15 ಸಾವಿರ ಕುಟುಂಬಗಳಿಗೆ ಕಿಟ್‌ಗಳನ್ನು ವಿತರಿಸಲಾಗಿದೆ. ಇನ್ಮುಂದೆ ಕ್ಷೇತ್ರದಲ್ಲಿಯೇ ಉಳಿದು ಇಲ್ಲಿಯ ಜನರು ಸೇವೆಗೆ ಅಣಿಯಾಗುತ್ತೇನೆ. ಕ್ಷೇತ್ರದಲ್ಲಿ ತೀರಾ ಬಡತನದಲ್ಲಿರುವ ಕುಟುಂಬಗಳಿಗೆ ಎರಡು ತಿಂಗಳಿಗಾಗುವಷ್ಟುಆಹಾರ ಧಾನ್ಯ ನೀಡಲು ಚಿಂತಿಸಿದ್ದೇನೆ ಎಂದರು.

ಈ ವೇಳೆ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶಗೌಡ ಕರಿಗೌಡರ, ಪಪಂ ಸದಸ್ಯ ರೂಪೇಶ ಗುಂದಕಲ್ಲ, ಮಧು ಬಡಸ್ಕರ, ರಮೇಶ ಕುನ್ನೂರಕರ, ಭಾಗ್ಯವತಿ ಕುರಬರ, ಶ್ರೀಕಾಂತ ಗಾಯಕವಾಡ, ಸುವರ್ಣ ಕಡಕೋಳ, ಅನ್ವರಖಾನ ಬಾಗೇವಾಡಿ, ಪರಶುರಾಮ ಬೇಕ್ನೆಕರ, ಸತ್ತಾರ ಭಾತಖಂಡೆ, ಆಕಾಶ ಜನಕಾಟಿ ಇದ್ದರು.
 

click me!