Bengaluru ಮಕ್ಕಳ ವಯಸ್ಸಿನ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿದ ಅಯೂಬ್ ಅಂಕಲ್ ಅರೆಸ್ಟ್

By Sathish Kumar KH  |  First Published Jul 8, 2024, 7:44 PM IST

ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನ ಬಳಿ ಸ್ಕೂಟರ್‌ನಲ್ಲಿ ಹೋಗುವಾಗ ಕಾಲೇಜು ಹುಡುಗಿಯರು ಪಾದಾಚಾರಿ ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಜು.08): ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನ (Bengaluru VV Pural College) ಬಳಿ ಸ್ಕೂಟರ್‌ನಲ್ಲಿ ಹೋಗುವಾಗ ಕಾಲೇಜು ಹುಡುಗಿಯರು ಪಾದಾಚಾರಿ ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ (flashes his penis to female students) ವಿಕೃತಿ ಮೆರೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು, ಬೆಂಗಳೂರಲ್ಲಿ ಕಾಮುಕನ ಅಟ್ಟಹಾಸ ಕಂಡು ಕಾಲೇಜು ಯುವತಿಯರು ಬೆಚ್ಚಿ ಬಿದ್ದಿದ್ದರು. ಸ್ಕೂಟರ್‌ನಲ್ಲಿ ಹೋಗುವಾಗ ಕಾಲೇಜು ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದನು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಈ ವ್ಯಕ್ತಿ ಯುವತಿಯರು ಹೆಚ್ಚಾಗಿರುವ ಕಾಲೇಜು ಟಾರ್ಗೆಟ್ ಮಾಡಿಕೊಂಡು ಅಲ್ಲಿಗೆ ಹೋಗಿ ಈ ರೀತಿ ವಿಕೃತ ವರ್ತನೆ ತೋರುತ್ತಿದ್ದನು. ಬೆಂಗಳೂರಿನಲ್ಲಿ ಮಹಿಳಾ ಕಾಲೇಜುಗಳ ಬಳಿ ಹೋಗಿ ಹೆಚ್ಚಾಗಿ ವಿದ್ಯಾರ್ಥಿನಿಯರು ಓಡಾಡುವ ಸ್ಥಳಗಳನ್ನು ಟಾರ್ಗೆಟ್ ಮಾಡಿ ಅಲ್ಲಿ ತನ್ನ ಸ್ಕೂಟರ್ ನಿಲ್ಲಿಸುತ್ತಿದ್ದನು.

Tap to resize

Latest Videos

undefined

ಕಾಲೇಜಿಗೆ ಹೋಗುವ ಮತ್ತು ಕಾಲೇಜಿನಿಂದ ವಾಪಸ್ ಒಬ್ಬಂಟಿಯಾಗಿ ಅಥವಾ ಗುಂಪು ಗುಂಪಾಗಿ ಕಾಲೇಜು ಯುವತಿಯರು ನಡೆದುಕೊಂಡು ಹೋಗುವಾಗ ಸ್ಕೂಟರ್‌ನಲ್ಲಿಯೇ ಕುಳಿತುಕೊಂಡು ತನ್ನ ಮರ್ಮಾಂಗವನ್ನು ಹೊರಗೆ ತೆಗೆದು ತೋರಿಸಿ ವಿಕೃತವಾಗಿ ನಡೆದುಕೊಳ್ಳುತ್ತಿದ್ದನು. ಇನ್ನು ಹಲವು ಯುವತಿಯರು ಸೇರಿ ಯಾರಾದರೂ ಪುರುಷರ ಸಹಾಯ ಪಡೆದು ಆತನನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಅಲ್ಲಿಂದ ಪರಾರಿ ಆಗುತ್ತಿದ್ದನು.

ಬೆಂಗಳೂರು ಕಾಲೇಜು ಹುಡುಗಿಯರ ಮುಂದೆ ಪ್ಯಾಂಟ್‌ ಜಿಪ್ ತೆಗೆದು ಪ್ರೈವೇಟ್ ಪಾರ್ಟ್ ತೋರಿಸಿದ ಕಾಮುಕನ ವೀಡಿಯೋ!

ನಿನ್ನೆ ಮಧ್ಯಾಹ್ನ ವಿವಿ ಪುರಂನಲ್ಲಿರುವ ಕಾಲೇಜಿನ ಬಳಿ ಸ್ಕೂಟರ್ ನಿಲ್ಲಿಸಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮರ್ಮಾಂಗ ತೋರಿಸುವ ಕೃತ್ಯವನ್ನು ಯುವತಿಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಅದನ್ನು ಪೊಲೀಸರಿಗೆ ಕೊಟ್ಟು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ವಿ.ವಿ. ಪುರಂ ಪೊಲೀಸರು ಈ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಹಲವು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಸೋಮವಾರ ಸಂಜೆ ವೇಳೆಗೆ ಕಾಮುಕನನ್ನು ಹಿಡಿದಿದ್ದಾರೆ.

ಕಾಲೇಜು ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ವಿವಿಪುರಂ ಪೊಲೀಸರು, 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಮರ್ಮಾಂಗ ತೋರಿಸುತ್ತಿದ್ದ ವ್ಯಕ್ತಿ ಯುವಕನಲ್ಲ, ಈತ ಅಯೂಬ್ ಉರ್ ರೆಹಮಾನ್ (Ayub ur Rehman) ಎಂಬ 48 ವರ್ಷದ ಅಂಕಲ್. ತನಗೆ ಮಕ್ಕಳ ವಯಸ್ಸಿನ ವಿದ್ಯಾರ್ಥಿನಿಯರ ಮುಂದೆ ಹೀಓಗೆ ಅಶ್ಲೀಲವಾಗು ನಡೆದುಕೊಂಡಿದ್ದಾರೆ.

ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು; ನಿವೇದಿತಾ ಗೌಡಗೆ ಇದೆಂಥಾ ಕಾಮೆಂಟ್!

ಇನ್ನು ಬಂಧಿರ ಆರೋಪಿ ಅಯೂಬ್ ಉರ್ ರೆಹೆಮಾನ್ ಕಲಾಸಿಪಾಳ್ಯದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದಾನೆ. ಆಗಾಗ ಬೈಕ್ ನಲ್ಲಿ ಬಂದು ಅಸಭ್ಯ ವರ್ತನೆ ಮಾಡಿ ಎಸ್ಕೇಪ್ ಆಗುತ್ತಿದ್ದನು. ಇನ್ನು ಪೊಲೀಸರು ಬಂಧಿಸಿ ಹೀಗೆಲ್ಲಾ ಮಾಡುತ್ತಿದ್ದಕ್ಕೆ ಕಾರಣವೇನು ಎಂದು ಕೇಳಿದರೆ, ನಾನು ಏನ್ ಮಾಡಿದ್ನೋ ನಂಗೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟಿದ್ದಾನೆ. ಸದ್ಯ ವಿವಿ ಪುರಂ ಪೊಲೀಸರಿಂದ ಆರೋಪಿ ಅಯೂಬ್‌ನನ್ನು ವಿಚಾರಣೆ ಮಾಡಲಾಗುತ್ತಿದೆ.

click me!