ಹೊಸಪೇಟೆ: ಕಾಂಗ್ರೆಸ್‌ ಅಭ್ಯರ್ಥಿ ಘೋರ್ಪಡೆ ಪರ ಸಿದ್ದರಾಮಯ್ಯ ಪ್ರಚಾರ

By Web Desk  |  First Published Nov 28, 2019, 8:39 AM IST

ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ| ಬೆಳಗ್ಗೆ 10 ಗಂಟೆಗೆ ಗಾದಿಗನೂರು ಗ್ರಾಮಕ್ಕೆ ತೆರಳಿ ಮತಯಾಚಿಸಲಿದ್ದಾರೆ| ಬೆಳಗ್ಗೆ 11.45ಕ್ಕೆ ಪಾಪಿನಾಯನಕಹಳ್ಳಿ, ಮಧ್ಯಾಹ್ನ 2 ಗಂಟೆಗೆ ಮಲಪನಗುಡಿ ಗ್ರಾಮ, ಸಂಜೆ 4.30ಕ್ಕೆ ಕಮಲಾಪುರ ಸಂಜೆ 6.30ಕ್ಕೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ| ಈ ಸಭೆಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ|


ಹೊಸಪೇಟೆ(ನ.28): ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ ಪರ ಪ್ರಚಾರ ನಡೆಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಗುರುವಾರ) ನಗರಕ್ಕೆ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದ್ದಾರೆ. 

ಈ ಕುರಿತು ಮಾಹಿತಿ ನೀಡಿದ ಅವರು, ವಿಶೇಷ ಹೆಲಿಕ್ಯಾಪ್ಟರ್‌ ಮೂಲಕ ಜಿಂದಾಲ್‌ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 9 ಗಂಟೆಗೆ ಆಗಮಿಸುವರು. ಬೆಳಗ್ಗೆ 10 ಗಂಟೆಗೆ ಗಾದಿಗನೂರು ಗ್ರಾಮಕ್ಕೆ ತೆರಳಿ ಮತಯಾಚಿಸಲಿದ್ದಾರೆ. ಬೆಳಗ್ಗೆ 11.45ಕ್ಕೆ ಪಾಪಿನಾಯನಕಹಳ್ಳಿ ಗ್ರಾಮ, ಮಧ್ಯಾಹ್ನ 2 ಗಂಟೆಗೆ ಮಲಪನಗುಡಿ ಗ್ರಾಮ, ಸಂಜೆ 4.30ಕ್ಕೆ ಕಮಲಾಪುರ ಸಂಜೆ 6.30ಕ್ಕೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಈ ಸಭೆಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಧಾನ ಪರಿಷತ್‌ ಸದಸ್ಯ ಭೋಸರಾಜ್‌, ಶಾಸಕರಾದ ಭೀಮಾನಾಯ್ಕ, ರಘುಮೂರ್ತಿ, ಮಾಜಿ ಶಾಸಕ ಗೋವಿಂದಪ್ಪ ಮುಖಂಡರಾದ ಎಚ್‌.ಎನ್‌. ಇಮಾಮ್‌ ನಿಯಾಜಿ ಇತರರಿದ್ದರು.
ದಿಢೀರ್‌ ಪ್ರತ್ಯಕ್ಷರಾದ ಶಾಸಕ ಭೀಮಾನಾಯ್ಕ

ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರೆಲ್ಲರೂ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದರೂ ಈವರೆಗೆ ಕಾಣಿಸಿಕೊಳ್ಳದ ಹಗರಿಬೊಮ್ಮನಹಳ್ಳಿ ಶಾಸಕ ಎಸ್‌. ಭೀಮಾನಾಯ್ಕ ಬುಧವಾರ ಕಾಂಗ್ರೆಸ್‌ ಸುದ್ದಿಗೋಷ್ಠಿಯಲ್ಲಿ ದಿಢೀರ್‌ ಪ್ರತ್ಯಕ್ಷವಾದರು. ನಾನು ಅನಾರೋಗ್ಯ ಕಾರಣದಿಂದ ಕೇರಳದಲ್ಲಿ ಪ್ರಾಕೃತಿಕ ಚಿಕಿತ್ಸೆ ಪಡೆಯುತ್ತಿದ್ದೆ. ಈ ಉಪಚುನಾವಣೆ ಆರಂಭದಿಂದಲೂ ಭಾಗವಹಿಸಲು ಸಾಧ್ಯವಾಗಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

click me!