ಅನರ್ಹ ಶಾಸಕ ಆನಂದ್ ಸಿಂಗ್ ಮಾರಾಟವಾದ ವ್ಯಕ್ತಿ: ಸಿದ್ದರಾಮಯ್ಯ

By Web Desk  |  First Published Nov 28, 2019, 11:57 AM IST

ಅಕ್ರಮ ಗಣಿಗಾರಿಕೆ ವಿಷಯದಲ್ಲಿ ನಾನೇ ಆನಂದ್ ಸಿಂಗ್ ಗೆ ಬೈದಿದ್ದೆ|  ನಾನೇ ಪಕ್ಷಕ್ಕೆ ಕರೆದುಕೊಂಡು ಬಂದು ಗೆಲ್ಲಿಸಿದ್ದೆ| ಆದ್ರೆ ಆನಂದ್ ಸಿಂಗ್ ನಂಬಿಸಿ ಮೋಸ ಮಾಡುತ್ತಾರೆ ಅಂದು ಕೊಂಡಿರಲಿಲ್ಲ| ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ| ರಾಜ್ಯದ ಎಲ್ಲ 15 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ| ನಿರೀಕ್ಷೆಗೂ ಮೀರಿ ಜನ ನಮಗೆ ವೋಟ್ ಮಾಡಲಿದ್ದಾರೆ ಎಂದ ಸಿದ್ದರಾಮಯ್ಯ|


ಬಳ್ಳಾರಿ(ನ.28): ಜಿಲ್ಲೆಯ ವಿಜಯನಗರ ಕ್ಷೇತ್ರದ ಬಿಜೆಪಿ ಹಾಗೂ ಅನರ್ಹ ಶಾಸಕ ಆನಂದ್ ಸಿಂಗ್ ಮಾರಾಟವಾಗಿದ್ದಾರೆ. ಅವರು ನಂಬಿಸಿ ನಮಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಗುರುವಾರ ಜಿಲ್ಲೆಯ ಜಿಂದಾಲ್ ಏರ್ಪೋರ್ಟ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿಷಯದಲ್ಲಿ ನಾನೇ ಆನಂದ್ ಸಿಂಗ್ ಗೆ ಬೈದಿದ್ದೆ, ಆದ್ರೆ ನ ಎಲ್ಲವನ್ನು ಬಿಟ್ಟು ತಿದ್ದಿಕೊಳ್ಳುವೆ ಎಂದು ಹೇಳಿದ್ದರು. ಹೀಗಾಗಿ ನಾನೇ ಪಕ್ಷಕ್ಕೆ ಕರೆದುಕೊಂಡು ಬಂದು ಗೆಲ್ಲಿಸಿದ್ದೆ, ಆದ್ರೆ ಆನಂದ್ ಸಿಂಗ್ ನಂಬಿಸಿ ಮೋಸ ಮಾಡುತ್ತಾರೆ ಅಂದು ಕೊಂಡಿರಲಿಲ್ಲ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದ ಎಲ್ಲ 15 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನಿರೀಕ್ಷೆಗೂ ಮೀರಿ ಜನ ನಮಗೆ ಓಟ ಮಾಡಲಿದ್ದಾರೆ ಎಂದು ಹೇಳಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತ್ಯೇಕವಾಗಿ ನಾನು ಎಲ್ಲರ ಜೊತೆನೂ ಮಾತನಾಡಿದ್ದೆ, ಆದ್ರೆ ಪಕ್ಷಕ್ಕೆ ದ್ರೋಹ ಮಾಡುತ್ತಾರೆ ಅಂದುಕೊಂಡಿರಲಿಲ್ಲ ಎಂದು ಎಲ್ಲ ಅನರ್ಹ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. 

ಪಾಪ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಅವರು 15 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಅವರು ಶಾಸಕರನ್ನು ಖರೀದಿ ಮಾಡಿದ್ದಾರೆ ಹೀಗಾಗಿ ಗೆಲ್ಲುತ್ತೇವೆ ಎನ್ನುತ್ತಾರೆ. ಆದರೆ, ಎಲ್ಲ ಕ್ಷೇತ್ರಗಳಲ್ಲಿ ನಾವೇ ಗಲ್ಲೋದು ಎಂದು ಹೇಳಿದ್ದಾರೆ. 

ಹಿರೇಕೆರೂರು ಕ್ಷೇತ್ರದ ಬಿಜೆಇ ಅಭ್ಯರ್ಥಿ ಬಿ.ಸಿ. ಪಾಟೀಲ್ ಗೆ ಇತಿಹಾಸ ಗೊತ್ತಿದೆಯಾ? ಪಕ್ಷಾಂತರ ಬೇರೆ ಉಚ್ಚಾಟನೆ ಬೇರೆ, ಅದು ಬಿ ಸಿ ಪಾಟೀಲ್ ಗೆ ಗೊತ್ತಾ? 2005 ರಲ್ಲಿ ಧರ್ಮಸಿಂಗ್ ಸಿಎಂ ಇದ್ದಾಗ, ನಾನು ಉಪಮುಖ್ಯಮಂತ್ರಿ ಆಗಿದ್ದೆ, ಆಗ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ರು, ಉಚ್ಚಾಟನೆ ಮಾಡಿದಕ್ಕೆ ನಾನು ಅಹಿಂದ ಸಂಘಟನೆ ಮಾಡುತಿದ್ದೆ, ಬಳಿಕ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಹೇಳಿದ್ದರು. ಹೀಗಾಗಿ ಒಂದು  ವರ್ಷದ ಬಳಿಕ ನಾನು ಕಾಂಗ್ರೆಸ್ ಸೇರಿಕೊಂಡೆ. ಇದನ್ನು ಮೊದಲು ಬಿ.ಸಿ ಪಾಟೀಲ್ ತಿಳಿದುಕೊಳ್ಳಲಿ. ಜನ ಪಕ್ಷಾಂತರ ಮಾಡಿದ 15 ಅನರ್ಹ ಶಾಸಕರಿಗೆ ಜನ್ನ ತಕ್ಕ ಪಾಠ ಕಲಿಸುತ್ತಾರೆ. ಜನ ಇವರು ಆಡಿದ ನಾಟಕ ನೋಡಿದ್ದಾರೆ. ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!