ಜಮೀರ್ ಅಹ್ಮದ್‌ ಪಾಕ್‌ನಲ್ಲಿ ಇದ್ದಾನೋ, ಹಿಂದುಸ್ತಾನದಲ್ಲಿ ಇದ್ದಾನೋ: ಅವನು ಸಚಿವನಾಗಲು ಅಯೋಗ್ಯ, ಈಶ್ವರಪ್ಪ

By Girish GoudarFirst Published Oct 30, 2024, 5:03 PM IST
Highlights

ರಾಜ್ಯದಲ್ಲಿ ಸಾಂಕೇತಿಕವಾಗಿ ಹಿಂದುಪರ ವ್ಯಕ್ತಿಗಳು ಹೋರಾಟ ಮಾಡಿದ್ದಾರೆ.‌ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೇ ನೋಟೀಸ್ ಕೊಟ್ಟಿದ್ದಾರಾ?. ಜಮೀರ್ ಅಹ್ಮದ್‌ ಅವನು ಪಾಕಿಸ್ತಾನದಲ್ಲಿ ಇದ್ದಾನೋ, ಹಿಂದುಸ್ತಾನದಲ್ಲಿ ಇದ್ದಾನೋ. ಜಮೀರ್ ಅಹ್ಮದ್‌ ಮಂತ್ರಿಯಾಗಲು ಅಯೋಗ್ಯ ಇದ್ದಾನೆ. ಮೊದಲು ಅವನನ್ನು ಕಿತ್ತು ಬಿಸಾಕಿ ಎಂದ ಈಶ್ವರಪ್ಪ 
 

ಶಿವಮೊಗ್ಗ(ಅ.30):  ರಾಜ್ಯದಲ್ಲಿ ಇರೋದು ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರ ಅನ್ನಲ್ಲ. ರಾಜ್ಯದಲ್ಲಿ ಇರೋದು ಮುಸ್ಲಿಂ ಸರ್ಕಾರ, ಜಮೀರ್ ಅಹ್ಮದ್‌ ಸರ್ಕಾರ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಆಕ್ತೋಶ ವ್ಯಕ್ತಪಡಿಸಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಮಠ ಮಾನ್ಯಗಳ ಆಸ್ತಿ, ದೇವಸ್ಥಾನದ ಆಸ್ತಿ ವಕ್ಫ್‌ ಅಂತಾ ಬರೆಸುತ್ತಾರಲ್ಲ ಎಷ್ಟು ಸೊಕ್ಕು ಇರಬೇಕು. ನಿಮ್ಮ ನೋಟೀಸ್ ಗೆ ಏನು ಬೆಲೆ ಇದೆ? 2018 ರಲ್ಲಿ ಯರಕಲ್ ಸಿದ್ದರಾಮ ಮಠಕ್ಕೆ ವಕ್ಫ್ ಆಸ್ತಿ ಅಂತಾ ನೋಟೀಸ್ ಕೊಡ್ತಿದ್ದಾರೆ. ವಕ್ಫ್ ಅಧಿಕಾರಿಗಳಿಗೆ ಜಮೀರ್ ಅಹಮದ್ ನೇ ಸಿಎಂ ಆಗಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

Latest Videos

ಮಠ, ದೇವಾಲಯಗಳ ಆಸ್ತೀಲೂ ವಕ್ಫ್‌ ಹೆಸರು: ಸೋಮೇಶ್ವರ, ಬೀರೇಶ್ವರ ದೇಗುಲಕ್ಕೂ ಸಂಕಷ್ಟ

ರಾಜ್ಯದಲ್ಲಿ ಸಾಂಕೇತಿಕವಾಗಿ ಹಿಂದುಪರ ವ್ಯಕ್ತಿಗಳು ಹೋರಾಟ ಮಾಡಿದ್ದಾರೆ.‌ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೇ ನೋಟೀಸ್ ಕೊಟ್ಟಿದ್ದಾರಾ?. ಜಮೀರ್ ಅಹ್ಮದ್‌ ಅವನು ಪಾಕಿಸ್ತಾನದಲ್ಲಿ ಇದ್ದಾನೋ, ಹಿಂದುಸ್ತಾನದಲ್ಲಿ ಇದ್ದಾನೋ. ಜಮೀರ್ ಅಹ್ಮದ್‌ ಮಂತ್ರಿಯಾಗಲು ಅಯೋಗ್ಯ ಇದ್ದಾನೆ. ಮೊದಲು ಅವನನ್ನು ಕಿತ್ತು ಬಿಸಾಕಿ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಠ ಮಂದಿರ, ದೇವಸ್ಥಾನ, ಸಾಧು ಸಂತರ ಆಸ್ತಿ ವಾಪಸ್ ಕೊಡಿ. ಬೀರೇ ದೇವರು ಕುರುಬರ ದೇವರು ಅಲ್ವಾ. ದಲಿತರು, ಕುರುಬರು ನಿಮಗೆ ಓಟು ಹಾಕಿಲ್ವಾ?, ರಾಷ್ಟ್ರದ್ರೋಹಿ ಜಮೀರ್ ಅಹಮದ್ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು. ಅಪ್ಪಿತಪ್ಪಿ ಹಿಂದುಸ್ತಾನದಲ್ಲಿ ಹುಟ್ಟಿದ್ದಾನೆ. ಬೀರ ದೇವರ ಗುಡಿಯನ್ನು ಕುರುಬರಿಗೆ ಉಳಿಸಿಕೊಡಿ, ಮುಸ್ಲಿಂರಿಗೆ ಕೊಡಬೇಡಿ. ನಿಮಗೆ ರೈತರ, ಬೀರ ದೇವರ ಶಾಪ ತಟ್ಟುತ್ತದೆ. ಶಾಪ ತಟ್ಟಬಾರದು ಅಂದ್ರೆ ರೈತರ ಭೂಮಿ ಉಳಿಸಿಕೊಡಿ. ಚಾಮುಂಡೇಶ್ವರಿ, ಸವದತ್ತಿ ಯಲ್ಲಮ್ಮ, ಹಾಸನಾಂಬೆ ಆಶೀರ್ವಾದ ನಿಮಗೆ ಸಿಗಬೇಕು ಅಂದ್ರೆ ನೀವು ರೈತರ ಭೂಮಿ‌ ಬಿಡಿಸಿಕೊಡಿ. ಇಲ್ಲದಿದ್ದರೆ ದೇವರ ಶಾಪ ತಟ್ಟುತ್ತದೆ, ಜೈಲಿಗೆ ಹೋಗಬೇಕಾಗುತ್ತದೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಉಪ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು, ರೈತರ ಆಸ್ತಿ ಬಿಟ್ಟು ಹೋಗಬಾರದು ಅಂದ್ರೆ‌ ಕಾಂಗ್ರೆಸ್ ಸೋಲಿಸಿ. ಹಿಂದುಪರ ಇರುವ ವ್ಯಕ್ತಿಗಳಿಗೆ ಮತ ಹಾಕಿ ಎಂದು ಈಶ್ವರಪ್ಪ ಕರೆ ನೀಡಿದ್ದಾರೆ. 

click me!