ಯಾವ ಜಾತಿಗೆ ಏನು ಸಿಗಬೇಕೋ, ಎಷ್ಟು ಸೌಲಭ್ಯ ಸಿಗಬೇಕೋ ಅದು ಅವರವರ ಹಕ್ಕು. ಸಂವಿಧಾನ ಬದ್ಧವಾಗಿ ಎಲ್ಲರಿಗೂ ಸಿಗಬೇಕು, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದು ಜನಸಂಖ್ಯೆಯ ಅನುಗುಣವಾಗಿ ದೊರಕಲಿ ಎಂದರ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ
ಗದಗ(ಡಿ.24): ಜಾತಿ ಜನಗಣತಿಯನ್ನು ನಾಲ್ಕು ಗೋಡೆಗಳ ಮಧ್ಯೆ ನಡೆಸಲಾಗಿದೆ. ಅದರಲ್ಲಿಯೂ ಲಿಂಗಾಯತ ಸಮುದಾಯವನ್ನು ಗುರಿಯಾಗಿರಿಸಿಕೊಂಡೇ ಜಾತಿಗಣತಿ ಮಾಡಿದ್ದು, ಅದನ್ನು ಬಲವಾಗಿ ವಿರೋಧಿಸುತ್ತೇವೆ. ಈಗಾಗಲೇ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಸಹಿ ಸಂಗ್ರಹ ಚಳವಳಿ ಆರಂಭವಾಗಿದೆ ನಾನು, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಜಾತಿ ಗಣತಿ ವಿರೋಧಿಸಿ ಸಹಿ ಹಾಕಿದ್ದೇವೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಯಾವ ಜಾತಿಗೆ ಏನು ಸಿಗಬೇಕೋ, ಎಷ್ಟು ಸೌಲಭ್ಯ ಸಿಗಬೇಕೋ ಅದು ಅವರವರ ಹಕ್ಕು. ಸಂವಿಧಾನ ಬದ್ಧವಾಗಿ ಎಲ್ಲರಿಗೂ ಸಿಗಬೇಕು, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದು ಜನಸಂಖ್ಯೆಯ ಅನುಗುಣವಾಗಿ ದೊರಕಲಿ ಎಂದರು.
ಜಾತಿ ಗಣತಿ ಬಗ್ಗೆ ಅನುಮಾನ: ಸಿದ್ದರಾಮಯ್ಯಗೆ ಸಚಿವ ಈಶ್ವರ ಖಂಡ್ರೆ ಮನವಿ
ಅದಕ್ಕಾಗಿ ಹೊಸದಾಗಿ ಜಾತಿಗಣತಿಯಾಗಬೇಕು ಎನ್ನುವುದು ನಮ್ಮ ಬಲವಾದ ಆಗ್ರಹ ಎಂದು ಅವರು ಖಚಿತವಾಗಿ ಹೇಳಿದರು.