'ಯಾವ ಸಮಸ್ಯೆಯಾದ್ರೂ ಡಿಕೆಶಿ ಎದುರಿಸ್ತಾರೆ, BJP ಪಶ್ಚಾತಾಪ ಪಡುವ ದಿನ ಮುಂದಿವೆ'

Published : Sep 04, 2019, 09:55 AM ISTUpdated : Sep 04, 2019, 10:29 AM IST
'ಯಾವ ಸಮಸ್ಯೆಯಾದ್ರೂ ಡಿಕೆಶಿ ಎದುರಿಸ್ತಾರೆ, BJP ಪಶ್ಚಾತಾಪ ಪಡುವ ದಿನ ಮುಂದಿವೆ'

ಸಾರಾಂಶ

ಬಿಜೆಪಿ ದ್ವೇಷದ ರಾಜಕಾರಣ ಮಡ್ತಿದೆ. ಇಡಿ ಹಾಗೂ ಐಟಿ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂಬುದು ಬಿಜೆಪಿಯ ಭ್ರಮೆ ಅಷ್ಟೇ ಎಂದು ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಹೇಳಿದ್ದಾರೆ. ಬಿಜೆಪಿ ತನ್ನ ದ್ವೇಷದ ರಾಜಕಾರಣಕ್ಕೆ ಮುಂದೆ ಒಂದು ದಿನ ಪಶ್ಚಾತ್ತಾಪ ಪಡಬೇಕಾದ ಅನಿವಾರ್ಯ ಸ್ಥಿತಿ ಬಂದೇ ಬರುತ್ತದೆ ಎಂದು ಹೇಳಿದ್ದಾರೆ.

ಮಂಡ್ಯ(ಸೆ.04): ರಾಷ್ಟ್ರದಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ. ವಿರೋಧ ಪಕ್ಷವನ್ನು ಬಗ್ಗು ಬಡಿಯಲು ಇಡಿ ಹಾಗೂ ಐಟಿ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂಬುದು ಕೇವಲ ಭ್ರಮೆ ಅಷ್ಟೇ ಎಂದು ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಪ್ರತಿಕ್ರಿಯೆ ನೀಡಿದದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಪುಟ್ಟರಾಜು, ಬಿಜೆಪಿ ತನ್ನ ದ್ವೇಷದ ರಾಜಕಾರಣಕ್ಕೆ ಮುಂದೆ ಒಂದು ದಿನ ಪಶ್ಚಾತ್ತಾಪ ಪಡಬೇಕಾದ ಅನಿವಾರ್ಯ ಸ್ಥಿತಿ ಬಂದೇ ಬರುತ್ತದೆ ಎಂದು ಹೇಳಿದ್ದಾರೆ.

ಡಿಕೆಶಿ ಕಣ್ಣೀರು ಹಾಕಿದ್ರು:

ನಾನು ಸೋಮವಾರ ರಾತ್ರಿ ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಅವರು ಕಣ್ಣೀರು ಹಾಕಿದ್ದಾರೆ. ಈ ಸಂಗತಿ ನಂಗೆ ತುಂಬಾ ಬೇಸರ ತರಿಸಿತು. ಇದಕ್ಕಾಗಿ ನಾನು ದೆಹಲಿಗೆ ಹೋಗಿ ನೋಡಿಕೊಂಡು ಬಂದೆ. ಡಿಕೆಶಿ ಚೆನ್ನಾಗಿ ಇದ್ದಾರೆ.

ಡಿಕೆಶಿ ಧೈರ್ಯವಂತರು:

ಅವರು ತುಂಬಾ ಧೈರ್ಯವಂತರು. ನಾನು ಎಲ್ಲವನ್ನೂ ಕಾನೂನು ಬದ್ಧವಾಗಿಯೇ ಮಾಡಿದ್ದೇನೆ. ಹೆದರಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಡಿಕೆಶಿ ಯಾವುದೇ ಸಮಸ್ಯೆ ಬಂದರೂ ಕೂಡ ಎದುರಿಸುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಪುಟ್ಟರಾಜು ಹೇಳಿದರು.

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?